This is the title of the web page
This is the title of the web page

Live Stream

May 2025
S M T W T F S
 123
45678910
11121314151617
18192021222324
25262728293031

| Latest Version 9.4.1 |

Education NewsInternational NewsNational NewsState News

ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಪಕ್ಷಾತಿತವಾಗಿ ಜೀವನ ಮರಣದ ಹೋರಾಟ ಅಗತ್ಯ

ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಪಕ್ಷಾತಿತವಾಗಿ ಜೀವನ ಮರಣದ ಹೋರಾಟ ಅಗತ್ಯ

ಬಾಗಲಕೊಟೆ

ಕರ್ನಾಟಕದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಪಕ್ಷಾತಿತ, ಶಿಕ್ಷಕ ಸಂಘಟನೆಗಳು ಶಿಕ್ಷಕರು ಜೀವನ ಮರಣದ ಹೋರಾಟಮಾಡುವ ಅಗತ್ಯವಿದೆ ಎಂದು ಬೆಂಗಳೂರಿನ ಖ್ಯಾತ ಪತ್ರಕರ್ತ ರವೀಂದ್ರ ರೇಷ್ಮೆ ಹೇಳಿದರು.

ಅವರು ಬಾಗಲಕೋಟೆಯ ಪ್ರತಿಷ್ಠಿತ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದ ನೂತನ ಸಭಾಭವನದಲ್ಲಿ ಸೋಮವಾರ ಪೀಪಲ್ಸ್ ಘೋರಮ್ ಫಾರ್ ಕರ್ನಾಟಕ ಎಜ್ಯುಕೇಷನ್ ಬಾಗಲಕೋಟೆ ವತಿಯಿಂದ ಹಮ್ಮಿಕೊಂಡ ರಾಷ್ಟ್ರೀಯ ಶಿಕ್ಷಣ ನೀತಿ-೨೦೨೦ ರ ಶಿಕ್ಷಣ ತಜ್ಞರ ವಿಷೇಶ ಸಭೆಯಲ್ಲಿ ಮುಖ್ಯ ವಕ್ತಾರರಾಗಿ ಆಗಮಿಸಿ ಮಾತನಾಡಿದರು.

ದೇಶದಲ್ಲಿ ಮೊದಲು ರಾಷ್ಟ್ರೀಯ ನೀತಿಗಳನ್ನು ತಂದವರು ಕಾಂಗ್ರಸ್ಸ್ ಪಕ್ಷದವರೆಯಾದರೂ ಇಂದು ಅವರು ವಿರೋದಿಸುತ್ತಿರುವುದಕ್ಕೆ ಮೋದಿ ಅವರ ಹೆಸರು ಕಾರಣವಾಗಿದೆ, ಆದರೆ ಇದು ವರೆಗೂ ಕಾಂಗ್ರೇಸ್ಸ್ ಪಕ್ಷದ ಹೈಕಮಾಂಡ ಹಾಗೂ ಸೋನಿಯಾ ಗಾಂದಿ ಕೂಡಾ ಈ ರಾಷ್ಟ್ರೀಯ ಶಿಕ್ಷಣ ನೀತಿ ವಿರೋದಿಸಿಲ್ಲಾ, ರಾಜ್ಯದಲ್ಲಿ ಕಾಂಗ್ರೇಸ್ಸ ಪಕ್ಷ ಅಧಿಕಾರಕ್ಕೆ ಬಂದಾಗಲೆಲ್ಲಾ ಶಿಕ್ಷಣ ರಂಗಕ್ಕೆ ತಡೆ ಬಂದಿರುವ ಬಗ್ಗೆ ಅನೇಕ ಉಧಾರಣೆಗಳು ಇವೆ ಎಂದರು.

