This is the title of the web page
This is the title of the web page

Live Stream

April 2025
S M T W T F S
 12345
6789101112
13141516171819
20212223242526
27282930  

| Latest Version 9.4.1 |

Education NewsLocal NewsState News

ಸಂತ, ಮಹಾತ್ಮರ ನಾಡು ಕನ್ನಡ ನಾಡು

ಸಂತ, ಮಹಾತ್ಮರ ನಾಡು ಕನ್ನಡ ನಾಡು

ಗಚ್ಚಿನಮಠದಲ್ಲಿ ಶಿವಾನುಭವ ಗೋಷ್ಠಿ

ಬಾಗಲಕೋಟೆ

ಕನ್ನಡ ನಾಡಿನಲ್ಲಿ ಹಲವು ಸಂತ, ಮಹಾತ್ಮರು ಸಮಾಜಕ್ಕೆ ತನ್ನದೆ ಆದ ಕೊಡುಗೆ ನೀಡಿದ್ದು ಅಂತವರ ಸಾಲಿನಲ್ಲಿ ಮೊದಲಿಗರಾಗಿ ಶಿರಸಂಗಿ ಲಿಂಗರಾಜರ ಕೊಡುಗೆ ಅಪಾರವಾಗಿದೆ ಎಂದು ಎಸ್‌ವಿವಿ ಸಂಘದ ಸಂಗಮೇಶ್ವರ ಸಂಯುಕ್ತ ಪಪೂ ಕಾಲೇಜ್ ಶಿಕ್ಷಕ ಎಸ್.ಎಚ್.ಹೊಸಮನಿ ಹೇಳಿದರು.

ಜಿಲ್ಲೆಯ ಹುನಗುಂದ ತಾಲೂಕಿನ ಅಮೀನಗಡದ ಪ್ರಭುಶಂಕರೇಶ್ವರ ಗಚ್ಚಿನಮಠದಲ್ಲಿ ಹಮ್ಮಿಕೊಂಡ ಶಿವಾನುಭವ ಗೋಷ್ಠಿಯಲ್ಲಿ ತ್ಯಾಗವೀರ ಶಿರಸಂಗಿ ಲಿಂಗರಾಜರ ಕೊಡುಗೆಗಳ ಕುರಿತು ಮಾತನಾಡಿದ ಅವರು, ಲಿಂಗರಾಜರ ಕೊಡುಗೆಗಳು ಅಪಾರ. ಕೆರೆ ಕಟ್ಟಿಸುವುದು, ದೇವಾಲಯ ನಿರ್ಮಾಣ, ಕೃಷಿ ಚಟುವಟಿಕೆ ಹೀಗೆ ಹಲವು ಸಾಮಾಜಿಕ ಕಾಳಜಿ ಮೆರೆದಿದ್ದಾರೆ. ತ್ಯಾಗಕ್ಕೆ ಮತ್ತೊಂದು ಹೆಸರೇ ಶಿರಸಂಗಿ ಲಿಂಗರಾಜರು ಎಂದರು.

ನಿವೃತ್ತ ಶಿಕ್ಷಕ ಬಿ.ಬಿ.ಸಜ್ಜನ, ಅನುಭವಿಕರ ಮಾತು ಕೇಳಿ ಅವರ ಮಾರ್ಗದರ್ಶನದಲ್ಲಿ ಬದುಕು ಸಾಗಿಸಬೇಕು. ಹಿಂದಿನ ಕಾಲದಲ್ಲಿ ಗುರುಕುಲ ಪದ್ಧತಿಯಲ್ಲಿ ಗುರುಗಳ ಪ್ರೀತಿಗೆ ಪಾತ್ರರಾಗಿ ಶಿಕ್ಷಣ ಕಲಿಯುತ್ತಿದ್ದರು. ಇಂದಿನ ಮಕ್ಕಳಿಗೆ ಪಾಲಕರು ಕೈಯಲ್ಲಿ ಮೊಬೈಲ್ ನೀಡಿ ಸುಮ್ಮನಾಗಿರುತ್ತಾರೆ. ಅಂತಹ ಸಂಸ್ಕೃತಿ ನಮ್ಮದಲ್ಲ, ಇದನ್ನು ಪಾಲಕರು ಅರಿಯಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಪ್ರಭುಶಂಕರೇಶ್ವರ ಗಚ್ಚಿನಮಠದ ಶಂಕರರಾಜೇAದ್ರ ಸ್ವಾಮೀಜಿ, ಲಿಂಗೈಕ್ಯ ಪ್ರಭುರಾಜೇಂದ್ರ ಶ್ರೀಗಳು ಹಾಕಿಕೊಟ್ಟ ಪರಂಪರೆ ಶಿವಾನುಭವ. ಅದನ್ನು ಮುಂದುವರೆಸುವ ನಿಟ್ಟಿನಲ್ಲಿ ಪ್ರತಿ ತಿಂಗಳ ಹುಣ್ಣಿಮೆಯಂದು ಅತಿಥಿಗಳನ್ನು ಬರಮಾಡಿಕೊಂಡು ಉಪನ್ಯಾಸ ನೀಡಲಾಗುತ್ತಿದೆ. ಎಲ್ಲೋ ಕುಳಿತು ಕಾಲ ಕಳೆಯುವ ಬದಲು ಇಂತಹ ಗೋಷ್ಠಿಗಳಲ್ಲಿ ಭಾಗವಹಿಸಿ ಜೀವನ ಸಾರ್ಥಕತೆ ಪಡೆದುಕೊಳ್ಳಿ ಎಂದರು ಹೇಳಿದರು.

ಅತಿಥಿಗಳಾಗಿ ವಿಶ್ರಾಂತ ಮುಖ್ಯಶಿಕ್ಷಕ ಎಚ್.ಎಚ್.ಬೇಪಾರಿ, ವಿಶ್ರಾಂತ ಶಿಕ್ಷಕ ಬಿ.ಬಿ.ಸಜ್ಜನ, ಸಾಹಿತಿ ಈರಣ್ಣ ಮೂಲಿಮನಿ, ವಿ.ಎಂ.ವಸ್ತçದ, ಶಿವಕುಮಾರ ಹಿರೇಮಠ, ಡಿ.ಆರ್.ಕುಬಸದ, ಎಸ್.ಐ.ಮುಳ್ಳೂರ, ಎಸ್.ಎಸ್.ಹಿರೇಮಠ, ಬಸವರಾಜ ಬೇವಿನಮಟ್ಟಿ, ವಿಜಯಕುಮಾರ ಯಡ್ರಾಮಿ, ಮಂಜುನಾಥ ಅಕ್ಕಿ ಇತರರಿದ್ದರು.

 

Nimma Suddi
";