ಬೆಳಗಾವಿ: ದೇಶದಲ್ಲಿ ಬಿಜೆಪಿಗೆ 400 ಸೀಟು ಬಂದರೆ ಕೇಂದ್ರದಲ್ಲಿ ನಮ್ಮ ಸರ್ಕಾರ ಬರುತ್ತೆ. ಕೇಂದ್ರದಲ್ಲಿ ನಮ್ಮ ಸರ್ಕಾರ ಬಂದರೆ ರಾಜ್ಯದಲ್ಲೂ ನಮ್ಮ ಸರ್ಕಾರವೇ ಇರುತ್ತೆ. ಆಗ ನೋಡಿ ಮಾರಿ ಹಬ್ಬ ಆರಂಭ ಆಗುತ್ತದೆ. ಅವಾಗ ನಮ್ಮ ತಲ್ವಾರದ ತುದಿ ಹೇಗೆ ಜಳಪಿಸುತ್ತೆ ನೋಡಿ ಎಂದು ಸಂಸದ ಅನಂತಕುಮಾರ್ ಹೆಗಡೆ ಮತ್ತೆ ಪ್ರಚೋದಾತ್ಮಕ ಹೇಳಿಕೆ ನೀಡಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.
ಜಿಲ್ಲೆಯ ಖಾನಾಪುರ ತಾಲೂಕಿನ ನಂದಗಡ ಗ್ರಾಮದಲ್ಲಿ ನಡೆದ ಸ್ಥಳೀಯ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಲೋಕಸಭೆ ಚುನಾವಣೆ ಬಳಿಕ ರಾಜ್ಯದಲ್ಲಿ ಸರ್ಕಾರ ಪತನ ಆಗುತ್ತದೆ ಎಂದು ಹೇಳಿದ್ದು, ಬಿಜೆಪಿ ನಿಮ್ಮಲ್ಲಿ ವಿನಂತಿ ಮಾಡುತ್ತೆ ಪ್ರತಿಯೊಂದು ಓಟು ಮಹತ್ವವಿದೆ. ಈ ಹಿಂದೆ ಸರ್ಕಾರ ಕೇವಲ ಒಂದು ಮತದ ಅಂತರ ಸೋಲಾಗಿ ವಾಜಪೇಯಿ ಪ್ರಧಾನಿ ಸ್ಥಾನದಿಂದ ಕೆಳಗಿಳಿದರು. ಬರುವ ಎರಡು ತಿಂಗಳ ಚುನಾವಣೆಯಲ್ಲಿ ಪ್ರಕ್ರಿಯೆ ಮುಗಿದು ಹೋಗಿರುತ್ತೆ ಎಂದರು.
ಐದರಿಂದ ಹತ್ತು ದಿನಗಳ ಅವಧಿಯಲ್ಲಿ ಚುನಾವಣೆ ದಿನಾಂಕ ಘೋಷಣೆ ಆಗುತ್ತಿದ್ದು, ಏಪ್ರಿಲ್ ಕೊನೆ ವಾರದಲ್ಲಿ ಚುನಾವಣೆ ಮುಗಿಯುತ್ತೆ ಅಲ್ಲಿಯವರೆಗೆ ನಾವು ಕೆಲಸ ಮಾಡಬೇಕಿದೆ. ಮುಂದಿನ ಎರಡು ತಿಂಗಳಲ್ಲಿ ಚುನಾವಣೆ ಬಂದಿದೆ, ಎಲ್ಲರೂ ಪ್ರಚಾರ ಮಾಡಬೇಕು ಅಂತಿಲ್ಲ, ಹೊಸಬರಿಗೆ ಮೋದಿ ಬಗ್ಗೆ ಹೇಳಬೇಕು. ಮತ್ತೊಮ್ಮೆ ಮೋದಿಗೆ ಅವಕಾಶ ಕೊಡಬೇಕೆಂದು ಮನವಿ ಮಾಡಿದ್ದಾರೆ.
ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರ ಹರಾಜಾಗುತ್ತಿದೆ. 1 ವರ್ಷದಲ್ಲಿ ಸಿದ್ದರಾಮಯ್ಯ ಸರ್ಕಾರ ಹರಾಜಾಗಿದೆ. ವೇತನ ಕೊಡುವುದಕ್ಕೂ ಸರ್ಕಾರದ ಬಳಿ ಹಣ ಇಲ್ಲ. ಮನೆಯಲ್ಲಿ ಯಾರಾದರೂ ಸರ್ಕಾರಿ ನೌಕರರಿದರೆ ಕೇಳಿ ಸಂಬಳದಲ್ಲೂ ವ್ಯತ್ಯಯ ಆಗುತ್ತಿದೆ ಎಂದು ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದರು.