ನಿಮ್ಮ ಸುದ್ದಿ ಬಾಗಲಕೋಟೆ
ನಗರದ ಡಾ.ವಾಸನದ ಆಸ್ಪತ್ರೆಯಲ್ಲಿ ಉತ್ತರ ಕರ್ನಾಟಕದಲ್ಲೇ ಮೊದಲ ಬಾರಿಗೆ ಭುಜದ ಅಪರೂಪದ ಶಸ್ತçಚಿಕಿತ್ಸೆ ನಡೆಸಿ ಹಿರಿಯ ಮಹಿಳೆಯನ್ನು ಬಹುದಿನಗಳ ನೋವಿನಿಂದ ಮುಕ್ತಗೊಳಿಸಲಾಗಿದೆ.
ಈ ಕುರಿತು ಆಸ್ಪತ್ರೆಯ ಎಲುಬು ಕೀಲು ತಜ್ಞ ಡಾ.ಗಿರೀಶ ವಾಸನದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.
ತಾಲೂಕಿನ ಛಬ್ಬಿ ಗ್ರಾಮದ ೬೫ ವರ್ಷದ ಮಹಿಳೆಯೊಬ್ಬರು ಶಸ್ತçಚಿಕಿತ್ಸೆಗೆ ಒಳಗಾದವರು. ಇವರು ಕೆಲವು ವರ್ಷಗಳ ಹಿಂದೆ ಆಯತಪ್ಪಿ ಬಿದ್ದು ಎಡಭುಜದ ಕೀಲಿಗೆ ಪೆಟ್ಟು ಬಿದ್ದಿತ್ತು. ಈ ನೋವಿನ ಬಗ್ಗೆ ಹೆಚ್ಚು ಗಮನ ನೀಡದೆ ಹಳ್ಳಿಯಲ್ಲೇ ಚಿಕಿತ್ಸೆ ಪಡೆದಿದ್ದರು. ತಾತ್ಕಾಲಿಕವಾಗಿ ನೋವು ಕಡಿಮೆಯಾಗಿತ್ತು.
ಕೆಲವು ತಿಂಗಳಿಂದ ಮತ್ತೆ ನೋವು ಕಾಣಿಸಿಕೊಂಡು ಅದು ಕ್ರಮೇಣ ಹೆಚ್ಚಾಗಿ ಎಡಗೈಯನ್ನು ಮೇಲೆತ್ತಲು ಆಗದ ಸ್ಥಿತಿ ತಲುಪಿ ಆಸ್ಪತ್ರೆಗೆ ಆಗಮಿಸಿದ್ದರು. ಕೂಡಲೇ ತಪಾಸಣೆ ನಡೆಸಿ ಮಹಿಳೆ ಶೋಲ್ಡರ್ ಆರ್‌ರ್ಥೈಟೀಸ್ (ಭುಜದ ಸಂಧಿವಾತ) ನಿಂದ ಬಳಲುತ್ತಿದ್ದಾರೆ ಎಂಬುದನ್ನು ಪತ್ತೆಹಚ್ಚಲಾಯಿತು. ಅತಿ ವಿರಳ ಎನಿಸಿದ ‘ರಿವರ್ಸ್ ಶೋಲ್ಡರ್ ಆಥ್ರೋðಪ್ಲಾಸ್ಟಿ’ ಶಸ್ತçಚಿಕಿತ್ಸೆ ನಡೆಸಿದಾಗ ಮಹಿಳೆ ನೋವಿನಿಂದ ಸಂಪೂರ್ಣ ಮುಕ್ತರಾಗಿದ್ದಾರೆ ಎಂದು ಡಾ.ವಾಸನದ ತಿಳಿಸಿದ್ದಾರೆ.
ಬೆಳಗಾವಿಯ ಶಸ್ತçಚಿಕಿತ್ಸಕ ಡಾ.ಜಗದೀಶ ಎಸ್., ಡಾ.ಬಸವರಾಜ ಮೇಟಿ, ಅರಿವಳಿಕೆ ತಜ್ಞೆ ಡಾ.ಶಿಲ್ಪಾ ಮಾಸೂರ, ಡಾ.ರಮೇಶ ಸಿಂಗರೆಡ್ಡಿ, ಫಿಜಿಯೋಥೆರಪಿಸ್ಟ್ ಡಾ.ರವೀಂದ್ರ ಕುಲಕರ್ಣಿ ಮತ್ತು ಶುಶ್ರೂಷಕ ಸಿಬ್ಬಂದಿ ಶಸ್ತçಚಿಕಿತ್ಸೆಗೆ ಸಹಕರಿಸಿದ್ದರು.
