ಅರೆಬೆತ್ತಲೆ ಮೆರವಣಿಗೆ
ಬಾಗಲಕೋಟೆ
ಸಾಂವಿಧಾನಿಕ ಸಂಸ್ಥೆಗಳಾದ ಇಡಿ, ಐಟಿ, ಸಿಬಿಐ ಹಾಗೂ ರಾಜಭವನಗಳನ್ನು ಕೇಂದ್ರ ಬಿಜೆಪಿ ಸರಕಾರ ರಾಜಕೀಯ ಲಾಭಕ್ಕಾಗಿ ದುರುಪಯೋಗ ಪಡಿಸಿಕೊಳ್ಳುತ್ತಿವೆ ಎಂದು ಆರೋಪಿಸಿ ನಗರದಲ್ಲಿ ದಲಿತ ಸಂಘರ್ಷ ಸಮಿತಿಯಿಂದ ಪ್ರತಿಭಟನೆ ನಡೆಯಿತು.
ಡಿಎಸ್‌ಎಸ್ ಮುಖಂಡರು ನವನಗರದ ತಹಸೀಲ್ದಾರ್ ಕಚೇರಿಯಿಂದ ಜಿಲ್ಲಾಡಳಿತ ಭವನದವರೆಗೆ ಅರೆಬೆತ್ತಲೆ ಮೂಲಕ ಆಗಮಿಸಿ ಜಿಲ್ಲಾಕಾರಿ ಮೂಲಕ ರಾಷ್ಟçಪತಿಗೆ ಮನವಿ ಪತ್ರ ಸಲ್ಲಿಸಿದರು.
ಸಮಿತಿಯ ಜಿಲ್ಲಾ ಸಂಚಾಲಕ ಪರಶುರಾಮ ಕಾಂಬಳೆ ಮಾತನಾಡಿ, ಕೇಂದ್ರದ ಬಿಜೆಪಿ ಸರಕಾರ ಅಕಾರಕ್ಕೆ ಬಂದ 10 ವರ್ಷಗಳಲ್ಲಿ ದೇಶದ ಅಖಂಡತೆಗೆ ಧಕ್ಕೆ ತಂದೊಡ್ಡಲು ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಪಚಾರ ಎಸಗುತ್ತಿದೆ. ದೇಶದ ಹಲವೆಡೆ ಬಿಜೆಪಿಯೇತರ ಸರಕಾರಗಳನ್ನು ತನಿಖಾ ಸಂಸ್ಥೆಗಳ ಹೆಸರಲ್ಲಿ ಅಸ್ಥಿರಗೊಳಿಸುವ ಹುನ್ನಾರ ನಡೆಸಿದೆ ಎಂದು ಆರೋಪಿಸಿದರು.
ಸಾಂವಿಧಾನಿಕ ಸಂಸ್ಥೆಗಳಾದ ಇಡಿ, ಐಟಿ, ಸಿಬಿಐ ಹಾಗೂ ರಾಜಭವನಗಳನ್ನು ಅಕಾರವನ್ನು ರಾಜಕೀಯ ಲಾಭಕ್ಕಾಗಿ ಬಳಕೆ ಮಾಡಿಕೊಳ್ಳುತ್ತಿವೆ. ಆ ಮೂಲಕ ಬಿಜೆಪಿ ಹಿಂಬಾಗಿಲಿನಿAದ ಅಕಾರದ ಗದ್ದುಗೆ ಹಿಡಿಯುವ ಹುನ್ನಾರ ನಡೆಸಿದೆ. ಇದಕ್ಕೆ ರಾಜ್ಯದಲ್ಲಿ ನಡೆಯುತ್ತಿರುವ ಘಟನೆಗಳೇ ಸಾಕ್ಷಿಯಾಗಿವೆ. ಈ ಹುನ್ನಾರ ಕುರಿತು ಪ್ರಜಾಪ್ರಭುತ್ವವಾದಿಗಳು ಜನರಲ್ಲಿ ಜಾಗೃತಿ ಮೂಡಿಸಬೇಕಿದೆ. ಈ ಹಿನ್ನೆಲೆಯಲ್ಲಿ ರಾಷ್ಟçಪತಿಗಳು ತನಿಖಾ ಸಂಸ್ಥೆಗಳ ದುರ್ಬಳಕೆಯನ್ನು ತಡೆಗಟ್ಟುವ ಕುರಿತಂತೆ ಕೇಂದ್ರಕ್ಕೆ ಸೂಚಿಸಬೇಕು ಎಂದು ಆಗ್ರಹಿಸಿದರು.
ಮುಖಂಡರದ ಬಸವರಾಜ ಹಳ್ಳದಮನಿ, ಕಾಸೀಂಅಲಿ ಗೋಠೆ, ಹುಲ್ಲಪ್ಪ ಅಂಟರಠಾಣಾ, ಬಸವರಾಜ ಚಲವಾದಿ, ಬಸವರಾಜ ದೊಡಮನಿ, ಸದಾಶಿವ ಐನಾಪೂರ, ಅಮೀತ ಸೂರಗೊಂಡ, ಚಿನ್ನಪ್ಪ ಬಂಡಿವಡ್ಡರ ಇತರರಿದ್ದರು.