ಬಾಗಲಕೋಟೆ: ಹೋಳಿ ಹಬ್ಬದ ರಂಗಿನಾಟ ಬಾಗಲಕೋಟೆಯಲ್ಲಿ ಎರಡನೇ ದಿನವೂ ನಡೆಯಿತು. ನಗರದ ನಾನಾ ಬಡಾವಣೆಗಳಲ್ಲಿ ಯುವಕರು ಯುವತಿಯರು ಪರಸ್ಪರ ಬಣ್ಣ ಎರಚಿ ಸಂಭ್ರಮ ಹಂಚಿಕೊಂಡರು.
ದೇಶದ ಇತಿಹಾಸದಲ್ಲಿಯೇ ಬಾಗಲಕೋಟೆ ಬಣ್ಣಕ್ಕೆ ಎರಡನೇ ಸ್ಥಾನವಿದೆ. ಮೊದಲ ಸ್ಥಾನ ಕಲ್ಕತ್ತಾಕ್ಕಿದೆ. ಅಷ್ಟು ಸೊಗಸಾಗಿ ಇಲ್ಲಿನ ಯುವಕ-ಯುವತಿಯರು ಬಣ್ಣದಾಟ ಆಡಿ ಸಂಭ್ರಮಿಸುತ್ತಾರೆ.
ಮೊದಲ ದಿನ ಬಣ್ಣದಾಟ ಮುಗಿದ ನಂತರ ಸಂಜೆ ವೇಳೆಗೆ ಎರಡು ಓಣಿಯ ಬಣ್ಣದ ಬಂಡಿಯಲ್ಲಿ ಆಗಮಿಸಿದ ಯುವಕರು ಪರಸ್ಪರ ಬಣ್ಣ ಎರಚಿ ಖುಷಿಪಟ್ಟರು. ಜತೆಗೆ ಹೋಳಿ ಸಂಭ್ರಮ ಆಚರಿಸಿದರು.
ಎರಡನೇ ದಿನವೂ ನಗರದ ಪ್ರಮುಖ ಸ್ಥಳಗಳಲ್ಲಿ ಡಿಜೆ ಸೌಂಡ್ ವ್ಯವಸ್ಥೆ ಹಾಗೂ ಬಣ್ಣದಾಟದ ವ್ಯವಸ್ಥೆ ಮಾಡಲಾಗಿತ್ತು. ಯುವಕರು, ಯುವತಿಯರು ಅದರಲ್ಲಿ ಪಾಲ್ಗೊಂಡು ಡಿಜೆ ಸೌಂಡ್‌ಗೆ ತಕ್ಕಂತೆ ಹೆಜ್ಜೆ ಹಾಕಿ ಸಂಭ್ರಮಿಸಿ ಹೋಳಿ ಆಚರಿಸಿದರು. ಇದು ಭಾನುವಾರವೂ ಮುಂದುವರಿಯಲಿದೆ.