This is the title of the web page
This is the title of the web page

Live Stream

October 2024
S M T W T F S
 12345
6789101112
13141516171819
20212223242526
2728293031  

| Latest Version 9.4.1 |

State News

ಯುವಾ ಬ್ರಿಗೇಡ್‌ನಿಂದ ವಿನೂತನ ಕಾರ್ಯಕ್ರಮ

ರಾಜ್ಯೋತ್ಸವ ಪ್ರಶಸ್ತಿ, ಯುವಾ ಬ್ರಿಗೇಡ್‌ನಿಂದ ವಿನೂತನ ಕಾರ್ಯಕ್ರಮ

ನಿಮ್ಮ ಸುದ್ದಿ ಬಾಗಲಕೋಟೆ
ಯುವಾ ಬ್ರಿಗೇಡ್ ಸಂಘಟನೆಗೆ ಸಂಕೀರ್ಣ ವಿಭಾಗದಲ್ಲಿ ನೀಡುವ ರಾಜ್ಯಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನವಾದ ಹಿನ್ನೆಲೆಯಲ್ಲಿ ಸಂಘಟನೆ ಸದಸ್ಯರು ಜಿಲ್ಲೆಯಲ್ಲಿನ ಬಸ್‌ನಿಲ್ದಾಣಗಳನ್ನು ಸ್ವಚ್ಛಗೊಳಿಸುವ ಮೂಲಕ ವಿನೂತವಾಗಿ ಸಂಭ್ರಮಿಸಿದರು.
ಶನಿವಾರ ಸಂಜೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಸಮಾರಂಭದಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಪ್ರಶಸ್ತಿ ಪ್ರದಾನ ಮಾಡಿದರು. ಯುವಾ ಬ್ರಿಗೇಡ್‌ನ ದಕ್ಷಿಣ ಭಾಗದ ರಾಜ್ಯ ಸಂಚಾಲಕ ಚಂದ್ರು ನಂಜನಗೂಡು ಪ್ರಶಸ್ತಿ ಸ್ವೀಕರಿಸಿದರು.
ಈ ಖುಷಿಯನ್ನು ಯುವಾ ಬ್ರಿಗೇಡ್ ರಾಜ್ಯಾದ್ಯಂತ ಆಯ್ದ ಬಸ್ ನಿಲ್ದಾಣಗಳನ್ನು ಸ್ವಚ್ಛಗೊಳಿಸುವ ಮೂಲಕ ಆಚರಿಸಿಕೊಂಡಿತು. ರಾಜ್ಯೋತ್ಸವ ಪ್ರಶಸ್ತಿ ಸ್ವೀಕಾರ ಮಾಡುವ ಹೊತ್ತಲ್ಲಿ ಬ್ರಿಗೇಡ್‌ನ ಕಾರ್ಯಕರ್ತರು ರಾಜ್ಯಾದ್ಯಂತ ಸರಕಾರಿ ಬಸ್ ನಿಲ್ದಾಣಗಳನ್ನು ಸ್ವಚ್ಛಗೊಳಿಸಿ, ಸುಣ್ಣ ಬಳಿದು ಸುಂದರ ರೂಪ ನೀಡಿದರು.
ಕೊರೊನಾ ಬಂದಿದೆ ಎಂದು ಎಚ್ಚರಿಕೆ ವಹಿಸುವುದು ಸರಿಯಷ್ಟೆ. ಆದರೆ ಎಷ್ಟು ದಿನ ಚಟುವಟಿಕೆ ನಿಲ್ಲಿಸಲು ಸಾಧ್ಯ. ಹೀಗಾಗಿ ಎಲ್ಲ ಚಟುವಟಿಕೆ ಪುನರಾರಂಭವಾಗಿವೆ ಎಂಬ ವಿಶ್ವಾಸ ಮೂಡಿಸಲು ನಿಲ್ದಾಣಗಳು ಕ್ರಿಯಾಶೀಲವಾಗಿರಬೇಕು ಎಂಬುದೊAದೆ ದಾರಿ ಎಂದು ಈ ಪ್ರಯತ್ನಕ್ಕೆ ಯುವಾ ಬ್ರಿಗೇಡ್ ಕೈ ಹಾಕಿತು.
ನಡೆ ಮುಂದೆ, ನಡೆ ಮುಂದೆ ಹಿಗ್ಗಿ ನಡೆ ಮುಂದೆ ಎಂಬ ಕವಿವಾಣಿಯನ್ನು ಅನುಸರಿಸಿ ಜಗ್ಗದೆ, ಕುಗ್ಗದೇ ನಡೆಯೋಣ, ಮೈಯೆಲ್ಲಾ ಕಣ್ಣಾಗಿಸಿ ಎಚ್ಚರಿಕೆಯೊಂದಿಗೆ ಇರೋಣ ಯುವ ಬ್ರಿಗೇಡ್‌ಗೆ ಸಂದಿರುವ ಈ ಪುರಸ್ಕಾರದ ಆನಂದ ನಾಡಿನ ಎಲ್ಲ ಜನತೆಗೂ ದೊರೆಯಬೇಕು ಎಂಬ ಚಿಂತನೆಯೊAದಿಗೆ ರಾಜ್ಯಾದ್ಯಂತ ಬಸ್‌ನಿಲ್ದಾಣ ಸ್ವಚ್ಚಗೊಳಿಸುವುದು ಹಾಗೂ ಸುಣ್ಣ ಬಣ್ಣ ಬಳಿಯುವ ಕಾರ್ಯ ನಡೆಯಿತು.
ಬಾಗಲಕೋಟೆ ಜಿಲ್ಲೆಯಲ್ಲೂ ಈ ಅಭಿಯಾನ ನಡೆದಿದ್ದು ನಗರದ ವಿದ್ಯಾಗಿರಿ ಬಸ್ ನಿಲ್ದಾಣ, ಬೀಳಗಿ ತಾಲೂಕಿನ ನಾಗರಾಳ, ಬಾದಾಮಿ ತಾಲೂಕಿನ ನಸೀಬಿ, ಜಮಖಂಡಿ, ರಬಕವಿ-ಬನಹಟ್ಟಿ, ಹುನಗುಂದ ತಾಲೂಕಿನ ಸೂಳೇಬಾವಿ, ಬಾಗಲಕೋಟೆ ತಾಲೂಕಿನ ಭಗವತಿ ಬಸ್ ನಿಲ್ದಾಣಗಳನ್ನು ಸ್ವಚ್ಚಗೊಳಿಸಿ ಸುಣ್ಣ ಬಣ್ಣ ಬಳಿಯುವ ಮೂಲಕ ಸಂಭ್ರಮಿಸಿದರು.
ಬಸ್ ನಿಲ್ದಾಣಗಳು ಸಾರ್ವಜನಿಕ ಆಸ್ತಿಯಾಗಿದ್ದು, ಜನ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಅವುಗಳು ಗಲೀಜಾಗದಂತೆ ಎಚ್ಚರ ವಹಿಸಬೇಕು ಎಂದು ಯುವಾ ಬ್ರಿಗೇಡ್ ಸಂಘಟಕರು ಮನವಿ ಮಾಡಿದರು. ಬ್ರಿಗೇಡ್ ಕಾರ್ಯಕರ್ತರಾದ ಶ್ರೀಧರ ನಿರಂಜನ, ರವಿ ಗೌಡರ, ಸುರೇಶ ಗೌಡರ, ಪ್ರವೀಣ ಅನಗವಾಡಿ ಇತರರು ಇದ್ದರು.

";