ಆರೆಸ್ಸೆಸ್ ಶಿಸ್ತುಬದ್ಧ ಪಥ ಸಂಚಲನ
ಅಮೀನಗಡ
ಶಿಸ್ತು ಬದ್ಧ ಹೆಜ್ಜೆ, ಠೀಕು ಠಾಕಿನ ರಿಸು, ಲಯಬದ್ಧವಾಗಿ ಮೊಳಗುತ್ತಿದ್ದ ಘೋಷ ವಾಕ್ಯ, ನೂರಾರು ಹೆಜ್ಜೆಗಳ ಸದ್ದು, ಅಲಂಕಾರಗೊAಡ ರಸ್ತೆಗಳು, ಪಟ್ಟಣದ ಜನರಿಂದ ಹೂಮಳೆ ಸ್ವಾಗತ, ಮಾರ್ಗದುದ್ದಕ್ಕೂ ದೇಶಭಕ್ತಿ ಪರ ಘೋಷವಾಕ್ಯಗಳು, ಎಲ್ಲೆಲ್ಲೂ ಕರತಾಡನÀ, ಶಾಂತಿ ಸುವ್ಯವಸ್ಥೆ ಕಾಪಾಡಲು ಸನ್ನದ್ಧಗೊಂಡ ಪೊಲೀಸ್ ಸಿಬ್ಬಂದಿ.
ಇವು ರಾಷ್ಟಿಯ ಸ್ವಯಂ ಸೇವಕ ಸಂಘದಿಂದ ಭಾನುವಾರ ಪಟ್ಟಣದಲ್ಲಿ ನಡೆದ ಆಕರ್ಷಕ ಪಥ ಸಂಚಲನದ ಕ್ಷಣಗಳು. ಈ ಪಥ ಸಂಚಲನ ಸಾವಿರಾರು ಜನರ ಮೆಚ್ಚುಗೆಗೆ ಪಾತ್ರವಾಯಿತು. ವಾರ್ಷಿಕ ಪಥ ಸಂಚಲನದಲ್ಲಿ ಭಾಗವಹಿಸಿದ್ದ ಇನ್ನೂರಕ್ಕೂ ಅಕ ಸ್ವಯಂಸೇವಕರ ಶಿಸ್ತಿನ ನಡಿಗೆಗೆ ನೆರೆದಿದ್ದ ಜನರ ಪ್ರೋತ್ಸಾಹ ದೊರೆಯಿತು.
ಪಥ ಸಂಚಲನದ ಹಿನ್ನೆಲೆಯಲ್ಲಿ ಪಟ್ಟಣದೆಲ್ಲೆಡೆ ಅಳವಡಿಸಲಾಗಿದ್ದ ತಳಿರು, ತೋರಣಗಳು ಹೊಸ ವಾತಾವರಣ ಸೃಷ್ಠಿಸಿದವು. ಪಟ್ಟಣದ ಮುಖ್ಯರಸ್ತೆ ಹಾಗೂ ರಾಜ್ಯ ಹೆದ್ದಾರಿಯಲ್ಲಿ ಪಥ ಸಂಚಲನದ ಸ್ವಾಗತಕ್ಕಾಗಿ ಮನೆ, ಅಂಗಡಿ, ಮುಂಗಟ್ಟಿನ ಮುಂದೆ ರಂಗೋಲಿ ಬಿಡಿಸಿ ಸ್ವಾಗತ ಕೋರಲಾಗಿತ್ತು.
ಪಥ ಸಂಚಲನದ ಮಾರ್ಗದುದ್ದಕ್ಕೂ ಸಾರ್ವಜನಿಕರ ಘೋಷಣೆ, ಪ್ರಮುಖ ರಸ್ತೆಗಳು ಸ್ವಚ್ಛತೆಯೊಂದಿಗೆ ಅಲಂಕಾರಗೊAಡಿದ್ದವು. ಬಸವೇಶ್ವರ ದೇವಸ್ಥಾನ, ಸೂಳೇಭಾವಿ ಕ್ರಾಸ್, ಕೆಎಚ್ಡಿಸಿ ಕಾಲೋನಿ, ಬಸ್ನಿಲ್ದಾಣ, ತೇರಿನ ಬಜಾರ ಹೀಗೆ ನಾನಾ ಕಡೆಗಳಲ್ಲಿ ದೇಶಭಕ್ತರು, ಸ್ವಾತಂತ್ರö್ಯ ಯೋಧರ ವೇಷ ಧರಿಸಿದ್ದ ಚಿಣ್ಣರು ಪಥ ಸಂಚಲನದ ಆಕರ್ಷಣೆ ಹೆಚ್ಚಿಸಿದರು.
