ಅಮೀನಗಡ:
ಇಲ್ಲಿನ ಎಸ್‌ವಿವಿ ಸಂಘದ ಸಂಗಮೇಶ್ವರ ಸಂಯುಕ್ತ ಪಪೂ ಕಾಲೇಜ್‌ನ 1993-94ನೇ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಂದ ಜ.12 ರಂದು ಗುರುವಂದನೆ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ಆಯೋಜಿಸಲಾಗಿದೆ.
ಪ್ರಭುಶಂಕರೇಶ್ವರ ಅನುಭವ ಮಂಟಪದಲ್ಲಿ ಬೆಳಗ್ಗೆ 10.30ಕ್ಕೆ ನಡೆಯುವ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಕೆ.ಎಂ.ಜಾನಕಿ ಉದ್ಘಾಟಿಸಲಿದ್ದು, ಪ್ರಭುಶಂಕರೇಶ್ವರ ಗಚ್ಚಿನಮಠದ ಶಂಕರರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ.
ಅತಿಥಿಗಳಾಗಿ ಬಿಇಒ ಜಾಸ್ಮಿನ್ ಕಿಲ್ಲೇದಾರ, ಪಿಎಸ್‌ಐ ಜ್ಯೋತಿ ವಾಲೀಕಾರ ಆಗಮಿಸಲಿದ್ದಾರೆ.
ಗುರುಗಳಾದ ಎಸ್.ಬಿ.ಪಾಟೀಲ, ಎಸ್.ಎಸ್.ಶಿರೋಳ, ಬಿ.ಬಿ.ಹೊಸಮನಿ, ಬಿ.ಬಿ.ತಿಪ್ಪಾಶೆಟ್ಟಿ, ವಿ.ಎಂ.ವಸ್ತ್ರದ, ಎಂ.ಬಿ.ಶಿವಯೋಗಿ, ವೈ.ಎಸ್.ಪೂಜಾರ, ಎಸ್.ಪಿ.ಆಲಮೇಲ, ಆರ್.ಜಿ.ಸನ್ನಿ, ಆರ್.ಜಿ.ಪತ್ತಾರ, ಸಂಗಮೇಶ ನೀಲಗುಂದ, ಬಿ.ಕೆ.ಮಾಟೂರ ಹಾಗೂ ಬಿ.ವಿ.ಗಚ್ಚಿನಮಠ ಅವರಿಗೆ ಗುರುವಂದನೆ ಸಲ್ಲಿಸಲಾಗುವುದು ಎಂದು ಸ್ನೇಹ ಬಳಗ ತಿಳಿಸಿದೆ.