ಎನ್ನೆಸ್ಸೆಸ್ ವಾರ್ಷಿಕ ಶಿಬಿರ
ಅಮೀನಗಡ
ವಿದ್ಯಾರ್ಥಿಗಳು ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಸ್ಥಳೀಯ ಎಸ್‌ವಿವಿ ಸಂಘದ ಅಧ್ಯಕ್ಷರಾದ, ಪ್ರಭುಶಂಕರೇಶ್ಚರ ಗಚ್ಚಿನಮಠದ ಶಂಕರರಾಜೇಂದ್ರ ಸ್ವಾಮೀಜಿ ಹೇಳಿದರು.
ಸಮೀಪದ ಕಲ್ಲಗೋನಾಳ ಗ್ರಾಮದಲ್ಲಿ ಎಸ್‌ವಿವಿ ಸಂಘದ ಸಂಗಮೇಶ್ವರ ಪದವಿ ಕಾಲೇಜ್‌ನ ೨೦೨೩-೨೪ನೇ ಸಾಲಿನ ಎನ್ನೆಸ್ಸೆಸ್ ವಾರ್ಷಿಕ ಸೇವಾ ಶಿಬಿರ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಎನ್ನೆಸ್ಸೆಸ್ ವಿದ್ಯಾರ್ಥಿಗಳನ್ನು ಶಿಸ್ತು, ಸಾಮಾಜಿಕ ಸೇವೆ ಸೇರಿದಂತೆ ಸಾಮಾಜಿಕ ಚಟುವಟಿಕೆಗಳನ್ನು ಕಲಿಸುತ್ತದೆ. ಅವುಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಳ್ಳುವ ಮೂಲಕ ಉತ್ತಮ ಜೀವನ ರೂಪಿಸಿಕೊಳ್ಳಬೇಕು ಎಂದು ಹೇಳಿದರು.
ಸಂಘದ ಚೇರ್‌ಮನ್ ಐ.ಎಸ್.ಲಿಂಗದಾಳ ಕಾರ್ಯಕ್ರಮ ಉದ್ಘಾಟಿಸಿದರು. ಪ್ರಾಥಮಿಕ ಶಾಲೆ ವಿಭಾಗದ ಚೇರ್‌ಮನ್ ಡಾ.ಎಂ.ವಿ.ಹಾದಿಮನಿ ಧ್ವಜಾರೋಹಣ ನೆರವೇರಿಸಿದರು. ಪ್ರಾಚಾರ್ಯ ಎಂ.ಎನ್.ವAದಾಲ, ಉಪಪ್ರಾಚಾರ್ಯ ಆರ್.ಜಿ.ಸನ್ನಿ, ಪದವಿ ಕಾಲೇಜ್ ಪ್ರಾಚಾರ್ಯ ಆರ್.ಜಿ.ಬಡಿಗೇರ, ಆರ್.ಕೆ.ಗೌಡರ, ಗ್ರಾಪಂ ಸದಸ್ಯ ಎನ್.ಬಿ.ಗೌಡರ, ಮುಖ್ಯಶಿಕ್ಷಕ ಬಿ.ಎನ್.ಕೋಲಕಾರ್, ಹಿರಿಯರಾದ ಮುದುಕಣ್ಣ ನಂದನೂರ, ಸಂಗನಗೌಡ ಗೌಡರ, ಎಸ್ಡಿಎಂಸಿ ಅಧ್ಯಕ್ಷ ಸಂಗನಗೌಡ ಗೌಡರ, ಉಪನ್ಯಾಸಕರಾದ ಎಂ.ಬಿ.ನೇಗಲಿ, ಎಚ್.ಜಿ.ಸತ್ತರಗಿ, ಪಿ.ವಿ.ಗಾಣಿಗೇರ, ಆರ್.ಐ.ಮುಜಾವರ, ಎನ್ನೆಸ್ಸೆಸ್ ಕಾರ್ಯಕ್ರಮಾಕಾರಿ ಡಿ.ಆರ್.ಕುಬಸದ, ಎಸ್.ವಿ.ಮಠಪತಿ, ಎಸ್.ಡಿ.ದಂಡಿನ ಇದ್ದರು.