ಹಂಪಿ: ಮೂರು ದಿನಗಳ ಕಾಲ ಅದ್ಧೂರಿಯಾಗಿ ನಡೆದ ವಿಶ್ವ ವಿಖ್ಯಾತ ಹಂಪಿ ಉತ್ಸವಕ್ಕೆ ವರ್ಣೆಂಜಿತ ತೆರೆ ಬಿದ್ದಿದೆ. ಮೂರು ದಿನಗಳ ಕಾಲ ನಾಲ್ಕು ವೇದಿಕೆಗಳಲ್ಲಿ ವಿಜಯನಗರ ಸಾಮ್ರಾಜ್ಯದ ಗತವೈಭವ ಮರುಕಳಿಸಿತು.
ಕನ್ನಡ ಚಿತ್ರರಂಗದ ನಟರು, ಸ್ಥಳಿಯ ಕಲಾವಿದರು, ಹಾಡು, ನಾಟಕ, ನೃತ್ಯ ಸೇರಿ ನಾನಾ ಕಲಾಪ್ರಕಾರಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿದರು.
ಹಂಪಿಯ ಗಾಯತ್ರಿ ಪೀಠ ಮುಖ್ಯ ವೇದಿಕೆಯಲ್ಲಿ ಸಮಾರೋಪದಲ್ಲಿ ನಟ. ವಿ.ರವಿಚಂದ್ರನ್ ಸೇರಿದಂತೆ ಪ್ರಮುಖ ಕಲಾವಿದರು ಭಾಗವಹಿಸಿದ್ದರು.
ವೇದಿಕೆಗೆ ಸೀಮಿತಗೊಂಡ ಸಚಿವ: ಸಚಿವ ಜಮೀರ್ ಅವರು ಮೊದಲ ದಿನ ಮಾತ್ರ ಕೆಲಮಳಿಗೆಗಳಿಗೆ ತೆರಳಿದ್ದರು. ನಂತರದ ಎರಡು ದಿನ ಯಾವುದೇ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿಲ್ಲ. ಕೇವಲ ರಾತ್ರಿ ವೇದಿಕೆ ಕಾರ್ಯಕ್ರಮದಲ್ಲಿ ಮಾತ್ರ ಕಾಣಿಸಿಕೊಂಡರು.
ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಮಾತನಾಡಿ, ದೇಶಿ ಕಲೆ, ಸಂಸ್ಕೃತಿ, ಸಂಸ್ಕಾರ ಇನ್ನೂ ಇದೆ ಎಂಬುದಕ್ಕೆ ಹಂಪಿ ಉತ್ಸವ ಸಾಕ್ಣಿಯಾಗಿದೆ. ಜಾತ್ರೆ, ಉತ್ಸವಗಳಲ್ಲಿ ಜನ ಕೇಕೆ ಹಾಕಬೇಕು. ಟ್ರಾಫಿಕ್ ಜಾಮ್ ಆದರೆ ಉತ್ಸವ ಯಶಸ್ವಿ ಎಲ್ಲ ಇಲಾಖೆಯ ಅಧಿಕಾರಿಗಳ ಹೆಸರು ಹಿಡಿದು ಪ್ರಶಂಸಿದ ಡಿಸಿ ಎಲ್ಲರ ಸಹಕಾರದಿಂದ ಕಾರ್ಯಕ್ರಮ ಯಶಸ್ವಿಯಾಗಿದೆ ಎಂದರು.
ಉತ್ಸವದ ಯಶಸ್ಸಿಗೆ ಶ್ರಮಿಸಿದ ಎಲ್ಲ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮ ವೀಕ್ಷಿಸಿದ ಸಚಿವ-ಮಾಜಿ ಸಚಿವ: ಸಚಿವ ಜಮೀರ್ ಮತ್ತು ಮಾಜಿ ಸಚಿವ ಆನಂದ್ ಸಿಂಗ್ ವೇದಿಕೆ ಉದ್ಘಾಟನೆ ಬಳಿಕೆ ವೇದಿಕೆ ಎದುರಿಗೆ ಕೂತು ಕಾರ್ಯಕ್ರಮ ವೀಕ್ಷಿಸಿದರು.
ನಟ ನೆನಪಿರಲಿ ಪ್ರೇಮ್, ಶಾಸಕರಾದ ಜೆ.ಎನ್.ಗಣೇಶ್, ರಾಘವೇಂದ್ರ ಹಿಟ್ನಾಳ್, ಎಂ.ಪಿ.ಲತಾ, ಜಿ.ಪಂ.ಸಿಇಒ ಸದಾಶಿವ ಬಿ.ಪ್ರಭು, ಎಡಿಸಿ ಜಿ.ಅನುರಾಧ, ಗ್ರಾ.ಪಂ.ಅಧ್ಯಕ್ಷೆ ರಜನಿ ಷಣ್ಮುಖ ಇದ್ದರು.
