ಶಿವಮೊಗ್ಗ: ನಗರದಲ್ಲಿ ಮತ್ತೊಂದು ಅಗ್ನಿ ಅವಘಡ ಸಂಭವಿಸಿದ್ದು, ಒಂದು ವರ್ಷದ ಹಿಂದೆಯಷ್ಟೇ ಮನೆಗೆ ಆಕಸ್ಮಿಕ ಬೆಂಕಿ ಬಿದ್ದು ಉದ್ಯಮಿಯೊಬ್ಬರು ಬಲಿಯಾಗಿದ್ದರು. ಬೆನ್ನಲ್ಲೇ ಶಿವಮೊಗ್ಗದ ಪ್ರತಿಷ್ಠಿತ ಕಾರ್ ಶೋ ರೂಂಗೆ ಬೆಂಕಿ ಬಿದ್ದು ಕೋಟಿ ಕೋಟಿಗೂ ಅಧಿಕ ಕಾರ್ಗಳು ಬೆಂಕಿಗೆ ಆಹುತಿಯಾಗಿವೆ.
ಶುಕ್ರವಾರ ರಾತ್ರಿ ಸುಮಾರು 9.30 ಆಸುಪಾಸಿನಲ್ಲಿ ನಗರದ ಶಂಕರ ಮಠದ ರಸ್ತೆಯ ರಾಹುಲ್ ಹುಂಡೈ ಕಾರ್ ಶೋ ರೂಂನಲ್ಲಿ ಆಕಸ್ಮಿಕ ಬೆಂಕಿ ಕಂಡು ಬಂದಿದ್ದು, ನೋಡು ನೋಡುತ್ತಿದ್ದಂತೆ ಶೋಂ ನಲ್ಲಿ ಗ್ರಾಹಕರಗೆ ನೋಡಲು ಇಟ್ಟಿದ್ದ ಒಳಗೆ ಎರಡು ಕಾರ್ಗಳು ಬೆಂಕಿಗೆ ಆಹುತಿಯಾಗಿವೆ. ಇನ್ನೂ ಪಕ್ಕದಲ್ಲಿ ಟಾಟಾ ಕಾರ್ ಶೋ ರೂಂ ಇದೆ.
ಹುಂಡೈ ಶೋರೂಂ ಹತ್ತಿದ ಬೆಂಕಿಯು ಪಕ್ಕದ ಟಾಟಾ ಶೋ ಆವರಣದಲ್ಲಿ ನಿಲ್ಲಿಸಿದ್ದ ಸುಮಾರು ನಾಲ್ಕು ಕಾರ್ ಗಳು ಸುಟ್ಟು ಹೋಗಿವೆ. ಶೋ ರೂಂ ನಲ್ಲಿದ್ದ ಕಾರ್ಗೆ ಸಂಬಂಧಿಸಿದ ಬಿಡಿ ಭಾಗ ಮತ್ತು ಇತರೆ ವಸ್ತುಗಳು ಸೇರಿದಂತೆ ಒಟ್ಟು ಎರಡು ಕೋಟಿಗೂ ಅಧಿಕ ನಷ್ಟವಾಗಿದೆ.
ಸುಮಾರು ಮೂರು ಘಂಟೆಗೂ ಅಧಿಕಕಾಲ ಆಗ್ನಿಶಾಮಕ ಸಿಬ್ಬಂದಿ ಮತ್ತು ಅಧಿಕಾರಿಗಳು ಮೂರು ನಾಲ್ಕು ಅಗ್ನಿಶಾಮಕ ನಿರಂತರವಾಗಿ ಬಳಕೆ ಮಾಡಿಕೊಂಡು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.ಹುಂಡೈ ಶೋರೂಂ ನಲ್ಲಿದ್ದ ಕಾರ್ ಮತ್ತು ಬಿಡಿ ಭಾಗಗಳು ಸುಟ್ಟು ಭಸ್ಮವಾಗಿವೆ.