This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

Education NewsHealth & FitnessLocal NewsNational NewsState News

ಪಟ್ಟಣ ಪಂಚಾಯಿತಿಗಳಲ್ಲೇ ಅಮೀನಗಡ ಪಪಂಗೆ ಮೊದಲ ಸ್ಥಾನ

ಪಟ್ಟಣ ಪಂಚಾಯಿತಿಗಳಲ್ಲೇ ಅಮೀನಗಡ ಪಪಂಗೆ ಮೊದಲ ಸ್ಥಾನ

ಬಾಗಲಕೋಟೆ

ಸ್ವಚ್ಛ ಸರ್ವೇಕ್ಷಣಾ ಸಮೀಕ್ಷೆ-೨೦೨೩ರಲ್ಲಿ ಜಿಲ್ಲೆಯ ಹುನಗುಂದ ತಾಲೂಕಿನ ಅಮೀನಗಡ ಪಟ್ಟಣ ಪಂಚಾಯಿತಿ ಸತತ ಐದನೇ ವರ್ಷವೂ ಜಿಲ್ಲೆಯ ೭ ಪಟ್ಟಣ ಪಂಚಾಯಿತಿಗಳಲ್ಲಿ ಮೊದಲ ಸ್ಥಾನ ಮುಂದುವರೆಸಿಕೊಂಡು ಬಂದಿದೆ.

ಕೇಂದ್ರ ಸರಕಾರದ ನಗರಾಭಿವೃದ್ಧಿ ಸಚಿವಾಲಯ ಪ್ರತಿ ವರ್ಷ ನಗರ, ಪಟ್ಟಣಗಳ ಸ್ವಚ್ಛ ಸರ್ವೇಕ್ಷಣಾ ಸಮೀಕ್ಷೆ ನಡೆಸುತ್ತದೆ. ಕಸ ವಿಂಗಡಣೆ, ತ್ಯಾಜ್ಯ ವಿಲೇವಾರಿ, ಸಾರ್ವಜನಿಕ ಶೌಚಾಲಯ ನಿರ್ವಹಣೆ, ರಸ್ತೆ ನಿರ್ಮಾಣ, ಜನರ ಸ್ಪಂದನೆ ಸೇರಿದಂತೆ ಹಲವು ಅಂಶಗಳ ಆಧಾರದಲ್ಲಿ ಸಮೀಕ್ಷೆ ನಡೆಸಿ ರ‍್ಯಾಂಕಿಂಗ್ ನೀಡುತ್ತದೆ.

ಈ ರ‍್ಯಾಂಕಿಂಗ್‌ನಲ್ಲಿ ದಕ್ಷಿಣ ವಲಯದಲ್ಲಿ ೧೫ ರಿಂದ ೨೫ ಸಾವಿರ ಜನಸಂಖ್ಯೆಯೊಳಗಿನ ಪಟ್ಟಣಗಳ ಸಮೀಕ್ಷೆಯಲ್ಲಿ ಅಮೀನಗಡ ಪಟ್ಟಣ ಪಂಚಾಯಿತಿ ಪ್ರಸಕ್ತ ಸಾಲಿನಲ್ಲಿ ೧೩೮ನೇ ರ‍್ಯಾಂಕ್ ಪಡೆದಿದೆ. ೨೦೧೯ ರಿಂದ ನಡೆದ ಸಮೀಕ್ಷೆಯಲ್ಲಿ ಸತತ ಸಾಧನೆಯೊಂದಿಗೆ ಇದೀಗ ರಾಜ್ಯಗಳ ಸಮೀಕ್ಷೆ ರ‍್ಯಾಂಕ್‌ನಲ್ಲಿ ೬೬ನೇ ರ‍್ಯಾಂಕ್ ಗಳಿಕೆ ಮೂಲಕ ಜಿಲ್ಲೆಯ ಪಪಂಗಳಿಗೆ ಹೋಲಿಸಿದರೆ ಪ್ರಥಮ ರ‍್ಯಾಂಕ್ ನಿರಂತರವಾಗಿ ಕಾಯ್ದುಕೊಂಡು ಬಂದಿದೆ.

