This is the title of the web page
This is the title of the web page

Live Stream

March 2025
S M T W T F S
 1
2345678
9101112131415
16171819202122
23242526272829
3031  

| Latest Version 9.4.1 |

State News

ಕೋವಿಡ್ ಸಂಕಷ್ಟದಲ್ಲಿ ನಿರಾಣಿ ಫೌಂಡೇಶನ್‌ದಿಂದ ನೆರವು

ಜಿಲ್ಲಾಡಳಿತಕ್ಕೆ ಅಂಬುಲೆನ್ಸ್, ಇತರೆ ವಾಹನಗಳ ಹಸ್ತಾಂತರ

ನಿಮ್ಮ ಸುದ್ದಿ ಬಾಗಲಕೋಟೆ

ಕೋವಿಡ್ ಎರಡನೇ ಅಲೆಯಿಂದ ಸೊಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ತುರ್ತು ಪರಿಸ್ಥಿತಿಯಲ್ಲಿ ಸಾರ್ವಜನಿಕರಿಗೆ ನೆರವಾಗುವ ನಿಟ್ಟಿನಲ್ಲಿ ನಿರಾಣಿ ಪೌಂಡೇಶನ್ ವತಿಯಿಂದ ಜಿಲ್ಲಾಡಳಿತಕ್ಕೆ ೨ ಅಂಬುಲೆನ್ಸ್ ಸೇರಿ ೪ ಇತರೆ ವಾಹನಗಳನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಉಮೇಶ ಕತ್ತಿ ಅವರ ಮೂಲಕ ರವಿವಾರ ಹಸ್ತಾಂತರಿಸಲಾಯಿತು.

ಬೀಳಗಿ ತಾಲೂಕಾ ಪಂಚಾಯತ ಆವರಣದಲ್ಲಿ ನಿರಾಣಿ ಫೌಂಡೇಶನದಿಂದ ನೀಡಲಾದ ಅಂಬುಲೆನ್ಸ್ ಹಾಗೂ ಇತರೆ ವಾಹನಗಳನ್ನು ಜಿಲ್ಲಾಡಳಿತಕ್ಕೆ ಹಸ್ತಾಂತರಿಸಿಕೊಂಡು ಮಾತನಾಡಿದ ಅವರು ಕೋವಿಡ್ ಸಂಕಷ್ಟದಲ್ಲಿ ಸೊಂಕಿತರಿಗೆ ನೆರವಾಗುವ ನಿಟ್ಟಿನಲ್ಲಿ ಅಂಬುಲೆನ್ಸ್ ಜೊತೆಗೆ ಬೀಳಗಿ ತಾಲೂಕಾ ಕೋವಿಡ್ ಕೇರ್ ಸೆಂಟರ್‌ಗಳಿಗೆ ೫೦೦ ಡಿಸ್ಪೋಜಲ್ ಬೆಡ್, ಸ್ಯಾನಿಟೈಜರ್ ನೀಡಿದ್ದಾರೆ. ರೋಗಿಗಳಿಗೆ ಆಕ್ಸಿಜನ್ ಮುಖ್ಯವಾಗಿರುವುದನ್ನು ಮನಗಂಡು ಕೋವಿಡ್ ಆಸ್ಪತ್ರೆಗಳಿಗೆ ಉಚಿತವಾಗಿ ಆಕ್ಸಿಜನ್ ಪೂರೈಸಲು ಸಹ ನಿರಾಣಿ ಫೌಂಡೇಶನ್ ಮುಂದಾಗಿರುವುದನ್ನು ಕಂಡು ಸಚಿವರು ಶ್ಲಾಘನೆ ವ್ಯಕ್ತಪಡಿಸಿದರು.

ಗಣಿ ಮತ್ತು ಭೂವಿಜ್ಞಾನ ಸಚಿವರಾದ ಮುರುಗೇಶ ನಿರಾಣಿ ಮಾತನಾಡಿ ಕೋವಿಡ್ ಎರಡನೇ ಅಲೆಯಿಂದ ಸೋಂಕಿತರ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸೊಂಕಿತರಿಗೆ ಸೂಕ್ತ ಚಿಕಿತ್ಸೆ ಮತ್ತು ಆರೈಕೆ ಮಾಡಲು ಎಂ.ಆರ್.ಎನ್(ನಿರಾಣಿ) ಫೌಂಡೇಶನ್ ತಾಲೂಕಾ ಆಡಳಿತದೊಂದಿಗೆ ಸಮರೋಪಾದಿಯಲ್ಲಿ ಕಾರ್ಯಾಚರಣೆ ಕೈಗೊಂಡಿರುವುದಾಗಿ ತಿಳಿಸಿದರು.

