ಬೆಂಗಳೂರು: ಬೀನ್ಸ್ ಬೆಲೆ ಕೇಳಿದರೆ ಸಾಕು ಗ್ರಾಹಕರು ಬೆಚ್ಚಿ ಬೀಳುವಂತಾಗಿದೆ. ಇದೇ ಮೊದಲ ಬಾರಿಗೆ ಬೀನ್ಸ್ ತ್ರಿಶತಕದ ಗಡಿ ದಾಟಿದೆ! ಇದೇ ಮೊದಲ ಬಾರಿಗೆ ದಾಖಲೆ ಪ್ರಮಾಣದಲ್ಲಿ ಏರಿಕೆಯಾಗಿದೆ. ಕೆ.ಜಿ. ಬೀನ್ಸ್ ಬರೋಬ್ಬರಿ 200-320 ರೂ.ವರೆಗೆ ತಲುಪಿದೆ.
ಫೆಬ್ರವರಿಯಿಂದಲೇ ಆರಂಭವಾದ ಬಿಸಿಲ ತಾಪಮಾನ ಮಾರ್ಚ್, ಏಪ್ರಿಲ್‌ನಲ್ಲಿ ತುತ್ತ ತುದಿಗೆ ತಲುಪಿತ್ತು. ಹೀಗಾಗಿ, ಅಕ ತಾಪಮಾನ ಒಂದೆಡೆಯಾದರೆ, ರಾಜ್ಯಾದ್ಯಂತ ಬರಗಾಲದಿಂದಾಗಿ ನೀರಿನ ಸಮಸ್ಯೆ ಉಲ್ಬಣಿಸಿತ್ತು. ಹಲವೆಡೆ ಬೋರ್‌ವೆಲ್‌ಗಳು ಬತ್ತಿ ಹೋಗಿದ್ದವು.
ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಆನೇಕಲ್, ತುಮಕೂರು, ನೆಲಮಂಗಲ ಮತ್ತಿತರ ಭಾಗಗಳಲ್ಲಿ ಬೀನ್ಸ್ ಬೆಳೆಯಲಾಗುತ್ತದೆ. ಎಪಿಎಂಸಿ ಸಗಟು ದರದಲ್ಲಿ170-180 ರೂ. ತಲುಪಿದೆ. ಅವುಗಳನ್ನು ಖರೀದಿಸಿ, ಸಾರಿಗೆ ವೆಚ್ಚ, ಕೂಲಿ ಎಲ್ಲವನ್ನೂ ಸೇರಿಸಿ ಕೆ.ಜಿ.ಗೆ 200-250 ರೂ. ಮೇಲ್ಪಟ್ಟ ಬೆಲೆಗೆ ಮಾರುವುದು ಚಿಲ್ಲರೆ ಮಾರಾಟಗಾರರಿಗೆ ಅನಿವಾರ್ಯವಾಗಿದೆ. ಬಿಸಿಲಿನಿಂದ ಬೆಳೆ ಇಳುವರಿ ಶೇ.80ರಷ್ಟು ಕುಸಿದಿದೆ
, ಬೆಲೆ ಏರಿಕೆಯಾಗಿದ್ದು, ಹೊಸದಾಗಿ ಬೆಳೆ ಬರುವವರೆಗೂ ದರ ಏರಿಕೆ ಮುಂದುವರಿಯಲಿದೆ. ಮೆಣಸಿನಕಾಯಿ, ಕ್ಯಾರಟ್ ಸೇರಿದಂತೆ ಬಹುತೇಕ ತರಕಾರಿಗಳ ದರ ಹೆಚ್ಚಾಗಿದೆ ಎನ್ನುತ್ತಾರೆ ದಾಸನಪುರ ಎಪಿಎಂಸಿ ಮಾರುಕಟ್ಟೆ ಫೋರ್‌ಸ್ಟಾರ್ ಮಳಿಗೆಯ ಸಗಟು ವ್ಯಾಪಾರಿ ಆರ್. ಪ್ರಕಾಶ್.
ತರಕಾರಿ ಬೆಳೆಗಳು ಕೆಲವೆಡೆ ಒಣಗುತ್ತಿವೆ. ಮತ್ತೆ ಕೆಲವೆಡೆ ಬೆಳೆಯಾದರೂ ಹೂ ಉದುರಲು ಅರಂಭಿಸಿತು. ಹೀಗಾಗಿ, ಬೀನ್ಸ್‌ನ ಉತ್ಪಾದನೆ ಪ್ರಮಾಣ ಗಣನೀಯ ಪ್ರಮಾಣದಲ್ಲಿಇಳಿಕೆಯಾಯಿತು. ಇದೇ ಅವಯಲ್ಲಿ ಎಲ್ಲೆಡೆ ಮದುವೆ, ಗೃಹಪ್ರವೇಶ ಮತ್ತಿತರ ಶುಭ ಸಮಾರಂಭಗಳು ನಡೆದಿದ್ದರಿಂದ ಬೀನ್ಸ್‌ಗೆ ಹೆಚ್ಚಿನ ಬೇಡಿಕೆಯೂ ಬಂತು. ಆದರೆ, ಬೇಡಿಕೆಗೆ ತಕ್ಕಂತೆ ಪೂರೈಕೆಯಾಗದ ಹಿನ್ನೆಲೆಯಲ್ಲಿಬೆಲೆ ಏರಿಕೆಯಾಗಿ ಈಗ 300ರ ಗಡಿ ದಾಟಿದೆ.
ಕೆಂಗೇರಿ, ಹೆಬ್ಬಾಳ ಮತ್ತಿತರ ಬಡಾವಣೆಗಳಲ್ಲಿ ಕೆ.ಜಿ.ಗೆ 200 ರೂ. ಇದ್ದರೆ, ಜಯನಗರ ಮತ್ತಿತರ ಬಡಾವಣೆಗಳಲ್ಲಿಕೆ.ಜಿ.ಗೆ 320 ರೂ. ಇದೆ. ಬೀನ್ಸ್ ದರ ಹೆಚ್ಚೆಂದರೆ 80 ರಿಂದ 100 ರೂ. ಇರುತ್ತಿತ್ತು. ಈಗ ನೂರು, ಇನ್ನೂರಲ್ಲ, ಮುನ್ನೂರು ದಾಟಿರುವುದು ಗ್ರಾಹಕರನ್ನು ಬೆಚ್ಚಿ ಬೀಳಿಸಿದೆ.