ಸಂಚಲನದ ಮಾರ್ಗದಲ್ಲಿ ಪಥ ಸಂಚಲನಕ್ಕೆ ಹೂವು ಹಾಕುವ ಮೂಲಕ ಪಟ್ಟಣದ ಜನತೆ ಅಭಿಮಾನ ಸೂಚಿಸಿದರು. ಮೆರವಣಿಗೆಯಲ್ಲಿ ಆರೆಸ್ಸೆಸ್ ಸಂಸ್ಥಾಪಕ ಪೋಟೊಗಳೊಂದಿಗೆ ಸ್ವಯಂ ಸೇವಕರು ಸಂಚರಿಸಿದರು. ರಸ್ತೆಯ ಎರಡೂ ಬದಿಯಲ್ಲಿ ನಿಂತಿದ್ದ ಜನರು ಪಥ ಸಂಚಲನ ವೀಕ್ಷಿಸಿದರು. ಡಿವೈಎಸ್ಪಿ ವಿಶ್ವನಾಥರಾವ್ ಕುಲಕರ್ಣಿ, ಸಿಪಿಐ ಸುನೀಲ್ ಸವದಿ, ಎಸ್ಐ ಜ್ಯೋತಿ ವಾಲಿಕಾರ ನೇತೃತ್ವದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು.
ಚಪ್ಪಾಳೆ, ಹೂ ಮಳೆ ಸ್ವಾಗತ
ಸಂಗಮೇಶ್ವರ ವಿದ್ಯಾವರ್ಧಕ ಸಂಘದ ಮೈದಾನದಿಂದ ಸಂಜೆ 4.15ಕ್ಕೆ ಆರಂಭಗೊAಡು ಪಟ್ಟಣ ಪಂಚಾಯಿತಿ, ಸಂಗಮಕ್ರಾಸ್, ಅಗಸಿ, ತೇರಿನ ಬಜಾರ, ಬಸವೇಶ್ವರ ದೇವಸ್ಥಾನ, ಮಂಗಳಮ್ಮನ ಗುಡಿ, ಎಂಪಿಎಸ್ ಶಾಲೆ, ನಾಗಪ್ಪನ ಕಟ್ಟೆ, ಕೆಎಚ್ಡಿಸಿ ಕಾಲೋನಿ, ಗ್ರಾನೈಟ್ ರೋಡ್, ಮುಖ್ಯರಸ್ತೆ, ಬಸ್ನಿಲ್ದಾಣ, ಬನಶಂಕರಿ ದೇವಸ್ಥಾನ ಮಾರ್ಗವಾಗಿ 5 ಗಂಟೆಗೆ ಸಂಗಮೇಶ್ವರ ಕಾಲೇಜ್ ಮೈದಾನ ತಲುಪಿತು. ಪಥ ಸಂಚಲನದುದ್ದಕ್ಕೂ ಪಟ್ಟಣದ ಜನತೆಯ ಚಪ್ಪಾಳೆ ಮತ್ತಷ್ಟು ಉತ್ಸಾಹ ನೀಡಿತು.—
ಪಪಂ ಸಿಬ್ಬಂದಿ ಕಾರ್ಯಕ್ಕೆ ಶ್ಲಾಘನೆ
ಪಟ್ಟಣದಲ್ಲಿ ನಡೆದ ಪಥ ಸಂಚಲನದ ಮಾರ್ಗದುದ್ದಕ್ಕೂ ಸ್ವಚ್ಚತೆ ಕೈಗೊಂಡ ಪಟ್ಟಣ ಪಂಚಾಯಿತಿ ಸಿಬ್ಬಂದಿ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಯಿತು. ಪಥ ಸಂಚಲನದ ಮುನ್ನಾ ದಿನ ಹಾಗೂ ಭಾನುವಾರ ಬೆಳಗ್ಗೆ ಎಲ್ಲೆಡೆ ಪೌರ ಕಾರ್ಮಿಕರು ಸ್ವಚ್ಚತೆ ಕಾರ್ಯ ಕೈಗೊಂಡರು. ಅವರು ರಸ್ತೆಯನ್ನೆಲ್ಲ ಸ್ವಚ್ಚಗೊಳಿಸಿದ ನಂತರ ಸಾರ್ವಜನಿಕರು ರಂಗೋಲಿ ಬಿಡಿಸಿ ಗಮನ ಸೆಳೆದರು.