This is the title of the web page
This is the title of the web page

Live Stream

May 2025
S M T W T F S
 123
45678910
11121314151617
18192021222324
25262728293031

| Latest Version 9.4.1 |

Education NewsLocal NewsState News

ಹಿರಿಯ ವಿದ್ಯಾರ್ಥಿಗಳ ನೆನಪಿಗಾಗಿ ಆಡಿಟೋರಿಯಂ ನಿರ್ಮಾಣ

ಹಿರಿಯ ವಿದ್ಯಾರ್ಥಿಗಳ ನೆನಪಿಗಾಗಿ ಆಡಿಟೋರಿಯಂ ನಿರ್ಮಾಣ

ಹಿರಿಯ ವಿದ್ಯಾರ್ಥಿಗಳ ಸಮಾವೇಶದ ಪೂರ್ವಭಾವಿ ಸಭೆ

ಅಮೀನಗಡ

ಕೆಲವರು ಎಂದಿಗೂ ನಕಾರಾತ್ಮಕ ಅಂಶದಲ್ಲೇ ಕಾಲ ಕಳೆಯುತ್ತಾರೆ. ಅಂತವರ ಮಧ್ಯೆ ಸಕಾರಾತ್ಮಕ ಅಂಶ ಹೊಂದಿದ ನಾಲ್ಕೆöÊದು ಜನರಿದ್ದರೆ ಸಾಕು. ಅದರಿಂದಲೇ ಸಂಘ, ಸಂಸ್ಥೆ, ಸಮಾಜ ಮುನ್ನಡೆಯುತ್ತದೆ ಎಂದು ಎಸ್‌ವಿವಿ ಸಂಘದ ಉಪಪ್ರಾಚಾರ್ಯ ಆರ್.ಜಿ.ಸನ್ನಿ ಭಾವುಕ ನುಡಿಗಳನ್ನಾಡಿದರು.

ಎಸ್‌ವಿವಿ ಸಂಘದ ಸಂಸ್ಥಾಪಕರಾದ ಲಿಂಗೈಕ್ಯ ರಾಜಗುರು ಪ್ರಭುರಾಜೇಂದ್ರ ಸ್ವಾಮೀಜಿಗಳ ಜನ್ಮ ಶತಮಾನೋತ್ಸವ ಹಿನ್ನೆಲೆಯಲ್ಲಿ ನಡೆಯುತ್ತಿರುವ ಹಿರಿಯ ವಿದ್ಯಾರ್ಥಿಗಳ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಎಸ್‌ವಿವಿ ಸಂಘದ ಆರಂಭದಲ್ಲಿ 19 ವಿದ್ಯಾರ್ಥಿಗಳನ್ನು ಒಳಗೊಂಡಿದ್ದು ಇದೀಗ 3,800 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಕಾರ್ಯಕ್ರಮದ ಬಗ್ಗೆ ನಕಾರಾತ್ಮಕ ಅಂಶ ಬಿಟ್ಟು ಸಕಾರಾತ್ಮಕ ಚಿಂತನೆಯತ್ತ ಬನ್ನಿ. 1993 ರಲ್ಲಿ ಸಂಸ್ಥೆಗೆ ಸೇರಿದಾಗ ಅಮೀನಗಡದಲ್ಲೇ ರೂಂ ಮಾಡಿಕೊಂಡಿದ್ದೆ. ಹೀಗಾಗಿ ಲಿಂಗೈಕ್ಯ ಪ್ರಭುರಾಜೇಂದ್ರ ಸ್ವಾಮಿಗಳಿಗೆ ಆತ್ಮೀಯನಾಗಿದ್ದೆ. ಅಂದಿನಿAದ ಇಂದಿನವರೆಗೆ ಕಾಯಾ, ವಾಚಾ, ಮನಸಾ ಸೇವೆ ಸಲ್ಲಿಸಿದ್ದು ಮೂರು ತಲೆಮಾರಿನವರಿಗೆ ಶಿಕ್ಷಣ ನೀಡಿದ ಅಭಿಮಾನ ನನ್ನಲ್ಲಿದೆ ಎಂದರು.

ಶ್ರೀಗಳ ಜನ್ಮ ಶತಮಾನೋತ್ಸವ ಮಾಡುವುದು ಒಂದು ಪುಣ್ಯದ ಕಾರ್ಯ. ಈ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳನ್ನು ಒಂದೆಡೆ ಸೇರಿಸಿ ಪ್ರೀತಿ, ವಿಶ್ವಾಸ ಹಂಚುವ ಉದ್ದೇಶ ಹೊಂದಲಾಗಿದೆ. ಒಂದು ರಥವನ್ನು ಒಬ್ಬರಿಂದ ಎಳೆಯಲು ಸಾಧ್ಯವಿಲ್ಲ. ನೂರಾರು ಕೈಗಳು ಹಗ್ಗಕ್ಕೆ ಕೈ ಹಾಕಿದಾಗ ಸುಲಭವಾಗುತ್ತದೆ. ಅದರಂತೆ ಎಲ್ಲರೂ ಈ ಕಾರ್ಯಕ್ಕೆ ಕೈ ಜೋಡಿಸಬೇಕು ಎಂದು ಹೇಳಿದರು.

