ಬೆಂಗಳೂರು : ಎಲ್‌ಎಸ್‌ಡಿ (ಲೈಸರ್ಜಿಕ್ ಆ್ಯಸಿಧಿಡ್ ಡೈಥೈಲಾಮೈಡ್)ನಂತಹ ಮಾದಕ ವಸ್ತುವನ್ನು ವಶಪಡಿಸಿಕೊಳ್ಳುವ ಸಂದರ್ಭದಲ್ಲಿ ಅದರೊಂದಿಗಿನ ಬ್ಲಾಟರ್ ಪೇಪರ್‌ನ ತೂಕವನ್ನೂ ಪರಿಗಣಿಸಬೇಕಾಗುತ್ತದೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ ಎಂದು ಮಾಹಿತಿ ತಿಳಿದು ಬಂದಿದೆ.
ತನ್ನ ವಿರುದ್ಧ ಎನ್‌ಡಿಪಿಎಸ್ ಕಾಯಿದೆಯಡಿ ದಾಖಲಾಗಿರುವ ಪ್ರಕರಣ ರದ್ದು ಕೋರಿ ಬೆಂಗಳೂರಿನ ನರೇಂದ್ರ ಅಲಿಯಾಸ್ ಪಾಂಡು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ವಿಶ್ವಜಿತ್‌ಶೆಟ್ಟಿ ಅವರಿದ್ದ ಏಕಸದಸ್ಯ ಪೀಠ, ಈ ಆದೇಶ ನೀಡಿದೆ.
ಬ್ಲಾಟರ್‌ಪೇಪರ್ ಸೈಕೋಟ್ರೋಪಿಕ್ ವಸ್ತುವಾಗಿರುವ ಎಲ್‌ಎಸ್‌ಡಿಯ ಪರ್ಯಾಯ ರೂಪವಾಗಿದೆ. ಎಲ್‌ಎಸ್‌ಡಿಯೊಂದಿಗೆ ಬ್ಲಾಟರ್ ಪೇಪರನ್ನು ಸೇವನೆ ಮಾಡುವುದರಿಂದ ಅದೂ ಮಾದಕ ವಸ್ತುವಿನೊಂದಿಗೆ ಪರಿಗಣಿಸಬೇಕು ಎಂದು ನ್ಯಾಯಪೀಠ ಹೇಳಿದೆ.
ಅಲ್ಲದೆ, ಬ್ಲಾಟರ್ ಪೇಪರ್ ಜತೆ ಆಕ್ಷೇಪಾರ್ಹ ಔಷಧದ ತೂಕವನ್ನು ಪರಿಗಣಿಸಿದರೆ ಅದು 0.10 ಗ್ರಾಂ ತೂಗುತ್ತದೆ. ಇದು ವಾಣಿಜ್ಯ ಪ್ರಮಾಣವಾಗಿದೆ. ಆದ್ದರಿಂದ ಪ್ರತಿ ಬ್ಲಾಟರ್ ಪೇಪರ್‌ನಲ್ಲಿ ಸುಮಾರು 30 ರಿಂದ 50 ಮೈಕ್ರೋ ಗ್ರಾಂಗಳಷ್ಟು ಸೈಕೋಟ್ರೋಪಿಕ್ ವಸ್ತುವಿರಬಹುದು ಮತ್ತು ಅದರಿಂದ ವಶಪಡಿಸಿಕೊಂಡ ಎಲ್‌ಎಸ್‌ಡಿ ಸಣ್ಣ ಪ್ರಮಾಣ (2000 ಮೈಕ್ರೋ ಗ್ರಾಗಳವರೆಗೆ) ಮಾತ್ರ ಇತ್ತು ಎಂಬ ಅರ್ಜಿದಾರರ ವಾದವನ್ನು ನ್ಯಾಯಪೀಠ ತಿರಸ್ಕರಿಸಿದೆ.
ಅರ್ಜಿದಾರರ ಪರ ವಕೀಲರು, ‘ಅರ್ಜಿದಾರರು ಸ್ವೀಕರಿಸಿರುವ ಮಾದಕ ವಸ್ತು ಅತ್ಯಂತ ಕಡಿಮೆ ಪ್ರಮಾಣದಲ್ಲಿದ್ದು, ಅದನ್ನು ವಾಣಿಜ್ಯ ಬಳಕೆಗೆ ಪಡೆದುಕೊಳ್ಳದೆ ಸ್ವಂತ ಉದ್ದೇಶಕ್ಕಾಗಿ ಬಳಕೆಗಾಗಿ ಸ್ವೀಕರಿಸಿದ್ದರು. ಹಾಗಾಗಿ, ಎನ್‌ಡಿಪಿಎಸ್ ಕಾಯಿದೆ ಉಲ್ಲಂಘನೆ ಆಗುವುದಿಲ್ಲ’ ಎಂದು ವಾದ ಮಂಡಿಸಿದ್ದರು.
ಅಲ್ಲದೆ, ಸುಪ್ರೀಂಕೋರ್ಟ್ ಹಲವು ಪ್ರಕರಣಗಳಲ್ಲಿ ಆಕ್ಷೇಪಾರ್ಹ ಮಾದಕ ವಸ್ತುಗಳ ತೂಕವನ್ನು ಪರಿಗಣಿಸುವ ಸಂದರ್ಭದಲ್ಲಿ ಬ್ಲಾಟರ್ ಪೇಪರನ್ನು ಕೂಡ ಪರಿಗಣಿಸಬೇಕೆಂದು ಆದೇಶಿಸಿದೆ. ಹಾಗಾಗಿ, ಬ್ಲಾಟರ್ ಪೇಪರ್ ಎಂಬುದು ಎಲ್‌ಎಸ್‌ಡಿಯೊಂದಿಗೆ ಇರಲಿದ್ದು, ಎರಡನ್ನೂ ಒಟ್ಟಾಗಿ ಸೇವನೆ ಮಾಲಿದ್ದಾರೆ.