ಪುರಸಭೆ ಆಡಳಿತದ ವಿಷಯದಲ್ಲಿ ಶಾಸಕರು ಪದೇ ಪದೇ ಮೂಗು ತೂರಿಸುತ್ತಿದ್ದಾರೆ ಎಂಬ ಬಿಜೆಪಿ ಸದಸ್ಯರ ಆರೋಪಕ್ಕೆ ಹುನಗುಂದ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿ ತಿರುಗೇಟು ನೀಡಿದ ಅವರು, ಬಿಜೆಪಿ ಶಾಸಕರ ಅವಧಿಯಲ್ಲಾದ ಅಭಿವೃದ್ಧಿ ಕಾರ್ಯ ಹಾಗೂ ಕಳೆದೆರಡು ವರ್ಷದ ಅವಧಿಯಲ್ಲಿ ಶಾಸಕ ವಿಜಯಾನಂದ ಅವರ ನೇತೃತ್ವದಲ್ಲಾದ ಅಭಿವೃದ್ಧಿ ಕಾರ್ಯಗಳು ಜನರ ಅರಿವಿಗಿದೆ. ಬಿಜೆಪಿಯವರಿಗೆ ಅದರ ಅರಿವಿಲ್ಲದಿದ್ದರೆ ಅವರೊಂದಿಗೆ ಅಭಿವೃದ್ಧಿ ಕಾರ್ಯಗಳ ಕುರಿತು ಬಹಿರಂಗ ಚರ್ಚೆಗೆ ಸಿದ್ಧವಿರುವುದಾಗಿ ಸವಾಲು ಹಾಕಿದರು.
ಬಿಜೆಪಿಯವರಿಗೆ ಸರಿಯಾದ ಮಾಹಿತಿಯೇ ಇಲ್ಲವಾಗಿದೆ. ಪಟ್ಟಣದಲ್ಲಿ 24*7 ಕುಡಿಯುವ ನೀರಿನ ಪೂರೈಕೆಗಾಗಿ ಡಿಪಿಎಆರ್ ತಯಾರಿಸಿದ್ದೇ 2017ರಲ್ಲಿ. ಅದರ ಅರಿವು ಹೊಂದದೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಶನಿವಾರ ಸುದ್ದಿಗೋಷ್ಠಿ ನಡೆಸಿದವರ ಬಿಜೆಪಿ ಸದಸ್ಯರಿಗೆ ಅವರ ಪಕ್ಷದಿಂದ ನ್ಯಾಯ ಕೊಡಿಸಲು ಆಗಿಲ್ಲ. ಹೀಗಿರುವಾಗ ಬೇರೆಯವರ ಬಗ್ಗೆ ಮಾತನಾಡುವ ನೈತಿಕತೆ ಕಳೆದುಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪುರಸಬೇ ವ್ಯಾಪ್ತಿಯ ಆಶ್ರಯ ನಿವೇಶನ ಹಂಚಿಕೆಯ ಫಲಾನುಭವಿಗಳ ಪಟ್ಟಿ ವಿಷಯದಲ್ಲಿ ಅಕ್ರಮ ನಡೆದಿದ್ದರೆ ತನಿಖೆ ಮಾಡಿಸಲಿ. 2018 ರಿಂದ 2023ರವರೆಗೆ ಕ್ಷೇತ್ರದಲ್ಲಿ ಯಾರು ಗುಂಡಾಗಿರಿ ಮಾಡುತ್ತಿದ್ದರು ಎಂಬುದು ಜನರಿಗೆ ತಿಳಿದಿದೆ. ಹೀಗಾಗಿ ಚುನಾವಣೆಯಲ್ಲಿ ಬಿಜೆಪಿಯವರು ಮಖಾಡೆ ಮಲಗಿದರು. ಪುರಸಭೆಗೆ ನಮ್ಮ ಶಾಸಕರು ಒಂದು ಕೋಟಿ ರೂ. ಅನುದಾನ ಒದಗಿಸಿದ್ದಾರೆ. ಅಭಿವೃದ್ಧಿ ಹಾಗೂ ಬಡವರ ಪರ ಕಾಳಜಿಯಲ್ಲಿ ಶಾಸಕ ವಿಜಯಾನಂದ ಕಾಶಪ್ಪನವರ ಒಂದು ಹೆಜ್ಜೆ ಮುಂದಿದ್ದಾರೆ. ಬಿಜೆಪಿ ಸದಸ್ಯರು ತಮ್ಮ ವರ್ತನೆ ಸರಿಪಡಿಸಿಕೊಳ್ಳದಿದ್ದರೆ ತಕ್ಕಪಾಠ ಕಲಿಸಲಾಗುವುದು ಎಂದು ಎಚ್ಚರಿಸಿದರು.
ಪುರಸಭೆ ಅಧ್ಯಕ್ಷ ಭಾಗ್ಯಶ್ರೀ ರೇವಡಿ, ಉಪಾಧ್ಯಕ್ಷೆ ರಾಜಮ್ಮ ಬಾದಾಮಿ ಹಾಗೂ ಸದಸ್ಯರು ಇದ್ದರು.
