ಈ ವರ್ಷದ ಕರುನಾಡ ಕಿರೀಟ ರಾಜ್ಯಮಟ್ಟದ ಪ್ರಶಸ್ತಿಗೆ ಶಿಕ್ಷಕ ಶ್ರೀ ಮುತ್ತು ವಡ್ಡರ ಆಯ್ಕೆ….
ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಹಿರೇಮಾಗಿ ಗ್ರಾಮದ ನಿವಾಸಿ ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಿರೇಮಳಗಾವಿಯ ಶಿಕ್ಷಕರು ಆಗಿರುವ ಶ್ರೀ ಮುತ್ತು ವಾಯ್ ವಡ್ಡರ ಇವರು 2025 ನೇ ಸಾಲಿನ ಕರುನಾಡ ಕಿರೀಟ ರಾಜ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಕಪ್ಪತಗಿರಿ ಫೌಂಡೇಶನ್ ರಾಜ್ಯ ಘಟಕ ಗದಗ ಕಳಸಾಪುರ ಸಂಸ್ಥೆಯ, ಕಪ್ಪತಗಿರಿ ಸಾಹಿತ್ಯ ಸಾಂಸ್ಕೃತಿಕ ಕಲಾ ವೇದಿಕೆಯ ಎರಡನೇ ವಾರ್ಷಿಕೋತ್ಸವ ಹಾಗೂ ಅಪ್ಪ ಸಾಹಿತ್ಯ ವೇದಿಕೆಯ ರಾಜ್ಯ ಘಟಕ ಹತ್ತರಕಿಹಾಳ, ವಿಜಯಪುರ ವೇದಿಕೆಯ ಉದ್ಘಾಟನೆಯ ಸಮಾರಂಭದ ಪ್ರಯುಕ್ತ 2025 ನೇ ಸಾಲಿನ ಕರುನಾಡ ಕಿರೀಟ ರಾಜ್ಯ ಪ್ರಶಸ್ತಿಯನ್ನು ಶಿಕ್ಷಕರಾದ ಶ್ರೀ ಮುತ್ತು ವಡ್ಡರ ಇವರ ಶಿಕ್ಷಣ ಮತ್ತು ಸಾಹಿತ್ಯ ಕ್ಷೇತ್ರವನ್ನು ಗುರುತಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರು ಆಗಿರುವ ಶ್ರೀಮತಿ ಚಂದ್ರಕಲಾ ಇಟಗಿಮಠ ಹಾಗೂ ಶ್ರೀಮತಿ ಸುಜ್ಞಾನಿ ನಿಂ ಪಾಟೀಲ್ ಇವರು ತಿಳಿಸಿದ್ದಾರೆ.
ಇದೇ ದಿನಾಂಕ 2 – 2 – 2025 ರಂದು ವಿಜಯಪುರದ ಚೇತನ ಕಾಲೇಜು ಸಭಾಂಗಣದಲ್ಲಿ ನಡೆಯುವ ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಲಾಗುವುದು ಎಂದು ಕಾರ್ಯಕ್ರಮದ ಸಂಘಟಿಕರು ಹಾಗೂ ಸಂಸ್ಥಾಪಕ ಅಧ್ಯಕ್ಷರು ತಿಳಿಸಿದ್ದಾರೆ.
ವೃತ್ತಿಯಲ್ಲಿ ಶಿಕ್ಷಕರು ಆಗಿರುವ ಶ್ರೀ ಮುತ್ತು ವಡ್ಡರ ಇವರು ಬಿಡುವಿನ ಸಮಯದಲ್ಲಿ ಕಥೆ ಕವನ ಲೇಖನ ಹಾಗೂ ಇನ್ನಿತರ ಸಾಹಿತ್ಯ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ ಇವರ ಶೈಕ್ಷಣಿಕ ಸೇವೆಯನ್ನು ಮತ್ತು ಸಾಹಿತ್ಯ ಸೇವೆಯನ್ನು ಪರಿಗಣಿಸಿ ಕರುನಾಡ ಕಿರೀಟ ರಾಜ್ಯ ಪ್ರಶಸ್ತಿಗೆ ಆಯ್ಕೆ ಮಾಡಿ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಗೌರವಿಸಿ ಸನ್ಮಾನಿಸಲಾಗುವುದು ಎಂದಿದ್ದಾರೆ. ಪ್ರಶಸ್ತಿಗೆ ಆಯ್ಕೆಯಾಗಿರುವ ಶ್ರೀ ಮುತ್ತು ವಡ್ಡರ ಇವರನ್ನು ಅವರ ಸ್ನೇಹ ಬಳಗ ಹಾಗೂ ಶಿಕ್ಷಕ ಬಳಗದವರು ಮತ್ತು ಕುಟುಂಬ ವರ್ಗದವರು ಅಭಿನಂದಿಸಿದ್ದಾರೆ.