ಆಕರ್ಷಕ ಬೊಂಬೆ ಕುಣಿತ
ಅಮೀನಗಡ
ಪಟ್ಟಣದಲ್ಲಿ ಶ್ರಾವಣ ಮಾಸದ ಕೊನೆಯ ಸೋಮವಾರ ಹೂವಿನಿಂದ ಅಲಂಕೃತಗೊAಡ ಸಂಗಮೇಶ್ವರ ಪಲ್ಲಕ್ಕಿ ಉತ್ಸವ ಅದ್ದೂರಿಯಾಗಿ ನಡೆಯಿತು.
ಸಮಾಜದ ಯುವಕರು ಪಲ್ಲಕ್ಕಿ ಉತ್ಸವದೊಂದಿಗೆ ನಾನಾ ಜನಪದ ಕಲಾವಿದರನ್ನು ಬರಮಾಡಿಕೊಂಡು ಕಲೆಗಳ ಪ್ರದರ್ಶನ ಪಟ್ಟಣದ ಜನತೆಗೆ ತೋರ್ಪಡಿಸಿದರು.
ರನ್ನಬೆಳಗಲಿಯ ಗುಂಡ ಬಸವೇಶ್ವರ ಜಾಂಜ್ ಮೇಳ, ಗುಡೂರಿನ ಸರಸ್ವತಿ ಬ್ಯಾಂಜೋ, ಸ್ಥಳೀಯ ಶಾಖಾಂಬರಿ ತರುಣ ಸಂಘದಿAದ ಕರಡಿ ಮಜಲು ಸೇರಿದಂತೆ ನಾನಾ ಜನಪದ ಕಲಾ ತಂಡಗಳು ಪಲ್ಲಕ್ಕಿ ಉತ್ಸವಕ್ಕೆ ಮತ್ತಷ್ಟು ಕಳೆ ತಂದವು.
ಸಂಗಮೇಶ್ವರ ಪಲ್ಲಕ್ಕಿ ಉತ್ಸವ ಕಮಿಟಿ ಅಧ್ಯಕ್ಷ ಬಸವಾನಂದ ಯಡ್ರಾಮಿ, ಉಪಾಧ್ಯಕ್ಷ ಅನೀಲ ಐಹೊಳ್ಳಿ, ಪಪಂ ಸದಸ್ಯ ಸಂತೋಷ ಐಹೊಳ್ಳಿ, ಅಪ್ಪಣ್ಣ ಮಮದಾಪುರ, ಆರ್.ಕೆ.ಗೌಡರ, ಮುತ್ತಣ್ಣ ಕಬ್ಬಿಣದ, ಪ್ರಸನ್ನ ತಾಳಿಕೋಟಿ, ಗುರು ವಂದಾಲ, ರೋಹಿತ ತಾಳಿಕೋಟಿ, ವಿಜಯ ಯಡ್ರಾಮಿ, ರಾಹುಲ ಸಜ್ಜನ, ಶಿವು ಬ್ಯಾಳಿ, ಆನಂದ ಗೌಡರ, ಆನಂದ ಐಹೊಳ್ಳಿ, ಕುಮಾರ ಜತ್ತಿ, ಅಶೋಕ ಕುಪ್ಪಸ್ತ, ವೀರೇಶ ಬನ್ನೂರ, ನವೀನ ಪಾಟೀಲ ಇತರರು ಇದ್ದರು.
ಮೆರವಣಿಗೆ
ಸಂಗಮೇಶ್ವರ ದೇವಸ್ಥಾನದಿಂದ ಹೊರಟ ಪಲ್ಲಕ್ಕಿ ಉತ್ಸವ ಅಗಸಿ ಬಾಗಿಲು, ಕೂಡಲಸಂಗಮ ಕ್ರಾಸ್, ರಾಯಚೂರು-ಬೆಳಗಾವಿ ರಾಜ್ಯ ಹೆದ್ದಾರಿ ಮಾರ್ಗವಾಗಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಮಧ್ಯಾಹ್ನ ಈಶ್ವರ ಹಾಗೂ ಸಂಗಮೇಶ್ವರ ದೇವಸ್ಥಾನದಲ್ಲಿ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.