ಉಚಿತ ಆಕ್ಸಿಜನ್ ಪೂರೈಕೆ, ತಜ್ಞವೈದ್ಯರಿಂದ ಕನ್ಸಲ್ಟೆನ್ಸಿ, ಉಚಿತ ಟ್ಯಾಕ್ಸಿ ಹಾಗೂ ಅಂಬುಲೆನ್ಸ್ ಸೇವೆ, ದಿನ ೨೪ ಗಂಟೆಗಳ ಕಾಲ ಸಹಾಯವಾಣಿ ಕೇಂದ್ರ ಸ್ಥಾಪನೆ, ಸೋಂಕಿತರಿಎ ಉಚಿತ ಊಟದ ವ್ಯವಸ್ಥೆ, ೧೦೦ ಹಾಸಿಗೆಗಳ ಉಚಿತ ಕೋವಿಡ್ ಕೇರ್ ಸೆಂಟರ್, ಕೋವಿಡ್ ಚಿಕಿತ್ಸೆ, ಸ್ಯಾನಿಟೈಜರ್ ವಿತರಣೆ ವಿತರಿಸಲಾಗುತ್ತಿದೆ ಎಂದು ತಿಳಿಸಿದರು. ಸಾರ್ವಜನಿಕರು ಸರಕಾರ ಹೊರಡಿಸಿದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಮಾಸ್ಕ, ಸಾಮಾಜಿಕ ಅಂತರ ಕಾಯ್ದುಕೊಂಡು ಸುರಕ್ಷಿತವಾಗಿ ಇರಲು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಂಸದ ಪಿ.ಸಿ.ಗದ್ದಿಗೌಡರ, ವಿಧಾನ ಪರಿಷತ್ ಸದಸ್ಯ ಹನಮಂತ ನಿರಾಣಿ, ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ, ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು. ವಿವಿಧ ಸೌಲಭ್ಯಗಳ ಹಸ್ತಾಂತರ ಕಾರ್ಯಕ್ರಮದ ಪೂರ್ವದಲ್ಲಿ ಬೀಳಗಿ ತಾಲೂಕಿನಲ್ಲಿ ಸ್ಥಾಪಿಸಲಾದ ಕೋವಿಡ್ ಕೇರ್ ಸೆಂಟರ್‌ಗೆ ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ, ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ ನಿರಾಣಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ದಿನದ ೨೪ ಗಂಟೆ ಸಹಾಯವಾಣಿ
ಬೀಳಗಿ ತಾಲೂಕಾ ಮಟ್ಟದ ನೋಡಲ್ ಅಧಿಕಾರಿಗಳು ಹಾಗೂ ನಿರಾಣಿ ಫೌಂಡೇಶನ್ ಸಿಬ್ಬಂದಿಗಳನ್ನೊಳಗೊAಡ ಸಹಾಯವಾಣಿ ಆಸ್ಪತ್ರೆ, ಕೇರ್ ಸೆಂಟರ್, ಅಂಬುಲೆನ್ಸ್, ಎಮರ್ಜನ್ಸಿ ಟ್ಯಾಕ್ಸಿ ಸೇರಿದಂತೆ ಹಲವು ಸೌಕರ್ಯಗಳನ್ನು ನೀಡಲು ಕೋವಿಡ್‌ಗೆ ಸಂಬAಧಿಸಿದ ಮಾಹಿತಿ ನೀಡಲು ದಿನ ೨೪ ಗಂಟೆಗಳ ಕಾಲ ಕಾರ್ಯನಿರ್ವಹಿಸುತ್ತಿದೆ. ಬೀಳಗಿ ತಾಲೂಕಾ ಆಸ್ಪತ್ರೆಯ ವೈದ್ಯರಾದ ಡಾ.ಕರೆನ್ನವರ (೯೪೪೮೪೩೫೧೯೫), ಡಾ.ವಿಲಾಸ ಕರವತಿಕರ (೯೧೬೪೮೭೪೨೩೧), ತಹಶೀಲ್ದಾರ ಶಂಕರ ಗೌಡಿ (೯೭೩೯೯೭೬೮೨೯) ಹಾಗೂ ನಿರಾಣಿ ಫೌಂಡೇಶನ್ ಸಂಚಾಲಕ (೭೪೮೩೭೪೯೫೫೪) ಇವರನ್ನು ಸಂಪರ್ಕಿಸಬಹುದಾಗಿದೆ.
-ಮುರುಗೇಶ ನಿರಾಣಿ, ಗಣಿ ಮತ್ತು ಭೂವಿಜ್ಞಾನ ಸಚಿವರು.

 

 

 

 

 

Nimma Suddi
";