ಪೋಲೀಸ ತಂಡದ ವಿರುದ್ಧ ಗೆಲುವಿನ ನಗೆಬೀರಿದ ಮಾಧ್ಯಮ ತಂಡ
ಗುರುವಾರ ಬಾಗಲಕೋಟೆಯ ನವನಗರದ ಪೋಲೀಸ್ ಕ್ರೀಡಾಂಗಣದಲ್ಲಿ ನಡೆದ ಬಾಗಲಕೋಟೆ ಜಿಲ್ಲಾ ಪೋಲೀಸ ವಾರ್ಷಿಕ ಕ್ರೀಡಾಕೂಟದ ಕ್ರಿಕೆಟ ಟೂರ್ನಿಯಲ್ಲಿ ಪೋಲೀಸ ಇಲಾಖೆಯ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ೨೬ ರನ್‌ಗಳಿಂದ ಪೋಲೀಸ ಇಲಾಖೆಯ ತಂಡವನ್ನು ಪರಾಭವಗೊಳಿಸಿ ಮಾಧ್ಯಮ ತಂಡ ಗೆಲುವಿನ ನಗೆ ಬೀರಿ ರನ್ನ ದ್ವಿತೀಯ ಸ್ಥಾನಕ್ಕೆ ಭಾಜನವಾಯಿತು.
ಶುಕ್ರವಾರ ನಡೆದ ಸಮಾರೋಪದಲ್ಲಿ ಜಿಲ್ಲಾ ಪೋಲೀಸ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ, ಹೆಚ್ಚುವರಿ ಪೋಲೀಸ ವರಿಷ್ಠಾಧಿಕಾರಿ ಪ್ರಸನ್ನ ದೇಸಾಯಿ ಪ್ರಶಸ್ತಿ ವಿತರಿಸಿ ಅಭಿನಂದಿಸಿದರು.
ಶಂಕರ ಎಸ್. ಕಲ್ಯಾಣಿ, ಸಂತೋಷ ದೇಶಪಾಂಡೆ ನೇತೃತ್ವದಲ್ಲಿ ತಂಡದ ವ್ಯವಸ್ಥಾಪಕ ಅಭಿಷೇಕ ಪಾಟೀಲ ಅವರ ಮಾಧ್ಯಮ ತಂಡದಲ್ಲಿ ಜಗದೀಶ ಗಾಣಿಗೇರ, ಸೋಮಶೇಖರ ಪೂಜಾರ, ಪ್ರಕಾಶ ಗುಳೇದಗುಡ್ಡ ಮಂಜುನಾಥ ತಳವಾರ, ಮಲ್ಲು ಹೊಸಮನಿ, ಪರಸು ಸನಗಿನ, ಭೀಮು ಜಮಖಂಡಿ, ಸಯ್ಯದ್, ಇರ್ಫಾನ್, ಕ್ರಷ್ಣಾ ಹಾದಿಮನಿ ಮುತ್ತು ಅವರುಗಳು ಪಾಲ್ಗೊಂಡಿದ್ದರು.