ವಿಜಯನಗರ ಹೆಸರಿನಲ್ಲೇ ರೋಮಾಂಚನ, ನಟ ವಿ.ರವಿಚಂದ್ರನ್
ಐತಿಹಾಸಿಕ ‘ವಿಜಯನಗರ’ ಹೆಸರು ಹೇಳಿದರೆ ಮೈ ರೋಮಾಂಚನವಾಗುತ್ತದೆ ಎಂದು ನಟ ವಿ.ರವಿಚಂದ್ರನ್ ಹೇಳಿದರು.
ಹಂಪಿಯ ಗಾಯತ್ರಿಪೀಠ ಮುಖ್ಯ ವೇದಿಕೆಯಲ್ಲಿ ಹಂಪಿ ಉತ್ಸವದ ಸಮಾರೋಪದಲ್ಲಿ ಮಾತನಾಡಿದರು.
ಹಂಪಿಯ ಪ್ರತಿ ಕಲ್ಲು ಕಲ್ಲುಗಳು, ಸ್ವರ, ಸಂಗೀತ, ಇತಿಹಾಸ ಹೇಳುತ್ತವೆ. ಅಂದಿನ ವಾಸ್ತು ಶಿಲ್ಷಪಿಗಳು ಎಷ್ಟೋ ವರ್ಷದ ಶ್ರಮದ ಫಲವಾಗಿ ಹಂಪಿ ವೈಭವವಾಗಿದೆ. ಕಲಾವಿದರು ಮಾಡಿರುವ ಹಂಪಿ ಇದು. ಅವರ ಮುಂದೆ ನಾವೆನು ಮಾಡಿಲ್ಲ. ಅವರಿಗೆ ನಮನ ಸಲ್ಲಿಸಲು ಬಂದಿದ್ದೇನೆ. ಹಂಪಿ ಉತ್ಸವ ಪ್ರತಿ ವರ್ಷ ದೊಡ್ಡದಾಗುತ್ತಾ ಹೋಗಬೇಕು ಎಂದು ಹೇಳಿದರು.
ಊರಿನ ಒಗ್ಗಟ್ಟು ತೋರಿಸಲು ಹಂಪಿ ಉತ್ಸವ: ಜನರ ಹುಮ್ಮಸ್ಸಿನಿಂದಲೇ ಉತ್ಸವ ಆಗುತ್ತವೆ. ಹಬ್ಬ ಎಲ್ಲರನ್ನೂ ಒಂದುಗೂಡಿಸುತ್ತದೆ. ಹಂಪಿ ಉತ್ಸವ ನಡೆಸುವುದು ಊರು ಒಗ್ಗಟ್ಟಾಗಲು. ನಾವು ಜತೆಗಿದ್ದೇವೆ ಎಂಬುದನ್ನು ತೋರಿಸುತ್ತದೆ ಎಂದರು.
ತಂದೆಯ ಮತ್ತು ಅಪ್ಪು ಅವರ ಅಪ್ಪುಗೆ ನೆನಪಿನೊಂದಿಗೆ ಮಾತು ಆರಂಭಿಸಿದ ಕ್ರೇಜಿಸ್ಟಾರ್, ಹಂಪಿ ಉತ್ಸವಕ್ಕೆ ಬರಲು 37 ವರ್ಷ ಆಗಿದೆ. ಈ ಹಿಂದೆ ಪ್ರೇಮಲೋಕ ಮಾಡಿದಾಗ ಬಂದಿದ್ದರ. ಮತ್ತೊಂದು ಪ್ರೇಮಲೋಕ ಶುರು ಮಾಡುವ ಕನಸು ಕಂಡಾಗ ಹಂಪಿ ನನ್ನನ್ನು ಕರೆಸಿಕೊಂಡಿದೆ ಎಂದರು
ನನಗೆ ಪ್ರೀತಿ ಬಿಟ್ಟರೆ ಬೇರೆ ಗೊತ್ತಿಲ್ಲ. ನಾವು ಮಾಡುವ ಒಳ್ಳೆ ಕೆಲಸ ಎಷ್ಷು ವರ್ಷ ಬೇಕಾದರೂ ಬದುಕಿಸುತ್ತದೆ ಎಂಬುದಕ್ಕೆ ಪ್ರೇಮಲೋಕ ಸಿನಿಮಾ ಸಾಕ್ಷಿ. ನನ್ನ ಗೆಲುವು ಸೋಲು ಜನರ ಕೈಯಲ್ಲಿದೆ. ನಾನು ಸೋತೆ ಇಲ್ಲ. ನಾನು ಅಂದ್ಕೊಂಡಂತೆ ಸಿನಿಮಾ ಮಾಡೋದು ನನ್ನಾಸೆ. ಗೆಲುವನ್ನು ದುಡ್ಡಿನಿಂದ ಅಳೆಯಲು ಸಾಧ್ಯವಿಲ್ಲ.ಮತ್ತೆ ಪ್ರೇಮಲೋಕ ಕಟ್ಟಿಕೊಡುವೆ. ಮುಂದಿನ ವರ್ಷ ಉತ್ಸವಕ್ಕೆ ಪ್ರೇಮಲೋಕ ರೆಡಿ-ಧೈರ್ಯವಾಗಿ ಬಂದುನಿಲ್ಲುತ್ತೇನೆ ಎಂದರು.