ನಿಮ್ಮ ಸುದ್ದಿ ವಾರಣಾಸಿ
ವಾರಣಾಸಿ ಜಿಲ್ಲಾ ಕೋರ್ಟ್ ನಿಂದ ಮಹತ್ವದ ತೀರ್ಪು
ಹಿಂದು ಕುರುಹು ಇರುವ ಮಸೀದಿಯಲ್ಲಿ ಪೂಜೆಗೆ ಅವಕಾಶ ನೀಡುವ ಅರ್ಜಿ ಕುರಿತಂತೆ ಹಿಂದುಗಳ ಅರ್ಜಿ ಪುರಸ್ಕರಿಸಿದ ನ್ಯಾಯಾಲಯ. ಪೂಜೆಗೆ ಅನುಮತಿ ನೀಡಲು ಅರ್ಜಿ ವಿಚಾರಣೆ ಕೈಗೆತ್ತಿಕೊಳ್ಳುತ್ತೇವೆ ಎಂದು ಕೋರ್ಟ್ ಹೇಳಿದೆ.
ಹಿಂದೂ ಅರ್ಜಿದಾರರಿಗೆ ಮೊದಲ ಗೆಲುವು ಆಗಿದ್ದು ಮುಸ್ಲಿಂ ಅರ್ಜಿದಾರರ ಆಕ್ಷೇಪಣೆ ತಿರಸ್ಕರಿಸಿ ನ್ಯಾಯಾಲಯ.
ತೀರ್ಪು ಓದುವ ಅವಧಿಯಲ್ಲಿ ಕೋರ್ಟ್ ಹಾಲ್ ನಲ್ಲಿ 62 ಜನರಿಗೆ ಮಾತ್ರ ಅವಕಾಶವಿತ್ತು. ಹಿಂದೂ ಹಾಗೂ ಮುಸ್ಲಿಂ ಪರ ವಕೀಲರು ಸೇರಿ 62 ಜನರಿಗೆ ಅವಕಾಶವಿತ್ತು. ಕೋರ್ಟ್ ಹಾಲ್ ನಲ್ಲಿ 40 ಜನರ ಉಪಸ್ಥಿತಿ ಇತ್ತು.
ಕೆಲವೇ ಕ್ಷಣಗಳಲ್ಲಿ ತೀರ್ಪು ಹೊರ ಬಂದಿತು. ತೀರ್ಪು ಓದಿದವರು ನ್ಯಾಯಾಧೀಶ ಎ.ಕೆ.ವಿಶ್ವೇಶ್.
ಪ್ರಕರಣ ವಜಾಗೊಳಿಸುವಂತೆ ಮುಸ್ಲಿಂ ಪರ ವಕೀಲರ ಆಗ್ರಹವಾಗಿತ್ತು. ಕೇಸ್ ನ ವಜಾಗೊಳಿಸಬೇಕೋ ಬೇಡವೋ ಎಂಬ ತೀರ್ಪು ಕಾಯ್ದಿರಿಸಲಾಗಿತ್ತು.
ಆದೇಶದ ಅಂತಿಮ ಪ್ಯಾರಾ ಓದಿದ ನ್ಯಾಯಾಧೀಶರು ವಿಚಾರಣೆ ಮುಂದುವರೆಸುವ ಬಗ್ಗೆ ತೀರ್ಪು ಪ್ರಕಟಿಸಿದರು.
ಸೆ.22 ರಂದು ವಿಚಾರಣೆ ನಡೆಯುತ್ತದೆ. ವಾರಣಾಸಿ ಜಿಲ್ಲಾ ಕೋರ್ಟ್ ಆದೇಶದ ವಿರುದ್ಧ ಹೈ ಕೋರ್ಟ್ ಮೊರೆ ಹೋಗುವುದಾಗಿ ಮುಸ್ಲಿಂ ಪರ ವಕೀಲರು ತಿಳಿಸಿದ್ದಾರೆ.