ನಿಮ್ಮ ಸುದ್ದಿ ಬಾಗಲಕೋಟೆ
ಜಿಲ್ಲೆಯ ಅಮೀನಗಡ ಪಟ್ಟಣದ 1994 ನೇ ಬ್ಯಾಚ್ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳು ಗುರುವಂದನೆ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಅಚರಿಸಲು ನಿರ್ಧರಿಸಿದರು.
ಪಟ್ಟಣದ ಮುರಾಳ ಫಾರ್ಮ ಹೌಸ್ ನಲ್ಲಿ ಭಾನುವಾರ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.
ಸಭೆಯಲ್ಲಿ ಮೊದಲ ಬಾರಿ ಸೇರಿದ್ದ ಹಳೆಯ ವಿದ್ಯಾರ್ಥಿಗಳು ಪರಸ್ಪರ ಪರಿಚಯಿಸಿಕೊಂಡರು. ತಮ್ಮ ಜೀವನಕ್ಕೆ ಬುನಾದಿ ಹಾಕಿದ ಗುರು ವೃಂದವನ್ನು ಗೌರವಿಸುವ ನಿಟ್ಟಿನಲ್ಲಿ ಸಪ್ಟಂಬರ್ ತಿಂಗಳಲ್ಲಿ ಕಾರ್ಯಕ್ರಮ ಆಯೋಜಿಸಲು ತೀರ್ಮಾನಿಸಿದರು.
ಗುರುವಂದನೆ ಕಾರ್ಯಕ್ರಮಕ್ಕೂ ಮುನ್ನ ಸ್ನೇಹ ಸಮ್ಮಿಲನ ಕಾರ್ಯಕ್ರಮ ನಡೆಯಲಿದೆ. ಮರುದಿನ ಕಲಿಸಿದ ಗುರುಗಳನ್ನು ಸಾರೋಟದಲ್ಲಿ ರಾಜ್ಯ ಹೆದ್ದಾರಿಯಲ್ಲಿ ಮೆರವಣಿಗೆ ಮೂಲಕ ವೇದಿಕೆವರೆಗೂ ಕರೆ ತಂದು ಗೌರವಿಸಿ ಸನ್ಮಾನಿಸಲು ಸಭೆ ನಿರ್ಧಿರಿಸಿತು.
ಇದೆ ಸಂದರ್ಭದಲ್ಲಿ ತಮ್ಮನ್ನೆಲ್ಲ ಅಗಲಿದ ಗುರುಗಳು ಹಾಗೂ ಗೆಳೆಯರಿಗೆ ನಮನ ಸಲ್ಲಿಸಲು ಸೂಚಿಸಲಾಯಿತು. ಸೇರಿದ್ದ ಗೆಳೆಯರು ಕಾರ್ಯಕ್ರಮದ ಕುರಿತು ತಮ್ಮ ಅನುಭವ ಹಂಚಿಕೊಂಡರು.
ಮುತ್ತಣ್ಣ ಹಳ್ಳದ, ರವಿ ಕರ್ಜಗಿ, ಭುವನೇಶ್ವರಿ ಬೇವೂರ, ಜ್ಯೋತಿ ಕುಪ್ಪಸ್ತ, ಬಸವರಾಜೆಶ್ವರಿ ಸಜ್ಜನ, ವಿಜಯಕುಮಾರ ಕನ್ನೂರ, ರಮೇಶ ಮುರಾಳ, ರವಿ.ಡಿ.ಎಸ್., ಅಮರೇಶ ಕರಡಿ, ಗುರು ಹಿರೇಮಠ, ಉಮಾ ಕಡೆಮನಿ, ಜಯಶ್ರೀ ಯರಗಲ್ ಇತರರು ಇದ್ದರು.