ಮಾರ್ಚ್ 2024ರ ದ್ವಿತೀಯ ಪಿಯುಸಿ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳ ಕರಡು ಪ್ರವೇಶ ಪತ್ರಗಳನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿಯ ಜಾಲತಾಣದಲ್ಲಿ ಬಿಡುಗಡೆ ಮಾಡಲಾಗಿದ್ದು, ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲರು ಪಿಯು ಎಕ್ಸಾಮ್ ಪೋರ್ಟಲ್ ಗೆ ಲಾಗಿನ್ ಆಗುವ ಮೂಲಕ ವಿದ್ಯಾರ್ಥಿಗಳ ಕರಡು ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.
ನಂತರ ಪ್ರವೇಶ ಪತ್ರದಲ್ಲಿ ಯಾವುದೇ ತಿದ್ದುಪಡಿಗಳು ಇದ್ದರೂ ಈಗಲೇ ಕ್ರಮಕೈಗೊಂಡು ತಿದ್ದುಪಡಿ ಮಾಡಿಕೊಳ್ಳಬಹುದು.
ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಲು ಭೇಟಿ ನೀಡಬೇಕಾದ ವೆಬ್‌ಸೈಟ್ ವಿಳಾಸ : www.kseab.karnataka.gov.in
ಕರಡು ಪ್ರವೇಶ ಪತ್ರದಲ್ಲಿ ವಿದ್ಯಾರ್ಥಿಯ ಹೆಸರು, ತಂದೆ ತಾಯಿಯ ಹೆಸರು, ಲಿಂಗ, ವರ್ಗ ತಿದ್ದುಪಡಿಗಳಿದ್ದಲ್ಲಿ SATS ನಲ್ಲಿ ತಿದ್ದುಪಡಿ ಮಾಡಿದ ನಂತರ ಸೂಕ್ತ ದಾಖಲೆಗಳೊಂದಿಗೆ ಮಂಡಲಿಯ ಸಂಬಂಧಿಸಿದ ಜಿಲ್ಲಾ ಶಾಖಾಧಿಕಾರಿಗಳಿಗೆ ದಿನಾಂಕ 30-01-2024 ರೊಳಗೆ ನೇರವಾಗಿ ಸಲ್ಲಿಸಬೇಕಾಗಿದೆ.ವಿದ್ಯಾರ್ಥಿಗಳ ಭಾವಚಿತ್ರದಲ್ಲಿ ವ್ಯತ್ಯಾಸಗಳಿದ್ದಲ್ಲಿ ವಿದ್ಯಾರ್ಥಿಯ ಭಾವಚಿತ್ರವನ್ನು ಮತ್ತೊಮ್ಮೆ ಅಪ್‌ಲೋಡ್ ಮಾಡಲು ಅಪ್‌ಡೇಟ್ ಆಪ್ಶನ್ ಮೂಲಕ ಕಾಲೇಜು ಲಾಗಿನ್‌ನಲ್ಲಿ ಪ್ರಾಂಶುಪಾಲರಿಗೆ ಅವಕಾಶ ನೀಡಲಾಗಿದೆ.
ಕರಡು ಪ್ರವೇಶ ಪತ್ರದ ಪಟ್ಟಿಯಲ್ಲಿ ಯಾವುದೇ ವಿದ್ಯಾರ್ಥಿಯ ಮಾಹಿತಿಯು ನಮೂದಾಗದಿದ್ದಲ್ಲಿ ಅಥವಾ ಮಾಧ್ಯಮ, ವಿಷಯ ತಿದ್ದುಪಡಿ, ಸಂಯೋಜನ ತಿದ್ದುಪಡಿಗಳಿದ್ದಲ್ಲಿ SATS ನಲ್ಲಿ ತಿದ್ದುಪಡಿದ ನಂತರ ಸೂಕ್ತ ದಾಖಲೆಗಳೊಂದಿಗೆ ಜಿಲ್ಲಾ ಉಪನಿರ್ದೇಶಕರ ಶಿಫಾರಸ್ಸಿನೊಂದಿಗೆ ಮಂಡಲಿಯ ಸಂಬಂಧಿಸಿದ ಜಿಲ್ಲಾ ಶಾಖಾಧಿಕಾರಿಗಳಿಗೆ ದಿನಾಂಕ 30-01-2024 ರೊಳಗೆ ನೇರವಾಗಿ ಸಲ್ಲಿಸುವುದು.