ರಾಷ್ಟ್ರೀಯ ಶಿಕ್ಷಣ ನೀತಿ ಬಗ್ಗೆ ಉತ್ತರ ಭಾರತ ಸಂಸ್ಕೃತಿ ಹೆರುವ ಹುನ್ನಾರವಿದೆ ಎಂದು ಹೇಳುವ ಇಂದಿನ ಪ್ರಾಥಮಿಕ ಶಿಕ್ಷಣ ಸಚಿವರ ಮಾತು ಅದು ರಾಷ್ಟ್ರೀಯ ಕಾಂಗ್ರೇಸ್ಸ ಪಕ್ಷಕ್ಕೆ ಹಾಗೂ ನೇಹರು ಹಾಗೂ ಇಂದಿರಾ ಕುಟುಂಬಕ್ಕೆ ಮಾಡಿದ ಅಪಮಾನ ವಾಗಿದೆ, ಒಂದು ರಾಷ್ಟ್ರೀಯ ಪಕ್ಷದ ಮುಖ್ಯಮಂತ್ರಿಯಾಗಿ ಒಂದು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ತಿರಸ್ಕರಿಸುತ್ತಿರುವುದು ವಿಪರ್ಯಾಸ, ರಾಷ್ಟ್ರೀಯ ಪರಿಕಲ್ಪನೆ ಇವರಿಗಿಲ್ಲವೆ ಎಂದ ಅವರು ಇದರಲ್ಲಿ ರಾಜಕೀಯ ಬೇಡ, ಪಕ್ಷಾತಿತವಾಗಿ ಹೋರಾಟದ ಅಗತ್ಯವಿದೆ, ಶಿಕ್ಷಕ ಬಂದುಗಳು, ಶಿಕ್ಷಕ ಸಂಘಟನೆಗಳು ಎಲ್ಲರೂ ಈ ರಾಷ್ಟ್ರೀಯ ಶೀಕ್ಷಣ ನೀತಿ ಜಾರಿಗಾಗಿ ಜೀವನ ಮರಣದ ಹೋರಾಟದ ಆಂಧೋಲನವನ್ನು ಮಾಡುವ ಅಗತ್ಯತೆ ಇದೆ ಎಂದರು.

ದೇಶದ ಸಮಗ್ರ ಅಭಿವೃದ್ಧಿ ಮುಂದಿನ ನಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕೆ ಈ ರಾಷ್ಟಿçÃಯ ಶಿಕ್ಷಣ ನೀತಿ ಅವಶ್ಯವಾಗಿದೆ, ಇದು ಭಾರತದ ಶಿಕ್ಷಣ ನೀತಿ ಮಾತ್ರವಲ್ಲಾ ಜಾಗತೀಕ ಶಿಕ್ಷಣ ನೀತಿಯಾಗಿದೆ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ಚರ್ಚೆಗೆ ಸರ್ವಪಕ್ಷದ ಸಭೆ ಕರೆಯಲಿ ಎಂದರು.