ಗ್ರಾಪಂನಿಂದ ಪಪಂ ವರಿವರ್ತನೆ ಆಗಿ ೮ ವರ್ಷ ಗತಿಸಿದರೂ ಈವರೆಗೆ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣವಾಗಿಲ್ಲ. ಹೀಗಾಗಿ ಆರಂಭದಲ್ಲಿ ಪಟ್ಟಣದ ಹೊರ ವಲಯದಲ್ಲಿ ಕಸ ಹಾಕುವಂತಾಗಿತ್ತು. ಇದೀಗ ಹುನಗುಂದದಲ್ಲಿನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ರವಾನಿಸಲಾಗುತ್ತಿದ್ದು ಪಟ್ಟಣದಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕವಿಲ್ಲದಿದ್ದರೂ ಉತ್ತಮ ಸಾಧನೆಯತ್ತ ಹೆಜ್ಜೆ ಹಾಕಿದೆ. ಪೌರಕಾರ್ಮಿಕರ ಸೇವೆ ಹಾಗೂ ಜನತೆಯ ಸಹಕಾರವೇ ಪ್ರತಿ ವರ್ಷ ರ‍್ಯಾಂಕ್‌ನಲ್ಲಿನ ಸುಧಾರಣೆ ಕಾರಣ ಎನ್ನಲಾಗಿದೆ.

ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ಪೈಕಿ ಅಮೀನಗಡ ಪಟ್ಟಣ ಪಂಚಾಯಿತಿ ೬೬ನೇ ರ‍್ಯಾಂಕ್ ಪಡೆದಿದ್ದರೆ, ಬೀಳಗಿ ಪಟ್ಟಣ ಪಂಚಾಯಿತಿ-೮೮ನೇ ರ‍್ಯಾಂಕ್, ಬೆಳಗಲಿ ಪಟ್ಟಣ ಪಂಚಾಯಿತಿ-೯೦ನೇ ರ‍್ಯಾಂಕ್, ಕಮತಗಿ ಪಟ್ಟಣ ಪಂಚಾಯಿತಿ-೨೦೨ನೇ ರ‍್ಯಾಂಕ್, ಶಿರೂರ ಪಟ್ಟಣ ಪಂಚಾಯಿತಿ-೨೩೮ನೇ ರ‍್ಯಾಂಕ್, ಲೋಕಾಪುರ ಪಟ್ಟಣ ಪಂಚಾಯಿತಿ-೨೪೦ನೇ ರ‍್ಯಾಂಕ್ ಹಾಗೂ ಕೆರೂರ ಪಟ್ಟಣ ಪಂಚಾಯಿತಿ-೨೭೨ನೇ ರ‍್ಯಾಂಕ್ ಗಳಿಸಿದೆ.

ಕಸ ವಿಲೇವಾರಿ ವಾಹನದ ಸದ್ದು

ನಸುಕಿನ ಜಾವದಿಂದಲೇ ಕಸ ಸಂಗ್ರಹಕ್ಕೆ ಸಿದ್ದರಾಗುವ ಪೌರ ಕಾರ್ಮಿಕರು ತಮಗೆ ನಿಗದಿಪಡಿಸಿದ ಜಾಗದಲ್ಲಿ ಸ್ವಚ್ಚತೆ ಕಾರ್ಯ ನಡೆಸುತ್ತಾರೆ. ನಂತರ ಮನೆ ಮನೆಗಳಿಂದ ಕಸ ಸಂಗ್ರಹಕ್ಕೆಂದು ವಾಹನಗಳು ಸಂಚರಿಸಿ ಕಸ ಸಂಗ್ರಹಕ್ಕೆ ಮುಂದಾಗುತ್ತವೆ. ಇತ್ತೀಚಿನ ವರ್ಷಗಳಲ್ಲಿ ಜನರೂ ಸಹ ಎಲ್ಲೆಂದರಲ್ಲಿ ಕಸ ಬಿಸಾಕದೆ ಕಸ ವಿಲೇವಾರಿ ವಾಹನ ಬರುವಿಕೆ ಕಾಯುತ್ತಿರುತ್ತಾರೆ.

ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣಕ್ಕಾಗಿ ಜಾಗ ಮಂಜೂರಾಗಿ ಟೆಂಡರ್ ಸಹ ಆಗಿದೆ. ಒಂದು ವರ್ಷದಲ್ಲಿ ಘಟಕ ನಿರ್ಮಾಣವಾಗಲಿದೆ. ಪಟ್ಟಣದ ಸ್ವಚ್ಛತೆ ಕಾಪಾಡುವಲ್ಲಿ ಆರೋಗ್ಯ ಶಾಖೆ ಸಿಬ್ಬಂದಿ, ಜನಪ್ರತಿನಿಧಿಗಳ ಹಾಗೂ ಜನರ ಸಹಕಾರ ಮುಖ್ಯವಾಗಿದೆ.

-ಮಹೇಶ ನಿಡಶೇಶಿ, ಮುಖ್ಯಾಧಿಕಾರಿ. ಅಮೀನಗಡ.

";