ಬೆಂಗಳೂರು: ಅಯೋಧ್ಯೆ ರಾಮಮಂದಿರ ಉದ್ಘಾಟನೆ ಆದ ಬಳಿಕ ಉತ್ತರ ಭಾರತದ ಧಾರ್ಮಿಕ ಕೇಂದ್ರಗಳಿಗೆ ಆರ್ಥಿಕ ಹರಿವು ಹೆಚ್ಚಾಗಿದೆ ಎಂದು ವಿಧಾನಪರಿಷತ್ ಸದಸ್ಯ ಎಚ್ ವಿಶ್ವನಾಥ್ ಆತಂಕ ವ್ಯಕ್ತಪಡಿಸಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.
ವಿಧಾನಪರಿಷತ್ ನಲ್ಲಿ ಗುರುವಾರ ಬಜೆಟ್ ಮೇಲಿನ ಚರ್ಚೆಯಲ್ಲಿ ಭಾಗಿಯಾಗಿ ಮಾತನಾಡಿ, ಕೇಂದ್ರ ನಮ್ಮ ತೆರಿಗೆ ವಿಚಾರದಲ್ಲಿ ಯಾಕೆ ರಿಜಿಡ್ ಆಗಿದೆ? ಶ್ರೀರಾಮ ನಮ್ಮ ಅಸ್ಮಿತೆ, ಅಯೋಧ್ಯೆಯಲ್ಲಿ ರಾಮಮಂದಿರ ಆದ ಮೇಲೆ ಉತ್ತರ ಭಾರತದ ಧಾರ್ಮಿಕ ಕೇಂದ್ರಗಳಲ್ಲಿ ಆರ್ಥಿಕ ಹರಿವು ಹೆಚ್ಚಾಗಿದೆ ಎಂದರು.
ಧಾರ್ಮಿಕ ಸಂಸ್ಥೆಗಳಲ್ಲೂ ಕೂಡ ಆದಾಯ ದಕ್ಷಿಣ ಭಾರತದಿಂದ ಉತ್ತರ ಭಾರತದ ಕಡೆ ಹರಿದು ಹೋಗುವ ಆತಂಕ ಇದ್ದು, ಇದು ಗಂಭೀರ ವಿಷಯ.ಶ್ರೀರಾಮ ಭಾರತೀಯರ ಅಸ್ಮಿತೆ, ಅಲ್ಲಿ ಆರ್ಥಿಕ ವ್ಯವಸ್ಥೆ ವೇಗವಾಗಿ ಹೋಗುತ್ತಿದ್ದು, ಆದರೆ, ತಿರುಪತಿ, ಧರ್ಮಸ್ಥಳ ಕುಸಿಯುತ್ತಿದೆ. ಧಾರ್ಮಿಕ ಆದಾಯ ದಕ್ಷಿಣದಿಂದ ಉತ್ತರಕ್ಕೆ ಹರಿಯುವ ಅಪಾಯ ಹೆಚ್ಚಾಗಿದೆ ಎಂದು ತಿಳಿಸಿದರು.
ಆರ್ಥಿಕವಾದ ವಿಚಾರವಾಗಿ ಯಾರೂ ಚರ್ಚೆ ಮಾಡುತ್ತಿಲ್ಲ. ಅಧಿಕಾರಿ, ಶಾಸಕರ ವೇತನ, ಪಿಂಚಣಿ ಹಾಗೂ ಬಡ್ಡಿಗೆ ಎರಡು ಲಕ್ಷ ಕೋಟಿ ಹೋಗ್ತಿದೆ. ಸದನದಲ್ಲಿ ತೆರಿಗೆ ಪಾವತಿದಾರರಿಗೆ ಬೇರೆ ದೇಶದಲ್ಲಿ ಧನ್ಯವಾದ ಹೇಳ್ತಿದ್ದು, ಆದರೆ ನಮ್ಮ ದೇಶದಲ್ಲಿ ಇದ್ಯಾ? ಹತ್ತು ಸಾವಿರ ಜನ ಪೊಲೀಸರು ಆಡರ್ಲಿಯಾಗಿ ಕೆಲಸ ಮಾಡ್ತಿದ್ದಾರೆ ಎಂದು ಉಲ್ಲೇಖ ಮಾಡಿದರು ಎಂದು ವಿವರಿಸಿದರು.