This is the title of the web page
This is the title of the web page

Live Stream

April 2025
S M T W T F S
 12345
6789101112
13141516171819
20212223242526
27282930  

| Latest Version 9.4.1 |

Education NewsLocal NewsState News

೬೨೫ಕ್ಕೆ ೬೨೫ ಅಂಕ ಪಡೆದ ಅಂಕಿತಾ ರಾಜ್ಯಕ್ಕೆ ಟಾಪರ್

೬೨೫ಕ್ಕೆ ೬೨೫ ಅಂಕ ಪಡೆದ ಅಂಕಿತಾ ರಾಜ್ಯಕ್ಕೆ ಟಾಪರ್

ಬಾಗಲಕೋಟೆ

೨೦೨೩-೨೪ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯ ಫಲಿತಾಂಶ ಗುರುವಾರ ಪ್ರಕಟಗೊಂಡಿದ್ದು, ಜಿಲ್ಲೆಯ ಅಂಕಿತಾ ಕೊಣ್ಣೂರ ೬೨೫ಕ್ಕೆ ೬೨೫ ಅಂಕ ಪಡೆಯುವ ಮೂಲಕ ಇಡೀ ರಾಜ್ಯಕ್ಕೆ ಮೊದಲ ಸ್ಥಾನ ಪಡೆದುಕೊಂಡಿದ್ದು, ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಹಾಗೂ ಜಿಲ್ಲಾ ಪಂಚಾಯತ ಸಿಇಓ ಶಶಿಧರ ಕುರೇರ ಅಭಿನಂಧನೆ ಸಲ್ಲಿಸಿದ್ದಾರೆ.

ಜಿಲ್ಲೆಯ ಮುಧೋಳ ತಾಲೂಕಿನ ವಜ್ರಮಟ್ಟಿ ಗ್ರಾಮದ ಬಸಪ್ಪ ಮತ್ತು ಗೀತಾ ದಂಪತಿಗಳ ಮಗಳಾದ ಅಂಕಿತಾ ಕೊಣ್ಣೂರ ಸ್ವ-ಗ್ರಾಮದಲ್ಲಿ ೧ ನೇ ತರಗತಿಯಿಂದ ೫ ತರಗತಿವರೆಗೆ ಎಲ್.ಕೆ.ಮೆಮೋರಿಯಲ್ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾಬ್ಯಾಸ ಮಾಡಿ, ನಂತರ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಮೂಲಕ ಮೆಳ್ಳಿಗೇರಿ ಮೊರಾರ್ಜಿ ದೇಸಾಯಿ ಶಾಲೆಗೆ ಪ್ರವೇಶ ಪಡೆದು ೬ ರಿಂದ ೧೦ನೇ ತರಗತಿವರೆಗೆ ವಿದ್ಯಾಬ್ಯಾಸ ಮಾಡಿದ್ದಾರೆ.

ಪ್ರಾರಂಭದಿಂದಲೂ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ಅಂಕಿತಾ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ೬೨೫ಕ್ಕೆ ೬೨೫ ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆಯುವ ಮೂಲಕ ಬಾಗಲಕೋಟೆಯ ಕೀರ್ತಿ ಹೆಚ್ಚಿಸಿದ್ದಾರೆ.

ರಾಜ್ಯಕ್ಕೆ ಟಾಪರ್ ಸ್ಥಾನ ಪಡೆದ ಮಾತನಾಡಿದ ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಅವರು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ೬೨೫ಕ್ಕೆ ೬೨೫ ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆಯುವ ಮೂಲಕ ಜಿಲ್ಲೆಯ ಪ್ರತಿಷ್ಠೆಯನ್ನು ಹೆಚ್ಚಿಸಿದ್ದು, ಅವಳ ಈ ಸಾಧನೆಗೆ ಜಿಲ್ಲಾಡಳಿತ ಎಲ್ಲರ ಪರವಾಗಿ ಹುತ್ಪೂರಕ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು. ಕುಮಾರಿ ಅಂಕಿತಾ ಎಲ್ಲ ಮಕ್ಕಳಿಗೆ ಮಾದರಿಯಾಗಿದ್ದು, ಇವಳ ಸ್ಪೂರ್ತಿ ೮ನೇ ಹಾಗೂ ೯ನೇ ತರಗತಿ ಈ ವರ್ಷ ಎಸ್.ಎಸ್.ಎಲ್.ಸಿ ಬರುವ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದೆ ಎಂದರು.

