This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

Crime NewsState News

ಜಗಳ ಆಡುವಾಗ ಕಪಾಳಕ್ಕೆ ಹೊಡೆದಿದ್ದಕ್ಕೆ ವ್ಯಕ್ತಿ ಸಾವು

ಜಗಳ ಆಡುವಾಗ ಕಪಾಳಕ್ಕೆ ಹೊಡೆದಿದ್ದಕ್ಕೆ ವ್ಯಕ್ತಿ ಸಾವು

ಬೆಂಗಳೂರು,: ಜಗಳ ಆಡುವಾಗ ಕಪಾಳಕ್ಕೆ ಹೊಡೆದಿದ್ದರಿಂದ ವ್ಯಕ್ತಿ ಸಾವನ್ನಪ್ಪಿರುವಂತಹ ಘಟನೆ ಬೆಂಗಳೂರಿನ ಬೆಳ್ತೂರು ಕಾಲೋನಿಯಲ್ಲಿ ನಡೆದಿದೆ. ಪ್ರಭುರಾಮ್​ ಪ್ರಸಾದ್​ ಮೃತ ವ್ಯಕ್ತಿ. ಅನಿಲ್ ಕಪಾಳಕ್ಕೆ ಹೊಡೆದ ವ್ಯಕ್ತಿ.

ಮೃತ ಪ್ರಭುರಾಮ್ ನಿನ್ನೆ ಮಗನ ಜೊತೆ ಹಬ್ಬಕ್ಕೆಂದು ಬೈಕ್​​ನಲ್ಲಿ ದೇಗುಲದ ಬಳಿ ಹೋಗಿದ್ದ. ದಾರಿ ಮಧ್ಯೆ ಬೈಕ್​ನಲ್ಲಿ ಸೌಂಡ್ ಬರ್ತಿದೆ ಅಂತಾ ಬೈಕ್​ನ್ನು​ ಸೈಡ್​ ಹಾಕಿ ಪರಿಶೀಲನೆ ಮಾಡುತ್ತಿದ್ದರು. ಈ ವೇಳೆ ಕಾರಿನಲ್ಲಿ ಬಂದ ಪರಿಚಯಸ್ಥ ಮಹಿಳೆ ಬೈಕ್​ಗೆ​ ಟಚ್ ಮಾಡಿದರು.

ಇದನ್ನು ಪ್ರಶ್ನೆ ಮಾಡಿದ್ದಕ್ಕೆ ಮನೆ ಬಳಿ ಬಾ ಎಂದು ಮಹಿಳೆ ಹೊರಟು ಹೋಗಿದ್ದಾರೆ. ಮನೆ ಬಳಿ ಹೋದಾಗ ಮಹಿಳೆ ಪತಿ ಅನಿಲ್ ಜತೆ ಪ್ರಭುರಾಮ್ ಜಗಳವಾಗಿದೆ. ಈ ವೇಳೆ ಪ್ರಭುರಾಮ್​ ಕೆನ್ನೆಗೆ 4-5 ಬಾರಿ ಅನಿಲ್ ಹೊಡೆದಿದ್ದಾರೆ.​

ಜಗಳದ ಬಳಿಕ ಮನೆಗೆ ಹೋಗಿ ನೋವಿನಲ್ಲೇ ಮಲಗಿದ್ದ ಪ್ರಭುರಾಮ್, ರಾತ್ರಿ 1 ಗಂಟೆ ಸುಮಾರಿಗೆ ಮಲಗಿದ್ದಲ್ಲೇ ಮೃತಪಟ್ಟಿದ್ದಾರೆ. ಘಟನೆ ಸಂಬಂಧ ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಕೇಸ್​ ದಾಖಲಾಗಿದೆ ಎಂದು ಮಾಹಿತಿ ತಿಳಿದು ಬಂದಿದೆ.

";