1948 ರಿಂದ ಈವರೆಗೆ ಅಧ್ಯಯನ ಮಾಡಿದ ಹಿರಿಯ ವಿದ್ಯಾರ್ಥಿಗಳ ಸಮಾವೇಶ ಡಿ.29 ರಂದು ಬೆಳಗ್ಗೆ 10.30ಕ್ಕೆ ನಡೆಯಲಿದೆ. ಜತೆಗೆ ಸಂಗಮೇಶ್ವರ ವಿದ್ಯಾವರ್ದಕ ಸಂಘದ ಮಹಾದ್ವಾರದ ಉದ್ಘಾಟನೆ ಆಯೋಜಿಸಲಾಗಿದೆ. ಹಿರಿಯ ವಿದ್ಯಾರ್ಥಿಗಳ ನೆನಪಿಗಾಗಿ ಒಂದು ಆಡಿಟೋರಿಯಂ ನಿರ್ಮಿಸಲು ಉದ್ದೇಶಿಸಲಾಗಿದ್ದು ಅದಕ್ಕೆ ಎಲ್ಲರೂ ತನು, ಮನ, ಧನದಿಂದ ಸೇವೆ ಸಲ್ಲಿಸಬೇಕು ಎಂದು ಹೇಳಿದರು.

ಹಿರಿಯ ವಿದ್ಯಾರ್ಥಿ, ಪಪಂ ಸದಸ್ಯ ವಿಜಯಕುಮಾರ ಕನ್ನೂರ, ಸಂಗಮೇಶ್ವರ ವಿದ್ಯಾವರ್ಧಕ ಸಂಘದ ಅಡಿಯಲ್ಲಿ ಹಳೆ ವಿದ್ಯಾರ್ಥಿಗಳ ಟ್ರಸ್ಟ್ ರಚಿಸುವ ಮೂಲಕ ಸಂಕಷ್ಟದಲ್ಲಿರುವವರಿಗೆ ಅನುಕೂಲವಾಗುವಂತಾಗಲಿ.

ಸಂಘದ ನಾನಾ ಶಾಲೆ, ಕಾಲೇಜ್‌ಗಳಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಜ್ಞಾನಾರ್ಜನೆ ಪಡೆದಿದ್ದಾರೆ. ಅವರೆಲ್ಲರನ್ನು ಒಂದೆಡೆ ಸೇರಿಸುವುದು ಉತ್ತಮ ಕೆಲಸ. ಅದರೊಂದಿಗೆ ಸಂಘದ ಅಡಿಯಲ್ಲಿ ಹಿರಿಯ ವಿದ್ಯಾರ್ಥಿಗಳ ಟ್ರಸ್ಟ್ ಸ್ಥಾಪಿಸಬೇಕೆಂದು ಆಗ್ರಹಿಸಿದರು.

ಟ್ರಸ್ಟ್ ಮೂಲಕ ಸಂಸ್ಥೆಯಲ್ಲಿ ಕಲಿತ ವಿದ್ಯಾರ್ಥಿಗಳ ಕುಟುಂಬಕ್ಕೆ ನೆರವಾಗುವಂತಾಗಬೇಕು. ಇದಕ್ಕೆ ಎಲ್ಲರೂ ಕೈಜೋಡಿಸುತ್ತಾರೆಂಬ ವಿಶ್ವಾಸ ವ್ಯಕ್ತಪಡಿಸಿದರು.

ಸಾನ್ನಿಧ್ಯ ವಹಿಸಿದ್ದ ಪ್ರಭುಶಂಕರೇಶ್ವರ ಗಚ್ಚಿನಮಠದ ಶಂಕರರಾಜೇAದ್ರ ಸ್ವಾಮೀಜಿ, ನಿವೃತ್ತ ಉಪಪ್ರಾಚಾರ್ಯ ವಿ.ಎಂ.ವಸ್ತçದ, ಪ್ರಾಚಾರ್ಯ ಎಂ.ಎನ್.ವAದಾಲ, ಉಮೇಶ ಸಜ್ಜನ, ಮುಖ್ಯಶಿಕ್ಷಕ ಎಸ್.ಎಸ್.ಹಿರೇಮಠ, ನಿಂಗಯ್ಯ ಒಡೆಯರ, ಸಂಘದ ಹಿರಿಯ ವಿದ್ಯಾರ್ಥಿಗಳಾದ ವಿಜಯಕುಮಾರ ಕನ್ನೂರ, ಅಶೋಕ ಹುಣಶ್ಯಾಳ, ಶಿವಕುಮಾರ ಹಿರೇಮಠ, ಗುರುನಾಥ ಚಳ್ಳಮರದ, ಬಾಬು ಛಬ್ಬಿ, ರವಿ ಅನವಾಲ, ಗುರು ಪುರ್ತಗೇರಿ, ಯಮನೂರ ಕತ್ತಿ, ವಿ.ಯು.ಕಂಬಾಳಿಮಠ, ಜ್ಯೋತಿ ಟಿರಕಿ ಇತರರು ಮಾತನಾಡಿದರು.

 

Nimma Suddi
";