ಬಾಗಲಕೋಟೆ
ಜಿಲ್ಲೆಯ ಹುನಗುಂದ ತಾಲೂಕಿನ ಅಮೀನಗಡ ಪಟ್ಟಣದ ವ್ಯಾಪ್ತಿಯ ಅನಧಿಕೃತ ಆಸ್ತಿಗಳಿಗೂ ಇ-ಆಸ್ತಿ ಉತಾರ ನೀಡಲು ಸರಕಾರ ಅವಕಾಶ ನೀಡಿದ್ದು ನಿವಾಸಿಗಳು ತಮ್ಮ ಆಸ್ತಿಗಳಿಗೆ ಸಂಬಂದಿಸಿದಂತೆ ಇ-ಖಾತಾ ಪಡೆಯಬಹುದು ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸುರೇಶ ಪಾಟೀಲ ತಿಳಿಸಿದರು.
ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಇ-ಆಸ್ತಿ ಉತಾರೆ ಅಭಿಯಾನಕ್ಕೆ ಚಾಲನೆ ಸಂದರ್ಭದಲ್ಲಿ ಮಾತನಾಡಿದ ಅವರು, ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿನ ಸರಕಾರಿ, ಅರೆ ಸರಕಾರಿ ಜಾಗೆ, ನಗರ ಸ್ಥಳೀಯ ಸಂಸ್ಥೆಗಳ ಒಡೆತನದಲ್ಲಿರುವ ಸ್ವತ್ತುಗಳನ್ನು ಹೊರತುಪಡಿಸಿ ಎ-ಖಾತಾ ಹಾಗೂ ಬಿ-ಖಾತಾ ನೀಡಲಾಗುತ್ತದೆ ಎಂದರು.
ಈ ಹಿಂದೆ ಆಸ್ತಿಕಣಜದಲ್ಲಿ ಆಸ್ತಿಗಳ ಮಾಹಿತಿ ಅಪ್‌ಲೋಡ್ ಮಾಡಲಾಗಿತ್ತು. ಸಾರ್ವಜನಿಕರು ಇ-ಖಾತೆ ಪಡೆಯುವುದಕ್ಕೂ ಮುಂಚೆ ತಮ್ಮ ಆಸ್ತಿಗಳ ಕರಡು ಮಾಹಿತಿ ಪಡೆಯಬಹುದು. ಸೂಕ್ತ ದಾಖಲೆಗಳನ್ನು ಒದಗಿಸಿ ಎ ಅಥವಾ ಬಿ ಖಾತೆ ಉತಾರೆ ಪಡೆಯಬಹುದು. ಪಟ್ಟಣದಲ್ಲಿ ಅಂದಾಜು 9 ಸಾವಿರ ಆಸ್ತಿಗಳಿದ್ದು 600ಕ್ಕೂ ಹೆಚ್ಚು ಆಸ್ತಿಗಳಿಗೆ ಇ-ಖಾತೆ ನೀಡಲಾಗಿದೆ. ಭೂ-ಪರಿವರ್ತನೆ ಆದೇಶ, ಕೆಜೆಪಿ ನಕ್ಷೆ, ಟೌನ್ ಪ್ಲಾö್ಯನಿಂಗ್ ಹೊಂದಿದ ಹಾಗೂ ಗ್ರಾಮಠಾಣಾ ಆಸ್ತಿಗಳಿಗೆ ಎ-ಖಾತೆಯಲ್ಲಿ ಉತಾರೆ ದೊರೆತರೆ ಉಳಿದವುಗಳಿಗೆ ಬಿ-ಖಾತೆ ನೀಡಲಾಗುವುದು ಎಂದು ಹೇಳಿದರು.
ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಬಿ.ಆರ್.ಚೌಹಾಣ, ಉಪಾಧ್ಯಕ್ಷೆ ಉಮಾಶ್ರೀ ಹಣಗಿ, ಸದಸ್ಯರಾದ ಸಂತೋಷ ಐಹೊಳ್ಳಿ, ಸುಜಾತಾ ತತ್ರಾಣಿ, ವಿದ್ಯಾ ರಾಮವಾಡಗಿ, ರಮೇಶ ಮುರಾಳ, ತುಕಾರಾಮ ಲಮಾಣಿ, ಗಣೇಶ ಚಿತ್ರಗಾರ, ಸಂತೋಷ ಕಂಗಳ, ಕಸ್ತೂರೆವ್ವ ಚಳ್ಳಗಿಡದ, ಯಮನಪ್ಪ ನಾಗರಾಳ, ಸಿಬ್ಬಂದಿ ಎಸ್.ವೈ.ಮಾಗುಂಡಪ್ಪನವರ, ರಮೇಶ ಕಡ್ಲಿಮಟ್ಟಿ, ಸೈಯದ್ ಅಗ್ನಿ, ಸುಪ್ರೀಯಾ ಮಾಗಿ, ಮಹಾಂತೇಶ ಇದರಮನಿ, ರಾಹುಲ್ ಚೌಹಾಣ, ರವಿ ನಿಡಗುಂದಿ ಇತರರಿದ್ದರು.
3 ತಿಂಗಳ ಕಾಲಾವಕಾಶ
ಅನಧಿಕೃತ ಆಸ್ತಿಗಳನ್ನು ಹೊಂದಿದವರು ತಮ್ಮ ಆಸ್ತಿಯನ್ನು ಬಿ-ಖಾತೆಯಲ್ಲಿ ದಾಖಲಿಸಲು ಸರಕಾರ 3 ತಿಂಗಳ ಕಾಲಾವಕಾಶ ನೀಡಿದೆ. ನಿವಾಸಿಗಳು ಸಂಬಂಧಿಸಿದ ದಾಖಲೆಗಳನ್ನು ನೀಡಿ ಎ-ಖಾತಾ ಹಾಗೂ ಬಿ-ಖಾತಾ ಪಡೆಯಬಹುದು ಎಂದು ಪಪಂ ಅಧ್ಯಕ್ಷೆ ಬಿ.ಆರ್.ಚೌಹಾಣ್ ತಿಳಿಸಿದರು.
ಸಹಾಯವಾಣಿ ಸ್ಥಾಪನೆ
ಇ-ಖಾತೆ ಪಡೆಯುವಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಹಾಯವಾಣಿ ಸ್ಥಾಪಿಸಲಾಗಿದ್ದು ಮೊ.9980149163, 9972699101, 9945028606 ಗೆ ಸಂಪರ್ಕಿಸಿ ಸೂಕ್ತ ಮಾಹಿತಿ ಪಡೆಯಬಹುದು ಎಂದು ಮುಖ್ಯಾಧಿಕಾರಿ ಸುರೇಶ ಪಾಟೀಲ ತಿಳಿಸಿದ್ದಾರೆ.
ಇ-ಖಾತಾ ನೀಡುವ ಅಭಿಯಾನ ಪಟ್ಟಣ ಪಂಚಾಯಿತಿ ಕಚೇರಿಗೆ ಮೀಸಲಾಗದೆ ಪ್ರತಿ ನಿವಾಸಿಗಳ ಮನೆ ತಲುಪುವಂತಾಗಲಿ. ಬಿ-ಖಾತಾಗೆ ಸರಕಾರ ಅವಕಾಶ ನೀಡಿದ್ದು ಯಾರನ್ನೂ ವಂಚಿತರನ್ನಾಸಬೇಡಿ. ನಿಗತ ಅವಯಲ್ಲಿ ಉತಾರೆ ದೊರೆಯುವಂತಾಗಲಿ.
-ರವೀಂದ್ರ ಅನವಾಲ, ನಿವಾಸಿ ಅಮೀನಗಡ.