ರಿವರ್ಸ್ ಶೋಲ್ಡರ್ ಆಥ್ರೋðಪ್ಲಾಸ್ಟಿ ಒಂದು ಅಪರೂಪದ ಶಸ್ತçಚಿಕಿತ್ಸೆ. ಭಾರತದಲ್ಲಿ ಈ ಚಿಕಿತ್ಸೆ ನಡೆಸುವ ವೈದ್ಯರ ಸಂಖ್ಯೆ ಕಡಿಮೆ ಇದೆ. ಉತ್ತರ ಕರ್ನಾಟಕದಲ್ಲೇ ಅಪರೂಪ ಎನ್ನುವ ಈ ಶಸ್ತçಚಿಕಿತ್ಸೆಯನ್ನು ನಮ್ಮ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ನಡೆಸಿದ ಹೆಮ್ಮೆ ನಮಗಿದೆ. ಮಹಿಳೆ ಕುಟುಂಬದವರು ಆರ್ಥಿಕ ತೊಂದರೆಯಲ್ಲಿ ಇರುವುದನ್ನು ಗಮನಿಸಿ ಶಸ್ತçಚಿಕಿತ್ಸೆಯನ್ನು ಉಚಿತವಾಗಿ ನಡೆಸಲಾಗಿದೆ.
-ಡಾ.ಗಿರೀಶ ವಾಸನದ, ಎಲುಬು ಕೀಲು ತಜ್ಞ, ಬಾಗಲಕೋಟೆ
ಶತಾಯುಷಿಗೆ ಶಸ್ತçಚಿಕಿತ್ಸೆ
ಇತ್ತೀಚೆಗೆ ಬಾಗಲಕೋಟೆ ಜಿಲ್ಲೆಯ ಮುರನಾಳ ಗ್ರಾಮದ ನೂರು ವರ್ಷದ ಅಜ್ಜಿಯ ಚಪ್ಪೆ ಶಸ್ತçಚಿಕಿತ್ಸೆಯನ್ನೂ ಡಾ.ವಾಸನದ ಆಸ್ಪತ್ರೆಯಲ್ಲಿ ನಡೆಸಲಾಗಿದೆ. ಆಯತಪ್ಪಿ ಬಿದ್ದಿದ್ದ ಅಜ್ಜಿಯೊಬ್ಬರು ೧೫ ದಿನಗಳ ಹಿಂದೆ ಡಾ.ವಾಸನದ ಆಸ್ಪತ್ರೆಗೆ ಬಂದಿದ್ದರು. ಎಕ್ಸ್ ರೇ ಮೂಲಕ ತಪಾಸಣೆ ನಡೆಸಿದಾಗ ಚಪ್ಪೆ ಮುರಿದಿರುವುದು ಕಂಡುಬAದಿತ್ತು. ಡಾ.ಗಿರೀಶ ಅತ್ಯಂತ ಸೂಕ್ಷö್ಮವಾಗಿ ಅಜ್ಜಿಯ ಶಸ್ತçಚಿಕಿತ್ಸೆ ನಡೆಸಿ ಹಿರಿಯ ಜೀವಿಗೆ ಚೈತನ್ಯ ನೀಡಿದ್ದಾರೆ. ಇದೇ ಅಜ್ಜಿಗೆ ಡಾ.ವಾಸನದ ಆಸ್ಪತ್ರೆಯಲ್ಲಿ ಮೂರು ವರ್ಷಗಳ ಹಿಂದೆಯೂ ಒಂದು ಶಸ್ತçಚಿಕಿತ್ಸೆ ನಡೆಸಲಾಗಿತ್ತು. ಇಷ್ಟು ವಯಸ್ಸಿನವರು ಭಯ ಹಾಗೂ ವಿವಿಧ ಕಾರಣಗಳಿಂದ ಶಸ್ತçಚಿಕಿತ್ಸೆಗೆ ಹಿಂಜರಿಯುತ್ತಾರೆ. ಆದರೆ ಕುಟುಂಬದವರು ಸಕಾಲದಲ್ಲಿ ಶಸ್ತçಚಿಕಿತ್ಸೆಗೆ ಸಮ್ಮತಿ ನೀಡಿದ್ದರಿಂದ ಹಿರಿಯ ಜೀವಿಯ ನೋವು ಕಡಿಮೆಗೊಳಿಸಲು ಸಾಧ್ಯವಾಯಿತು ಎಂದು ಡಾ.ಗಿರೀಶ ವಾಸನದ ತಿಳಿಸಿದ್ದಾರೆ.