ವಿಜಯಪುರ
ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಅವರು ತಮ್ಮ ಗೃಹ ಕಚೇರಿಯಲ್ಲಿ ದಿನವಿಡೀ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು.
ಸಚಿವರ ಗೃಹ ಕಚೇರಿಗೆ ಆಗಮಿಸಿದ ಬಬಲೇಶ್ವರ ಮತಕ್ಷೇತ್ರ ಮತ್ತು ಜಿಲ್ಲೆಯ ನಾನಾ ಭಾಗಗಳ ಹಾಗೂ ಹೊರ ಜಿಲ್ಲೆಗಳ ಜನರು ನಾನಾ ಅಹವಾಲು ಸಲ್ಲಿಸಿದರು. ಕುಡಿಯುವ ನೀರು, ರಸ್ತೆ ಸೇರಿದಂತೆ ನಾನಾ ಸಮಸ್ಯೆಗಳ ಕುರಿತು ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ ಸಚಿವರು, ಇದೇ ಸಂದರ್ಭದಲ್ಲಿ ಸಂಬAಧಿಸಿದ ಅಧಿಕಾರಿಗಳಿಗೆ ಕರೆ ಮಾಡಿ ಕೂಡಲೇ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವAತೆ ಸೂಚನೆ ನೀಡಿದರು.
*ಜಾಲಗೇರಿ ಕೆರೆಗೆ ಪ್ರತ್ಯೇಕವಾಗಿ ನೀರು ಹರಿಸಲು ಸೂಚನೆ*
ಇದೇ ವೇಳೆ, ಜಾಲಗೇರಿ ಕೆರೆಗೆ ನೀರು ಸರಬರಾಜು ವಿಳಂಬವಾಗಿ ರೈತರು ಸಂಕಷ್ಟದಲ್ಲಿರುವುದನ್ನು ಗ್ರಾಮಸ್ಥರು ಗಮನ ಸೆಳೆದರು. ಆಗ, ಸಚಿವರು ಜಾಲಗೇರಿ ಕೆರೆಗೆ ಪ್ರತ್ಯೇಕವಾಗಿ ನೀರು ತುಂಬಿಸಲು ಕ್ರಮ ಕೈಗೊಳ್ಳುವಂತೆ ಸ್ಥಳದಲ್ಲಿಯೇ ಇದ್ದ ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತ(ಕೆಬಿಜೆಎನ್‌ಎಲ್) ಮುಖ್ಯ ಎಂಜಿನಿಯರ್ ಶ್ರೀನಿವಾಸ್, ಸೂಪರಿಂಡೆAಟ್ ಎಂಜಿನಿಯರ್ ಜಗದೀಶ ರಾಠೋಡ ಹಾಗೂ ಅಸಿಸ್ಟಂಟ್ ಎಂಜಿನಿಯರ್ ನಾಗರಾಳ ಅವರಿಗೆ ಸೂಚನೆ ನೀಡಿದರು.
*ಸಚಿವರನ್ನು ದೇವಸ್ಥಾನದ ಕಾರ್ಯಕ್ರಮಕ್ಕೆ ಆಹ್ವಾನಿಸಿದ ಮಲಘಾಣ ಗ್ರಾಮಸ್ಥರು*
ಇದೇ ವೇಳೆ, ಸಚಿವರನ್ನು ಭೇಟಿ ಮಾಡಿದ ಬಸವನ ಬಾಗೇವಾಡಿ ತಾಲೂಕಿನ ಮಲಘಾಣ ಗ್ರಾಮಸ್ಥರು, ಎಂ. ಬಿ. ಪಾಟೀಲರು ಜಲಸಂಪನ್ಮೂಲ ಸಚಿವರಾಗಿದ್ದ ಸಂದರ್ಭದಲ್ಲಿ ತಮ್ಮ ಊರಿನ ಮಾಕಣಾಬಾಯಿ ದೇವಸ್ಥಾನದ ಸಮುದಾಯ ಭವನ ನಿರ್ಮಾಣಕ್ಕೆ ಕೆಬಿಜೆಎನ್ಎಲ್ ವತಿಯಿಂದ ರೂ. 25 ಲಕ್ಷ ಅನುದಾನ ನೀಡಿದ್ದನ್ನು ನೆನಪಿಸಿದರು. ಅಲ್ಲದೇ, ಜೀರ್ಣೋದ್ಧಾರ ಮಾಡಲಾಗಿರುವ ಮಾಕಣಾಬಾಯಿ ದೇವಸ್ಥಾನದ ಉದ್ಘಾಟನೆ ಸಮಾರಂಭ ಸೆಪ್ಟೆಂಬರ್ 7 ಮತ್ತು 8 ರಂದು ನಡೆಯಲಿದ್ದು, ಈ ಕಾರ್ಯಕ್ರಮಕ್ಕೆ ಆಗಮಿಸುವಂತೆ ಆಹ್ವಾನ ನೀಡಿದರು.
ಈ ಸಂದರ್ಭದಲ್ಲಿ ಮಲಘಾಣ ಗ್ರಾಮದ ಮುಖಂಡರಾದ ಸುರೇಶ ಲಮಾಣಿ, ಮಹಾಂತೇಶ ಲಮಾಣಿ, ಶಂಕರ ಲಮಾಣಿ, ರವಿ ಲಮಾಣಿ, ಗಂಗಾಧರ ಬಿರಾದಾರ, ಬಾಬು ಲಿಂಬಾಜಿ, ಮಲ್ಲನಗೌಡ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.
ಇದೇ ವೇಳೆ ಕರಾಡೆ ದೊಡ್ಡಿ, ಕಳ್ಳಕವಟಗಿ, ಅರಕೇರಿ ಸೇರಿದಂತೆ ನಾನಾ ಗ್ರಾಮಗಳಿಂದ ಆಗಮಿಸಿದ್ದ ಗ್ರಾಮಸ್ಥರ ಬೇಡಿಕೆಗಳಿಗೆ ಸ್ಪಂದಿಸಿದ ಸಚಿವರು ಕೂಡಲೇ ಸಮಸ್ಯೆ ಪರಿಹರಿಸುವಂತೆ ಅಧಿಕಾರಿಗಳಿಗೆ ದೂರವಾಣಿ ಮೂಲಕ ಸೂಚನೆ ನೀಡಿದರು.