ಬಾಗಲಕೋಟೆ: ವಕ್ಫ್ ಕಾಯ್ದೆ ತಂದು ಈ ಜಾಗ ನಮ್ಮದು ಎಂದರೆ ಅವರಿಗೆ ಬಿಟ್ಟುಕೊಡಬೇಕು. ನಮ್ಮ ದೇವಸ್ಥಾನ ಕಟ್ಟಲು ಅನುಮತಿಗಾಗಿ ಭಿಕ್ಷೆ ಬೇಡಬೇಕು. ಆದರೆ ಇನ್ಮುಂದೆ ಚರ್ಚ್ ಮಸೀದಿ ಕಟ್ಟಲು ಯಾರ ಅನುಮತಿ ಬೇಡ. ಮುಖ್ಯಮಂತ್ರಿ ಸಿದ್ದರಾಮಯ್ಯ ಅನುಮತಿ ಪಡೆದರೆ ಸಾಕು ಎಂದು ಸಂಸದ ಅನಂತಕುಮಾರ್ ಹೆಗಡೆ ಹೇಳಿದರು.
ಮುದೋಳ ತಾಲೂಕಿನ ಶಿರೋಳ ಗ್ರಾಮದಲ್ಲಿ ಮಾತನಾಡಿದ ಅವರು, ಮುಜರಾಯಿ ಇಲಾಖೆ ಇನ್ಮುಂದೆ ಪೇಪರ್ನಲ್ಲಿ ಮಾತ್ರ ಉಳಿಯುತ್ತೆ. ಮುಸ್ಲಿಮರು ನೆಮ್ಮದಿಯಿಂದ ಬದುಕಬೇಕಾದರೆ ಯುಸಿಸಿ ಒಪ್ಪಿಕೊಳ್ಳಬೇಕು ಎಂದರು.ರಾಜ್ಯಕ್ಕೆ ತೆರಿಗೆ ಹಂಚಿಕೆಯಲ್ಲಿ ಕೇಂದ್ರ ತಾರತಮ್ಯ ಮಾಡಿದ ಎಂಬ ಕಾಂಗ್ರೆಸ್ ನಾಯಕರ ಆರೋಪದ ವಿಚಾರವಾಗಿ ಮಾತನಾಡಿದ ಅವರು, ಆಂಧ್ರ ಪ್ರದೇಶ, ತೆಲಂಗಾಣ, ಒಡಿಶಾದಲ್ಲಿ ಬಿಜೆಪಿ ಸರ್ಕಾರ ಇಲ್ಲ. ಇವರಿಗೆ ಇಲ್ಲದ ತೆರಿಗೆ ವಿಚಾರ ರಾಜ್ಯ ಕಾಂಗ್ರೆಸ್ನವರಿಗೆ ಇದೆ. ದೇಶದಲ್ಲಿ ಶೇಕಡಾ 99.99ರಷ್ಟು ತೆರಿಗೆ ಕಟ್ಟುವವರು ಹಿಂದೂಗಳು ಎಂದು ತಿಳಿಸಿದರು.
ಹಿಂದೂ ಸಮಾಜ ಜಾತಿ ವಿಷ ಬೀಜ ಮರೆತು ಒಂದಾಗಬೇಕು. ಯಾವ ಋಷಿಗಳು ಬ್ರಾಹ್ಮಣರಿರಲ್ಲ. ನಮ್ಮಲ್ಲಿ ಜಾತಿ ಇರಲಿಲ್ಲ, ಅವನ ಉದ್ಯೋಗದ ಮೇಲೆ ಗುರುತಿಸುತ್ತಿದ್ದರು. ಪೂಜೆ ಮಾಡುವ ದೇವರೆಲ್ಲ ಬ್ರಾಹ್ಮಣ ದೇವರಲ್ಲ. ಒಳ್ಳೆಯದು ಜಗತ್ತಿನ ಯಾವ ಮೂಲೆಯಲ್ಲಿದ್ದರೂ ನಮ್ಮಲ್ಲಿ ಬರಲಿ ಅಂತಿದ್ದು, ಹಿಂದೂ ರಾಷ್ಟ್ರ ಮಾಡುವುದೇ ನಮ್ಮ ಗುರಿ ಎಂದು ಹೇಳಿದರು.