ಕಗಲಗೊಂಬದಲ್ಲಿ ಎನ್ನೆಸ್ಸೆಸ್ ಶಿಬಿರ
ಬಾಗಲಕೋಟೆ:ಗ್ರಾಮದ ಪ್ರತಿಯೊಬ್ಬ ವ್ಯಕ್ತಿಗಳ ಆರೋಗ್ಯ ರಕ್ಷಣೆಗೆ ಸ್ವಚ್ಛತೆ ಗ್ರಾಮದ ಮೂಲ ಕನಸಾಗಲಿ ಎಂದು ಎಂಆರ್‌ಎನ್ ಆಯುರ್ವೇದಿಕ್ ಮೆಡಿಕಲ್ ಕಾಲೇಜ್‌ನ ಡೀನ್ ಡಾ.ಶಿವಕುಮಾರ ಗಂಗಾಲ ಹೇಳಿದರು.
ತಾಲೂಕಿನ ಕಗಲಗೊಂಬ ಗ್ರಾಮದಲ್ಲಿ ಎಂಆರ್‌ಎನ್ ಆಯುರ್ವೇದಿಕ್ ಮೆಡಿಕಲ್ ಕಾಲೇಜ್ ವತಿಯಿಂದ ನಡೆದ ರಾಷ್ಟ್ರೀಯ ಸೇವಾ ಯೋಜನೆಯ ಏಳು ದಿನಗಳ ಪ್ರಥಮ ವಿಶೇಷ ವಾರ್ಷಿಕ ಶಿಬಿರದ ಉದ್ಘಾಟನೆಯಲ್ಲಿ ಮಾತನಾಡಿದ ಅವರು, ಎನ್ನೆಸ್ಸೆಸ್ ಶಿಬಿರ ಪ್ರತಿಯೊಬ್ಬರಲ್ಲೂ ಸ್ವಚ್ಛತೆಯ ಅರಿವು ಮೂಡಿಸುತ್ತದೆ, ಜತೆಗೆ ಶಿಸ್ತುಬದ್ಧ ಸಮಯದ ನಿರ್ವಹಣೆಗೆ ಸಹಾಯಕವಾಗುತ್ತದೆ ಎಂದರು.
ಅತಿಥಿ ಗಿರೀಶ ಪಾಟೀಲ, ಇಂತಹ ವಿಶೇಷ ವಾರ್ಷಿಕ ಶಿಬಿರಗಳು ವಿದ್ಯಾರ್ಥಿಗಳಲ್ಲಿ ಭಾವೈಕ್ಯತೆಯ ಭಾವ ಮೂಡಲು ಸಹಾಯಕವಾಗುತ್ತವೆ ಎಂದು ಹೇಳಿದರು.
ಪ್ರಾಂಶುಪಾಲ ಡಾ.ಪ್ರಹ್ಲಾದ ಗಂಗಾವತಿ, ಉಪನ್ಯಾಸಕ ಡಾ.ಸಂಜಯ ಚಿನಿವಾಲ, ಎನ್ನೆಸ್ಸೆಸ್ ಸಂಯೋಜಕಿ ಡಾ.ಅಂಜನಾ ಕೃ?À್ಣನ್, ಸದಸ್ಯರಾದ ವೀರಣ್ಣ ವಜ್ರಮಟ್ಟಿ, ದಿನೇಶ ವಡ್ಡರ, ಗೌರವ್ವ ಗುಡಿಮನಿ, ಗ್ರಾಮಸ್ಥರು ಹಾಗೂ ಶಿಬಿರಾರ್ಥಿಗಳು ಇದ್ದರು.