ರಾಯಚೂರು: ಅಯೋಧ್ಯೆ ರಾಮ ಮಂದಿರ ಲೋಕಾರ್ಪಣೆಯ ಐತಿಹಾಸಿಕ ಕ್ಷಣಗಳಿಗೆ ಇಡೀ ದೇಶವೇ ಕಾಯುತ್ತಿದ್ದು, ಐದು ದಶಕಗಳ ಹೋರಾಟದ ಫಲವಾಗಿ ನಿರ್ಮಾಣವಾಗುತ್ತಿರುವ ರಾಮ ಮಂದಿರದಲ್ಲಿ ಸೇವೆ ಸಲ್ಲಿಸುವುದೇ ಒಂದು ಹೆಮ್ಮೆಯ ಸಂಗತಿಯಾಗಿದೆ ಎಂದು ಮಾಹಿತಿ ತಿಳಿದು ಬಂದಿದೆ.
ರಾಯಚೂರಿನ ಯುವಕ ವಿರೇಶ್ ಬಡಿಗೇರ್ ಆಗಿದ್ದು, ಅಯೋಧ್ಯೆ ರಾಮ ಮಂದಿರದಲ್ಲಿ ಸೇವೆ ಸಲ್ಲಿಸಲು ಕರ್ನಾಟಕದಿಂದ ಒಟ್ಟು ಎಂಟು ಜನರ ತಂಡ ಹೋಗಿದ್ದು, ಇದರಲ್ಲಿ ರಾಯಚೂರು ಜಿಲ್ಲೆ ಮಾನ್ವಿ ತಾಲೂಕಿನ ಜಾನೇಕಲ್ ಗ್ರಾಮದ ನಿವಾಸಿಯಾಗಿರುವ ವಿರೇಶ್ ಬಡಿಗೇರ್ ಒಬ್ಬರು. ಇವರು ಅಯೋಧ್ಯೆ ರಾಮ ಮಂದಿರದ ಗೋಪುರ, ಗರ್ಭಗುಡಿ ಮುಂಭಾಗದಲ್ಲಿ ಅಕ್ಟೋಬರ್ 20 ರಿಂದ ನವೆಂಬರ್ 25 ವರೆಗೆ ನವಿಲುಗಳು, ಗಣೇಶ ಹಾಗೂ ಕಂಬಗಳಲ್ಲಿ ಕುಸುರಿ ಕಾರ್ಯ ಮಾಡಿ ತಮ್ಮದೇ ಆದ ಸೇವೆ ಸಲ್ಲಿಸಿದ್ದಾರೆ.
ಮಂದೀರ ತಲುಪಿದ ಬಳಿಕ ಮೂರು ದಿನ ಒಳಗೆ ಬಿಡದೆ ಸೆಕ್ಯೂರಿಟಿ ಚೆಕ್ ಮಾಡಿದ್ದು, ಐಡಿ ಕಾರ್ಡ್ ನೀಡಿದ ಬಳಿಕ ಶಿಲ್ಪ ಕಲೆ, ಕುಸುರಿ ಕಾರ್ಯ ಶುರು ಮಾಡಿದೆವು. ಉತ್ತರ ಕರ್ನಾಟಕ ಭಾಗದಲ್ಲಿ ಕೆತ್ತನೆಗೆ ಕೃಷ್ಣ ಶಿಲೆ ಬಳಕೆ ಮಾಡಲಾಗಿದ್ದು, ಸ್ಯಾಂಪಲ್ ಕಲ್ಲಿನಲ್ಲಿ ಅಚ್ಚು ಕಟ್ಟಾದ ಕೆತ್ತನೆ ನೋಡಿ ಮಂದೀರದ ಕಂಬಗಳಲ್ಲಿನ ಎಲ್ಲಾ ವಿನ್ಯಾಸ, ಕುಸುರಿ ಕೆಲಸಗಳ ಮಾಡಲಾಗಿದೆ. ಶಿಲ್ಪ ಕಲಾ ವಿಭಾಗದಿಂದ ವಿರೇಶ್ ಕಾರ್ಯಕ್ಕೆ ಮೆಚ್ಚುಗೆಯೂ ವ್ಯಕ್ತವಾಗಿದೆ.
ಮಂದೀರದ ವಿವಿದೆಡೆ ತಾನು ಮಾಡಿರುವ ಕುಸುರಿ ಕಾರ್ಯದ ಬಗ್ಗೆ ಮಂದೀರದ ಸ್ಯಾಂಪಲ್ ತೊರ್ಪಡಿಸಿದ್ದಾರೆ. ರಾಮ ಮಂದೀರದಲ್ಲಿ ಕುಸುರಿ, ಶಿಲ್ಪ ಕಲೆ ಕಾರ್ಯ ಮಾಡಿದ್ದು ಅಳಿಲು ಸೇವೆ ಎಂದು ಹೇಳಿಕೊಂಡಿದ್ದು, ಅಯೋಧ್ಯೆಗೆ ಕುಸುರಿ ಕೆಲಸಕ್ಕೆ ಆಫರ್ ಬಂದಾಗ ಒಂದು ವಾರ ಚಡಪಡಿಕೆ, ಭಯ ಉಂಟಾಗಿತ್ತು ಎಂದರು.