ನಿಮ್ಮ ಸುದ್ದಿ ಬಾಗಲಕೋಟೆ
ಜಿಲ್ಲೆಯ ಹುನಗುಂದ ತಾಲೂಕಿನ ಅಮೀನಗಡ ಪಟ್ಟಣದ ಖಾಸಗಿ ಶಾಲೆಯೊಂದರಿಂದ ಬಿಸಿಯೂಟದ ಪಡಿತರ ಮಾರಾಟದ ಆರೋಪ ಕೇಳಿ ಬಂದಿದೆ.
ಹಲವು ತಿಂಗಳಿನಿಂದ ಈ ರೀತಿ ನಡೆದಿದೆ ಎನ್ನಲಾಗಿದ್ದು ಭಾನುವಾರ ಅಲ್ಲಿನ ಶಾಲೆಯೊಂದರಿಂದ ಟ್ರ್ಯಾಕ್ಟರ್ ನಲ್ಲಿ ಬೇರೆಡೆ ಸಾಗಿಸುತ್ತಿದ್ದಾಗ ಸ್ಥಳೀಯರ ಕೈಗೆ ಸಿಕ್ಕಿ ಬಿದ್ದಿದೆ.
ಶಾಲೆಯ ಬಿಸಿಯೂಟ ಸಂಗ್ರಹಣೆ ಕೋಣೆಯಿಂದ ಅಕ್ಕಿ, ಗೋದಿ, ಬೇಳೆ ಹಾಗೂ ನೂರಾರು ಖಾಲಿ ಚೀಲಗಳನ್ನು ಭಾನುವಾರ ಸಂಜೆ ಟ್ರ್ಯಾಕ್ಟರ್ ನಲ್ಲಿ ಸಾಗಿಸುತ್ತಿದ್ದಾಗ ಸ್ಥಳೀಯರ ಕೈಗೆ ಸಿಕ್ಕಿ ಬಿದ್ದಿದೆ.
ಈ ಕುರಿತು ಅಲ್ಲಿನ ಸಿಬ್ಬಂದಿಯೊಬ್ಬರನ್ನು ವಿಚಾರಿಸಿದಾಗ ಶಾಲೆ ಮುಖ್ಯಸ್ಥರು ಹೇಳಿದ್ದಾರೆ. ಪಡಿತರವನ್ನು ಹುಲಗಿನಾಳ ಗ್ರಾಮಕ್ಕೆ ಸಾಗಿಸುತ್ತಿರುವುದಾಗಿ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ.
ಈ ಶಾಲೆಯಲ್ಲಿ ಪಡಿತರ ಒಂದೇ ಅಲ್ಲದೆ ಮಕ್ಕಳಿಗೆ ಕೊಡುವ ಮೊಟ್ಟೆಯಲ್ಲೂ ಅಪರಾ ತಪರಾ ಮಾಡುತ್ತಿದ್ದಾರೆ ಎನ್ನುವ ಅರೋಪವೂ ಕೇಳಿದೆ.
ಶಿಕ್ಷಣ ಇಲಾಖೆ ಅಧಿಕಾರಿಗಳು ಇಂತಹ ಶಾಲೆಯ ಮುಖ್ಯಸ್ಥರ ಹಾಗೂ ಈ ಪ್ರಕರಣದಲ್ಲಿ ಭಾಗಿಯಾದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಕೇಳಿ ಬಂದಿದೆ.