ಮೋದಿಯಿಂದ ಮಹತ್ವದ ಘೋಷಣೆ
ನಿಮ್ಮ ಸುದ್ದಿ ನವದೆಹಲಿ
ದೇಶವನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಭಾಷಣ
2022 ಜನೆವರಿ 3 ರಿಂದ 15 ರಿಂದ 18 ವರ್ಷದ ಮಕ್ಕಳಿಗೆ ಲಸಿಕೆ ನೀಡುವ ಪ್ರಕ್ರಿಯೆ ಆರಂಭ. ಶಾಲೆ ಕಾಲೇಜ್ ಗಳಿಗೆ ತೆರಳಿ ಲಸಿಕೆ ನೀಡಲಾಗುವುದು.
ಪ್ರಂಟ್ ಲೈನ್ ವರ್ಕರ್ ಹಾಗೂ ಅನಾರೋಗ್ಯದ ಸಮಸ್ಯೆ ಇದ್ದವರಿಗೆ ಪ್ರಿಕಾಶನ್ ಡೋಸ್ ನೀಡಲಾಗುವುದು. ಅಂದರೆ ಬೂಸ್ಟರ್ ಡೋಸ್ ನೀಡಲಾಗುವುದು.
ದೇಶದಲ್ಲಿ ಓಮಿಕ್ರಾನ್ ಬಗ್ಗೆ ಗಾಬರಿಯಾಗಬೇಡಿ ಎಂದು ಭಾ಼ಷಣ ಆರಂಭಿಸಿದ್ದು, ಮಾಸ್ಕ್ ಧರಿಸುವುದು, ಕೈ ಸ್ವಚ್ಛಗೊಳಿಸುವುದನ್ನು ಮರೆಯಬಾರದು.
ಹೊಸ ವರ್ಷವನ್ನು ಸ್ವಾಗತಿಸೋಣ. 18 ಲಕ್ಷ ಐಸಿಯು ಬೆಡ್ ಗಳಿವೆ. ಶೇ.90ರಷ್ಟು ಜನರಿಗೆ ಮೊದಲ ಡೋಸ್ ಪೂರ್ಣಗೊಂಡಿದೆ. ಕಷ್ಟಕರ ಸ್ಥಿತಿಯಲ್ಲೂ ಸಾಮೂಹಿಕ ಇಚ್ಛಾಸಕ್ತಿ ಪ್ರದರ್ದಸಿಸಲಾಗಿದೆ.
ಎಲ್ಲರಿಗೂ ತಿಳಿದಿದೆ ಕೊರೊನಾ ಇನ್ನೂ ನಮ್ಮಿಂದ ತೊಲಗಿಲ್ಲ. ರೂಪಾಂತರಿ ವೈರಸ್ ಕಾಡುತ್ತಿದೆ. ಈಗ ಅತ್ಯಂತ ಎಚ್ಚರ ಅಗತ್ಯ. ಕೊರೋನಾ ವಿರುದ್ಧ ಭಾರತ ಹೋರಾಡುತ್ತಿದೆ. ಶೇ.16ರಷ್ಟು ಯುವಕರಿಗೆ ಲಸಿಕೆ ನೀಡಲಾಗಿದೆ.