ಪೊದೆಯಲ್ಲಿ ಬಿಸಾಡಿದ್ದ ನವಜಾತ ಹೆಣ್ಣು ಮಗು ರಕ್ಷಿಸಿ ದತ್ತು ಪಡೆದ ಪೊಲೀಸ್ ಅಧಿಕಾರಿ!
ಪೊದೆಯಲ್ಲಿ ಬಿಸಾಡಿದ್ದ ನವಜಾತ ಮಗುವನ್ನು ರಕ್ಷಿಸಿದ ಸಬ್ ಇನ್ಸ್ಪೆಕ್ಟರ್ , ಮಗುವಿನ ಪೋಷಕರಿಗಾಗಿ ಭಾರಿ ಹುಡುಕಾಟ ನಡೆಸಿ ವಿಫಲರಾಗಿದ್ದಾರೆ.
ಮಗುವಿನ ಪೋಷಕರು ಸಿಗದಿದ್ದಾಗ, ಪೊದೆಯಲ್ಲಿ ಸಿಕ್ಕ ಮಗುವನ್ನು ತಾವೇ ದತ್ತು ಪಡೆದುಕೊಂಡು ಅದ್ಧೂರಿಯಾಗಿ ದಸರಾ ಹಬ್ಬ ಆಚರಿಸಿದ್ದಾರೆ.
ಘಾಜಿಯಾಬಾದ್ನಲ್ಲಿ ನವಜಾತ ಮಗುವೊಂದು ಪೊದೆಯಿಂದ ಅಳುವ ಸದ್ದು ಕೇಳಿಸಿತ್ತು. ಕೆಲ ಹೊತ್ತಿನಿಂದ ಶಬ್ದ ಕೇಳಿಸುತ್ತಿದ್ದ ಕಾರಣ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಒಂದು ಕ್ಷಣವೂ ತಡಮಾಡದೇ ಸ್ಥಳಕ್ಕೆ ಆಗಮಿಸಿದ ಸಬ್ ಇನ್ಸ್ಪೆಕ್ಟರ್ ನವಜಾತ ಹೆಣ್ಣು ಮಗುವನ್ನು ರಕ್ಷಿಸಿ ತಕ್ಷಣವೇ ಆಸ್ಪತ್ರೆ ದಾಖಲಿಸಿದ್ದಾರೆ.
ಇತ್ತ ಸಬ್ ಇನ್ಸ್ಪೆಕ್ಟರ್ ಮಗುವಿನ ಪೋಷಕರಿಗಾಗಿ ಹುಡುಕಾಟ ನಡೆಸಿದ್ದಾರೆ. ಆದರೆ ಪೋಷಕರ ಸುಳಿವು ಪತ್ತೆಯಾಗಲಿಲ್ಲ. ಇಷ್ಟೇ ಅಲ್ಲ ಮಗುವಿನ ಆರೈಕೆಗೆ ಯಾರೂ ಮುಂದೆ ಬರಲಿಲ್ಲ. ಕೊನೆಯದಾಗಿ ಸಬ್ ಇನ್ಸ್ಪೆಕ್ಟರ್ ಪೊದೆಯಿಂದ ರಕ್ಷಿಸಿದ ಮಗುವನ್ನು ದತ್ತು ಪಡೆದಿದ್ದಾರೆ.
ಇದೀಗ ದತ್ತು ಪಡೆದು ನವಜಾತ ಮಗುವಿನ ಜೊತೆ ದಸರಾ ಹಬ್ಬ ಆಚರಿಸಿದ ಘಟನೆ ಉತ್ತರ ಪ್ರದೇಶ ಘಾಜಿಯಾಬಾದ್ನಲ್ಲಿ ನಡೆದಿದೆ.
ದುದಿಯಾ ಪೀಪಾಲ್ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಪುಷ್ಪೇಂದ್ರ ಸಿಂಗ್ ತಾವು ಪೊದೆಯಿಂದ ರಕ್ಷಿಸಿದ ಮಗುವನ್ನು ಕಾನೂನಿನ ಪ್ರಕ್ರಿಯೆ ಪೂರ್ಣಗೊಳಿಸಿ ದತ್ತು ಪಡೆದಿದ್ದಾರೆ.
ನವರಾತ್ರಿ ಹಬ್ಬಕ್ಕೆ ಲಕ್ಷ್ಮಿ ಮನೆಗೆ ಆಗಮಿಸಿದ್ದಾಳೆ. ಇದಕ್ಕಿಂತ ಸಂತೋಷ ಇನ್ನೇನಿದೆ ಎಂದು ಪುಷ್ಪೇಂದ್ರ ಸಿಂಗ್ ಹೇಳಿದ್ದಾರೆ.