ಬೆಳಗಾವಿ: ಉತ್ತರ ಕನ್ನಡದ ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗಡೆ ಅವರು ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಸಂಪಗಾಂವ ಗ್ರಾಮದಲ್ಲಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
ಉತ್ತರ ಕನ್ನಡದಲ್ಲಿ ಕಾಂಗ್ರೆಸ್ ಅಭ್ಯರ್ಥಿಯೇ ಇಲ್ಲ. ಚುನಾವಣೆಗೆ ಸ್ಪರ್ಧಿಸಿದರೆ ಎಂದರೆ ಕರಿಮಣಿ ಮಾಲೀಕ ನಾನಲ್ಲಾ ಎನ್ನುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದು, ನಮ್ಮ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಇಲ್ಲ. ಕಾಂಗ್ರೆಸ್ನಲ್ಲಿದ್ದ ಪದಾಧಿಕಾರಿಗಳು ಹೋಗಿ ನೀವು ನಿಲ್ಲಿರಿ ಅಂದರೆ ಕರಿಮನಿ ಮಾಲೀಕ ನಾನಲ್ಲಾ ಎಂದು ಹೇಳಿದರು.
ನಮ್ಮ ಕ್ಷೇತ್ರದಲ್ಲಿ ಸ್ಪರ್ಧಿಸಲು ಯಾರು ಒಲ್ಲೆ ಎನ್ನುತ್ತಿದ್ದು, ಕರಿಮಣಿ ಮಾಲೀಕ ನಾನಲ್ಲ ಎಂದು ಹೇಳುತ್ತಿದ್ದಾರೆ. ಆದರೂ ಯಾರಿಗಾದರೂ ಒಬ್ಬರಿಗೆ ಕರಿಮಣಿ ಕಟ್ಟಿಸುತ್ತಾರೆ ಬಿಡಿ ಎಂದು ವ್ಯಂಗ್ಯವಾಡಿದ್ದು, ಮತ್ತೆ ಯಾರು ಸಿಗುವುದಿಲ್ಲಾ ಅಂತಾ ಖಾನಾಪುರದಲ್ಲಿ ರಿಜೆಕ್ಟೆಡ್ ಮಟೀರಿಯಲ್ ಇದೆ, ಅದನ್ನ ತಗೊಂಡ ಹೋಗಿ ನಿಲ್ಲಿಸುತ್ತಾರೆ. ಖಾನಾಪುರದ ರಿಜೆಕ್ಟೆಡ್ ಮಟಿರಿಯಲ್ ನಮ್ಮ ಕ್ಷೇತ್ರದ ಅಭ್ಯರ್ಥಿ. ಖಾನಾಪುರದಿಂದ ಜನ ತಿರಸ್ಕಾರ ಮಾಡಿ ಓಡಿಸಿದ್ದಾರೆ, ಎಲ್ಲಾ ಅಡ್ಡಾಡಿಸುತ್ತಿದ್ದಾರೆ ಎಂದರು.
ಸಿದ್ದರಾಮಯ್ಯನವರು ಕರೆದುಕೊಂಡು ಓಡಾಡುತ್ತಿದ್ದು, ಯಾರೇ ಆಗಲಿ ಕಾಂಗ್ರೆಸ್ಗೆ ಉತ್ತರ ಕೊಡುವ ಅವಶ್ಯಕತೆ ಇಲ್ಲ ಎಂದು ಖಾನಾಪುರ ಮಾಜಿ ಶಾಸಕಿ ಅಂಜಲಿ ನಿಂಬಾಳ್ಕರ್ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದು, ಮೋದಿಯವರ ಪರವಾಗಿ ಜನ ವೋಟ್ ಹಾಕಲು ಸಿದ್ಧರಾಗಿದ್ದಾರೆ. ನಾವು ಹೋಗಿ ಒಂದು ಸಾರಿ ಪ್ರೀತಿಯಿಂದ ಕೇಳಿದರೆ ಸಾಕು ಜನ ವೋಟ್ ಕೊಡುತ್ತಾರೆ ಎಂದು ತಿಳಿಸಿದರು.