ಕಾರ್ಯಕ್ರಮದಲ್ಲಿ ಪ್ರಸ್ತಾವಿಕವಾಗಿ ಭಾರತೀಯ ಶಿಕ್ಷಣ ಮಂಡಲ ಕರ್ನಾಟಕ ಉತ್ತರ ಪ್ರಾಂತ ಕಾರ್ಯದರ್ಶಿಯಾದ ಡಾ.ಗೀರಿಶ ತೆಗ್ಗಿನಮಠ ಮಾತನಾಡಿ ಶಿಕ್ಷಣ ಎಂದರೆ ಹಣ ಗಳಿಸುವ ಮಾರ್ಗವಲ್ಲ ಅದು ಪರಿಪೂರ್ಣತೆಯ ಮನುಷ್ಯನನ್ನು ನಿರ್ಮಾಣಮಾಡುವುದಾಗಿದೆ, ಈ ಮೇಕಾಲೆ ಶಿಕ್ಷಣ ಗುಲಾಮರನ್ನು ತಯಾರು ಮಾಡುವ ಶಿಕ್ಷಣ ಪದ್ದತಿಯಾಗಿದೆ ಅದು ಬೇಡ ನಮಗೆ, ನಮ್ಮ ಭಾರತೀತೆಗೆ ಬೇಕಾಗುವು ನಮ್ಮ ಮೂಲ ಗುರುಕುಲ ಶಿಕ್ಷಣದ ಅವಶ್ಯಕತೆ ಇದೆ, ಶಿಕ್ಷಕ್ಷರು ಋಷಿಗಳಂತೆ ಬದುಕಬೇಕು,ಭಾರತ ಭಾರತವಾಗಿ ಉಳಿಯಲು ರಾಷ್ಟ್ರೀಯ ಶಿಕ್ಷಣ ನೀತಿಯ ಅವಶ್ಯವಾಗಿದೆ ಎಂದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಮಾತನಾಡಿದ ವಿಜಯಪುರದ ಬಿ.ಎಲ್.ಡಿ.ಇ ಮೆಡಿಕಲ್ ನ ವಿಶ್ರಾಂತ ಕುಲಪತಿಗಳಾದ ಪ್ರೋ ಸತೀಶ ಜಿಗಜಿನ್ನಿ ರಾಷ್ಟ್ರೀಯ ಶಿಕ್ಷಣ ನೀತಿ ಇದು ಅಂತರಾಷ್ಟ್ರೀಯ ಶಿಕ್ಷಣ ನೀತಿಯಾಗಿದ್ದು ಈ ಶಿಕ್ಷಣ ನೀತಿ ಸರ್ವಾಂಗಿಣ ಅಭಿವೃದ್ದಿಗಾಗಿ ಇದರಲ್ಲಿ ಜಾಗತಿಕವಾಗಿ ೧೭ ಗುರಿಗಳನ್ನು ನಮೊಧಿಸಲಾಗಿದೆ, ಈ ಗುರಿಗಳನ್ನು ಪಾಲಿಸಿಸುವುದ ಪ್ರತಿದೇಶದ ಕರ್ತವ್ಯವಾಗಿದೆ, ಅಂತರಾಷ್ಟ್ರೀಯ ಮನ್ನಣೆಗೆ ನಾವು ಈ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತರಬೇಕಾಗಿದೆ, ಇದು ಒಂದು ಭಾರತೀಯ ನೈತಿಕತೆ ಮತ್ತು ಸಂಸ್ಕೃತಿಯನ್ನು ಪ್ರತಿಬಿಂಬುಸುವತ್ತ ಇಟ್ಟ ಹೆಜ್ಜೆಯಾಗಿದ್ದು, ಸುಸ್ಥಿರ ಅಭಿವೃದ್ಧಿ ಗುರಿ ಹಾಗೂ ಗುಣಮಟ್ಟದ ಶಿಕ್ಷಣ ನೀಡುವುದಾಗಿದೆ. ಜೋತಗೆ ಈ ಶಿಕ್ಷಣ ನೀತಿಯಲ್ಲಿ ತ್ರೀಬಾಷಾ ಸೂತ್ರ ಅಳವಡಿಸಿದ್ದು ಮಾತೃಭಾಷೆಯಲ್ಲಿ ಶಿಕ್ಷಣಕ್ಕೆ ಒತ್ತು ನೀಡಲಾಗಿದೆ ಎಂದರು.