ವಿದ್ಯಾರ್ಥಿಯ ಮುಂದಿನ ಭವಿಷ್ಯ ಹಾಗೂ ಉತ್ತಮ ಶಿಕ್ಷಣಕ್ಕಾಗಿ ಜಿಲ್ಲಾಡಳಿತ ಎಲ್ಲ ರೀತಿಯ ಸಹಕಾರ ನೀಡಲಾಗುತ್ತಿದೆ. ಅಳವ ಮುಂದಿನ ವಿದ್ಯಾಬ್ಯಾಸ ಕೂಡಾ ಇದೇ ರೀತಿ ಅಗ್ರಮಾನ್ಯವಾಗಿರಲಿ. ಅವಳ ಕನಸು ಕನಸು ನನಸು ಮಾಡಲು ಪ್ರಯತ್ನ ಇದೇ ರೀತಿ ಸಾಗಲಿ. ಇನ್ನುಳಿದ ವಿದ್ಯಾರ್ಥಿಗಳು ಕೂಡಾ ಅವಳನ್ನು ಸ್ಪೂರ್ಥಿಯಾಗಿ ಪಡೆದು ಸಾಧನೆ ಮಾಡಿ ಉನ್ನತ ಮಟ್ಟದ ಸ್ಥಾನ ಪಡೆಯಲು ಆಶಿಸಿದರು. ಜಿಲ್ಲೆಗೆ ಉತ್ತಮ ಫಲಿತಾಂಶ ತಂದುಕೊಡುವಲ್ಲಿ ಶ್ರಮಿಸಿದ ಅಧಿಕಾರಿ ಹಾಗೂ ಶಿಕ್ಷಕವೃಂದಕ್ಕೆ ಅಭಿನಂಧಿಸಿದರಲ್ಲದೇ ಅನುತ್ತೀರ್ಣಗೊಂಡ ವಿದ್ಯಾರ್ಥಿಗಳು ದೃತಿಗೆಡದೇ ಬರುವ ಪರೀಕ್ಷೆ-೨ರಲ್ಲಿ ಉತ್ತಮ ಸಾಧನೆ ಮಾಡಲು ತಿಳಿಸಿದರು.

*ಸಾರ್ಥಕತೆ ಮೆರೆದ ಜಿಲ್ಲಾಧಿಕಾರಿ ಪತ್ರ*

ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳು ಹೆಚ್ಚಿನ ಸಾಧನೆ ಮಾಡುವಂತೆ ಮಾಡುವ ನಿಟ್ಟಿನಲ್ಲಿ ಪ್ರತಿ ತಿಂಗಳ ಸ್ಪೂರ್ತಿದಾಯಕ ಪತ್ರ ಬರೆಯುವ ಮೂಲಕ ವಿದ್ಯಾರ್ಥಿಗಳಲ್ಲಿ ಹುರುಪು ತುಂಬುವ ಕೆಲಸ ಮಾಡಿದ ಹಿನ್ನಲೆಯಲ್ಲಿ ಜಿಲ್ಲೆಯ ವಿದ್ಯಾರ್ಥಿಯೊಬ್ಬಳು ರಾಜ್ಯಕ್ಕೆ ಟಾಪರ್ ಆಗಿ ಹೊರಹೊಮ್ಮುವಂತೆ ಮಾಡಿದ್ದಾರೆ. ಆ ಮೂಲಕ ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಪ್ರೇರಣಾದಾಯಕ ಪತ್ರದ ಸಾರ್ಥಕತೆ ಮೆರೆದಿದ್ದಾರೆ.
ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಜಿಲ್ಲೆಯ ಶಾಲಾ ಮಕ್ಕಳಿಗೆ ವಿದ್ಯಾಬ್ಯಾಸ ಕುರಿತಂತೆ ಅಬ್ಯಾಸ ಮಾಡುವ ಹಾಗೂ ಪರೀಕ್ಷೆ ಎದುರಿಸುವ, ಬಾಲ್ಯ ವಿವಾಹದಿಂದ ಮಕ್ಕಳ ಮೇಲೆ ಉಂಟಾಗುವ ಪರಿಣಾಮ ಸೇರಿದಂತೆ ಇನ್ನು ಅನೇಕ ಉಪಯುಕ್ತ ಮಾಹಿತಿಯನ್ನು ಮಕ್ಕಳಿಗೆ ಮನದಟ್ಟುವಂತೆ ಭಾವನಾತ್ಮಕವುಳ್ಳ ಪತ್ರವನ್ನು ಪ್ರತಿ ತಿಂಗಳು ಬರೆಯುತ್ತಿದ್ದರು. ಇಲ್ಲಿಯವರೆಗೆ ಒಟ್ಟು ೧೦ ಪತ್ರವನ್ನು ಬರೆದಿದ್ದಾರೆ. ಇದಕ್ಕೆ ಮಕ್ಕಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಇದರ ಪರಿಣಾಮ ಜಿಲ್ಲೆಯ ಅಂಕಿತಾ ಕೊಣ್ಣೂರು ರಾಜ್ಯಕ್ಕೆ ಟಾಪರ್ ಆಗಿ ಹೊರಹೊಮ್ಮಲು ಸಾಧ್ಯವಾಯಿತು.

Nimma Suddi
";