ಬಾಗಲಕೋಟೆ
ಸತತ ಪ್ರಯತ್ನ, ಬದ್ಧತೆ ಹಾಗೂ ಅಧ್ಯಯನವು ನಿಶ್ಚಿತವಾಗಿಯೂ ಗುರಿ ಮುಟ್ಟಲು ಸಾಧ್ಯವಾಗುತ್ತದೆ ಎಂದು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಹಣಕಾಸು ನಿಯಂತ್ರಣಾಧಿಕಾರಿ ಮಲ್ಲಿಕಾರ್ಜುನ ಶೆಲ್ಲಿಕೇರಿ ಹೇಳಿದರು.
ನಗರದ ತೋಟಗಾರಿಕೆ ವಿಜ್ಞಾನಗಳ ವಿವಿಯಲ್ಲಿ ಫೆ.೨೮ ರಿಂದ ಆರಂಭವಾದ ನಾಗರಿಕ ಸೇವಾ ಪರೀಕ್ಷೆಯ ತಯಾರಿಯ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಾ.೯ರವರೆಗೆ ೧೦ ದಿನ ತರಬೇತಿ ಕಾರ್ಯಾಗಾರ ಆಯೋಜಿಸಲಾಗಿದೆ. ತರಬೇತಿಯ ಸದುಪಯೋಗ ಪಡೆಯಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ತೋವಿವಿ ಡೀನ್ ಡಾ.ಬಾಲಾಜಿ ಕುಲಕರ್ಣಿ, ವಿದ್ಯಾರ್ಥಿಗಳು ಒಂದು ಉತ್ತಮ ಭವಿಷ್ಯ ಹಾಗೂ ದೇಶ ಸೇವೆಗೆ ತಮ್ಮ ಕರ್ತವ್ಯ ನೀಡಬೇಕು ಎಂದರು.
ಪರಿತ್ರಾಣಾಯ ಐಎಎಸ್ ಅಕಾಡೆಮಿ ಸಂಸ್ಥಾಪಕ ರಾಜೇಶ ಬಿರಾದಾರ ಕಾರ್ಯಾಗಾರದ ಚಟುವಟಿಕೆ ಕುರಿತು ಮಾಹಿತಿ ನೀಡಿದರು. ಉಪಹಣಕಾಸು ನಿಯಂತ್ರಣಾಧಿಕಾರಿ ಡಿ.ಎಲ್.ಸುತಗಟ್ಟಿ, ಡಾ.ಐ.ಬಿ.ಬಿರಾದಾರ, ವೀರೇಶ ರಾಮಪೂರ, ವಿದ್ಯಾಧರ, ಡಾ.ಮಹಾಂತೇಶ ನಾಯಕ, ಪೂಜಾ, ಪ್ರಿಯಾಂಕಾ, ವಿದ್ಯಾ ಸೇರಿದಂತೆ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿ ಇದ್ದರು.