ನಿಮ್ಮ ಸುದ್ದಿ ವಿಜಯಪುರ
ಪತ್ರಕರ್ತರ ಸಂಘದ ಬೇಡಿಕೆಗಳ ಕುರಿತು ಮುಂಬರುವ ಬಜೆಟ್ ಆಧಿವೇಶನದಲ್ಲಿ ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಸಿಎಂ ಭರವಸೆ ನೀಡಿದರು.
ನಗರದಲ್ಲಿ ನಡೆದ 37ನೇ ರಾಜ್ಯಮಟ್ಟದ ಪತ್ರಕರ್ತರ ಸಮ್ಮೇಳನ ಉದ್ಘಾಟಿಸಿ ಆವರು ಮಾತನಾಡಿದರು. ನಾಡಿನ ದೊರೆ ಅನ್ನಬೇಡಿ, ಅದು ನನಗೆ ಕಸಿವಿಸಿ ಆಗುತ್ತದೆ. ಪ್ರಜೆಗಳೆ ಪ್ರಭುಗಳು, ಸಿಎಂ ಸ್ಥಾನ ಜನರ ಸೇವಕ, ಅದನ್ನು ಮರೆತರೆ ಸಿಎಂ ಸ್ಥಾನಕ್ಕೆ ನ್ಯಾಯ ಕೊಡಲು ಆಗುವುದಿಲ್ಲ ಎಂದರು.
ಬಸವಣ್ಣ, ಆಧ್ಯಾತ್ಮಿಕ ಚಿಂತಕರ ಭೂಮಿ ವಿಜಯಪುರ. ಇಲ್ಲಿನ ಮೌಲ್ಯಗಳನ್ನು ಮನದಾಳದಲ್ಲಿ ತುಂಬಿಕೊಂಡು ಸಾಗಬೇಕು, ಬಿಳಿಜೋಳ ಶ್ರೇಷ್ಠ, ಹೈಬ್ರಿಡ್ ಕಾಲದಲ್ಲೂ ಬಿಳಿಜೋಳ ಸತ್ವಯುತ ಹಾಗೂ ಆಹಾರ ಭಾಗ್ಯವಿದ್ದಂತೆ. ಅದರಂತೆ ಇಲ್ಲಿನ ಜನ ಗಟ್ಟಿ, ಪ್ರೀತಿವಂತರು, ಪ್ರಾಮಾಣಿಕರು, ಕಾಯಕ್ಕೆ ಹೆಚ್ಚು ಮಹತ್ವ ನೀಡಿದವರು. ವಿಜಯಪುರದಲ್ಲಿ ಮತ್ತಷ್ಟು ಆಭಿವೃದ್ಧಿಯ ಅವಶ್ಯಕತೆ ಇದೆ, ಇಲ್ಲಿನ ನೀರು ಕೊನೆಯ ಭಾಗಕ್ಕೆ ನೀರು ಹೋದಾಗ ದೇಶಕ್ಕೆ ಅನ್ನ ನೀಡುವ ಕೆಲಸ ರೈತನಿಂದಾಗುತ್ತದೆ.
ಸರ್ವಸ್ವ ತ್ಯಾಗ ಮಾಡಿದ ಪೀಳಿಗೆ ಇದೆ, ಮೂರನೇ ಪೀಳಿಗೆ ಅವರ ಕನಸು ನನಸಾಗಬೇಕು, ನೀರಾವರಿ ಸಚಿವನಾದಾಗ ಕೆಲ ಆಧಿಕಾರಿಗಳು ಆ ಯೋಜನೆ ಬೇಡ ಅದು ಸ್ಕೀಂ ಬಿ ಎಂದರು, ಮಹಾರಾಷ್ಟ್ರ ಆಂದ್ರದಲ್ಲಿ ಇರದ ಸ್ಕಿಂ ಎ, ಬಿ ಯಾಕೆ? ಎಂದು ಕೇಳಿದೆ. ಅಧಿಕಾರಕ್ಕೆ ಬಂದ ಮೇಲೆ ಇಲ್ಲಿನ ೯ ಯೋಜನೆಯಲ್ಲಿ ೭ ಯೋಜನೆ ಆರಂಭಿಸಿದೆ, ಆಡಳಿತ ಮಾಡುವವರಿಗೆ ಸ್ಪಷ್ಠತೆ ಇರಬೇಕು, ರಾಜ್ಯದ ಸಂಪೂರ್ಣ ಆಭಿವೃದ್ಧಿಗೆ ಬದ್ಧನಾಗಿದ್ದೇನೆ ಎಂದು ಹೇಳಿದರು.
ಪತ್ರಕರ್ತರು ಪ್ರಾದೇಶಿಕ ಪತ್ರಕರ್ತರಾಗಬೇಡಿ, ಸಮಗ್ರ ಪತ್ರಕರ್ತರಾಗಿ, ಒಂದು ಭಾಗಕ್ಕೆ ಸೀಮಿತವಾಗಬೇಡಿ, ಪತ್ರಕರ್ತರು ರಾಜಕಾರಣಿಗಳದ್ದು ಅವಿನಾಭಾವ ಸಂಬಂಧ, ರಾಜಕಾರಣಿಗಳು ಪತ್ರಿಕೆ ಇಲ್ಲ ಯಾರೂ ಕೇಳುತ್ತಿದ್ದಿಲ್ಲ, ಇಂದು ಮುಖಪುಟದಲ್ಲೂ ರಾಜಕಾರಣ ಸುದ್ದಿ ಇರುವಂತಾಗಿದೆ. ಪ್ರಾಮಾಣಿಕ ಹಾಗೂ ಕಾರ್ಯನಿರತ, ಆರೋಗ್ಯಕರ ಸಂಬಂಧವಾಗಿದ್ದು ಪತ್ರಿಕೋದ್ಯಮ ಬದಲಾವಣೆ ಆಗಬೇಕು, ಪ್ರತಿ ಓದುಗನೂ ಪತ್ರಕರ್ತನಾಗಿದ್ದು ಸವಾಲಿನ ಕೆಲಸ, ವಿಶ್ವಾಸಾರ್ಹತೆಯಿಂದ ಕಾರ್ಯ ನ ಇರ್ವಹಿಸಬೇಕು. ನಿಮಗೆ ಹೇಳಿದ್ದು ನಮಗೂ ಅನ್ವಯಿಸುತ್ತದೆ ಎಂದರು.
ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್ ಒಪ್ಪುತ್ತೇನೆ, ಯಾರೂ ಗ್ರಾಮೀಣರು ಎಂದು ಸಂಘ ತಿಳಿಸಬೇಕು, ಬಜೆಟ್ ನಲ್ಲಿ ನಿವೃತ್ತರಿಗೆ ವೇತನ ಹೆಚ್ಚಳ, ಪರಿಷತ್ ಆವಕಾಶ ಸಿಕ್ಕರೆ ನೋಡೋಣ, ಪತ್ರಕರ್ತರಿಗೆ ಸಿಎ ನಿವೇಶನ ಮಾಡುತ್ತೇನೆ, ಯಶಸ್ವಿನಿ ವ್ಯಾಪ್ತಿಗೆ ಪರಿಶೀಲನೆ ಕೂಡಲೆ ಕ್ರಮ ಕೈಗೊಳ್ಳುತ್ತೇನೆ ಎಂಬ ಭರವಸೆ ನೀಡುವರು.