ಪ್ರಶ್ನೋತ್ತರದಲ್ಲಿ ಮಾತನಾಡಿದ ಪ್ರಾಥಮಿಕ ಮತ್ತು ಪ್ರೌಡ ಶಿಕ್ಷಣ ಮಾಜಿ ಸಚಿವರಾದ ಬಿ.ಆರ್.ನಾಗೇಶ ದೇಶದಲ್ಲಿ ಕಟ್ಟಕಡೆಯ ಶಾಲೆಯಲ್ಲಿ ಕಟ್ಟಕಡೆಯ ಮಗುವಿಗೂ ಒಂದೆ ಶಿಕ್ಷಣ ನೀತಿ ಇದಾಗಿದೆ, ರಾಷ್ಟಿçÃಯ ಶಿಕ್ಷಣ ನೀತಿಯನ್ನು ಜಾರಿಗೊಳಿಸುವ ಮುನ್ನ ಅದರ ಕರಡು ಪ್ರತಿಯನನು ಎಲ್ಲರಿಗೂ ಲಭ್ಯವಾಗುವ ಹಾಗೆ ಮಾಡಿ ಅಭೂತ ಪೂರ್ವ ಸಮಾಲೋಚನೆ ಮಾಡಲಾಗಿದ್ದು,ಸುಮಾರು ೨ಲಕ್ಷ ಸಲಹೆಗಳು,೨.೫ ಲಕ್ಷ ಗ್ರಾಮ ಪಂಚಾಯತಿಗಳು,೬೬೦೦ ಬ್ಲಾಕ್ಗಳ ೬೦೦೦ ನಗರ ಸ್ಥಳಿಯ ಸಂಸ್ಥೆಗಳು.೬೭೬ ಜಿಲ್ಲೆಗಳು ತೊಡಗಿಸಿಕೊಂಡು ವಿಡಿಯೋ ಕಾನ್ಪರೆನ್ಸ ಮೂಲಕ ಕೇಂದ್ರ ಸರ್ಕಾರದ ಅಂದಿನ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾಣಿ ರಾಜ್ಯ ಮತ್ತು ಜಿಲ್ಲಾ ಮಟ್ಟದ ಶಿಕ್ಷಣ ಅಧಿಕರಿಗಳ ಜತೆ ಸ್ಥಳಿಯ ಚುನಾಯಿತ ಪ್ರತಿನಿಧಿಗಳ ಜೋತೆ ನೀತಿ ಕುರಿತು ಸಂಪರ್ಕಿಸಿದ ನಂತರ ರಾಜ್ಯ ಸರ್ಕಾರ,ಕೆಂದ್ರಾಡಳತ ಮಂತ್ರಿಮAಡಲ,ಅಧಿಕಾರಿಗಳೋಡನೆ ಆರು ವಲಯದಲ್ಲಿ ಸಭೆ ನಡೆಸಿ ಅಭಿಪ್ರಯಾ ಸಂಗ್ರಹಿಸಲಾಗಿತ್ತು ಎಂದರು.

ವಿಧಾನ ಪರಿಷತ್ತಿನ ಮಾಜಿ ಸದಸ್ಯ ಅರುಣ ಶಹಾಪುರ ಮಾತನಾಡಿ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಹಿಂದಿ ಹೇರಿಕೆ ಇಲ್ಲಾ, ಇದರಲ್ಲಿ ತ್ರಿಭಾಷಾ ಸೂತ್ರ ವಿದೆ, ಮಾತೃಭಾಷೆಯಲ್ಲಿನ ಶಿಕ್ಷಣಕ್ಕೆ ಒತ್ತು ನೀಡಲಾಗಿದೆ, ದೇಶದ ಭಾಷೆಗಳು ಅಖಂಡತೆಯನ್ನು ಸಾರುತ್ತವೆ ಎಂದರು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಬಿ.ವ್ಹಿವ್ಹಿ.ಸಂಘದ ಕಾರ್ಯಾಧ್ಯಕ್ಷರಾದ ಡಾ.ವೀರಣ್ಣ ಚರಂತಿಮಠ, ವಿಧಾನ ಪರಿಷತ್ತ್ ಸದಸ್ಯ ಹನಮಂತ ನಿರಾಣಿ, ಪರಿಷತ್ತಿನ ಮಾಜಿ ಸದಸ್ಯ ನಾರಾಯಣಸಾ ಭಾಂಡಗೆ, ಗುರುಬಸವ ಸೂಳಿಬಾವಿ,ಅಶೋಕ ಸಜ್ಜನ,ಮಹಾಂತೇಶ ಶೆಟ್ಟರ, ಎಸ್,ಆರ,ಮನಹಳ್ಳಿ,ಜಿಬಿ. ದಾನಶೆಟ್ಟಿ.ವಿ.ಪಿ ಗಿರಿಸಾಗರ ಸೇರಿದಂತೆ ಮಹಾವಿದ್ಯಾಲಯಗಳ ಪ್ರಾಚಾರ್ಯರು,ಶಿಕ್ಷಣ ಪ್ರೇಮಿಗಳು,ಸಂಘಸAಸ್ಥೆಗಳ ಮುಖ್ಯಸ್ಥರು.ಸಾಹಿತಗಳು,ಶಿಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಬಾಗವಹಿಸಿದ್ದರು.

 

 

Nimma Suddi
";