ಬಾಗಲಕೋಟೆ
ಈ ಬಾಗದ ಜನರಿಗಾಗಿ ಶ್ರೀಶೈಲ ಮಾದರಿಯಲ್ಲಿ ಅಯೋಧ್ಯೆಯಲ್ಲಿ ಬಿ.ವ್ಹಿ.ವ್ಹಿ. ಸಂಘದಿಂದ ಅನ್ನಛತ್ರ ನಿರ್ಮಾಣ ಮಾಡಲಾಗುವುದು ಎಂದು ಮಾಜಿ ಶಾಸಕ ಡಾ,ವೀರಣ್ಣಚರಂತಿಮಠ ಹೇಳಿದರು.
ಅವರು ನಗರದ ರೇಲ್ವೆ ನಿಲ್ಧಾಣದಲ್ಲಿ ಬಿಜೆಪಿ ಜಿಲ್ಲಾ ಘಟಕದಿಂದ ಹಮ್ಮಿಕೋಂಡ ಅಯೋಧ್ಯೆಯ ಶ್ರೀರಾಮ ಮಂದಿರ ದರ್ಶನಕ್ಕೆ ಬಾಗಲಕೋಟೆ ಜಿಲ್ಲೆಯಿಂದ ತೆರಳುವ ಮೊದಲ ರೈಲು ಹಾಗೂ ಜಿಲ್ಲೆಯಿಂದ ೩೮೮ ಜನ ಪ್ರಯಾಣ ಬೆಳಸುತ್ತಿರುವುವರಿಗೆ ಶುಭಹಾರೈಸಿ ಮಾತನಾಡಿದರು.
ನಾನೂ ಅಯೋಧ್ಯೆಯ ಪ್ರಭು ಶ್ರೀರಾಮನ ದರ್ಶನವನ್ನು ನಾನು ಪಡೆದಿದ್ದೆನೆ, ದೇಶದ ಸಾಂಸ್ಕೃತಿಕ ನಗರಿಗೆ ಮಾದರಿಯೆಂಬಂತೆ ಅಯೋಧ್ಯೆ ನಿರ್ಮಾಣಗೊಳ್ಳುತ್ತಿದೆ, ಅಯೋಧ್ಯೆಯನ್ನು ನೋಡುವುದೆ ಒಂದು ಭಾಗ್ಯ, ಈ ಬಾಗದ ಜನರ ಅನಕೂಲಕ್ಕಾಗಿ ಅಯೋಧ್ಯೆಯಲ್ಲಿ ಒಂದು ಅನ್ನಛತ್ರ ನಿರ್ಮಾಣ ಕನಸು ಇತ್ತು, ಮುಂದಿನ ದಿನಗಳಲ್ಲಿ ಶ್ರೀಶೈಲ ಮಾದರಿಯಂತೆ ಅಯೋಧ್ಯೆಯಲ್ಲಿ ಬಿ.ವ್ಹಿ.ವಿ, ಸಂಘದಿಂದ ಅನ್ನಛತ್ರ ನಿರ್ಮಾಣ ಮಾಡುತ್ತೆವೆ, ಬಾಗಲಕೋಟೆ ಜನರಿಗೆ ಮಾತ್ರವಲ್ಲದೆ ರಾಜ್ಯದ ಜನರಿಗೂ ಅನುಕೂಲವಾಗಲಿದೆ ಎಂದರು.
ಸಂಸದ ಪಿ.ಸಿ.ಗದ್ದಿಗೌಡರ ಮಾತನಾಡಿ ಪ್ರಭು ಶ್ರೀರಾಮನ ದರ್ಶನ ಪಡೆಯುವುದೆ ಒಂದು ಭಾಗ್ಯವಾಗಿದೆ, ಬಿಜೆಪಿಯ ಪ್ರಣಾಳಿಕೆಯಂತೆ ಅಸಂಖ್ಯಾತ ಬಿಜೆಪಿ ಕಾರ್ಯಕರ್ತರ ತ್ಯಾಗದೊಂದಿಗೆ ಲಾಲ್ ಕೃಷ್ಣ ಅಡ್ವಾನಿಜಿ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ನೆತೃತ್ವದಲ್ಲಿ ಅಯೋಧ್ಯಯಲ್ಲಿ ಭವ್ಯ ಶ್ರೀರಾಮ ಮಂದಿರ ಲೋಕಾರ್ಪಣೆಗೊಂಡಿದೆ ಎಂದರು.
ಮಾಜಿ ಸಚಿವ ಮುರಗೇಶ ನಿರಾಣಿ, ತೇರದಾಳ ಶಾಸಕ ಸಿದ್ದು ಸವದಿ ಹಾಗೂ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ ಮಾತನಾಡಿದರು. ರಾಜ್ಯ ಸಂಚಾಲಕ ಜಗದೀಶ ಹಿರೇಮನಿ ಅಯೋದ್ಯಕ್ಕೆ ತೆರಳುವ ಕಾರ್ಯಕರ್ತರಿಗೆ ಯಾತ್ರೆಯ ಸೂಚನೆಗಳನ್ನು ತಿಳಿಸಿದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ತ ಸದಸ್ಯ ಎಚ್,ಆರ್.ನಿರಾಣಿ, ಪಿ.ಎಚ್.ಪೂಜಾರ, ಬಸವರಾಜ ಯಂಕಂಚಿ, ಶಶಿ ವಿಶ್ವಬ್ರಾಹ್ಮಣ ಸೇರಿದಂತೆ ಅನೇಕರು ಇದ್ದರು.
ನಂತರ ಅಯೋಧ್ಯಕ್ಕೆ ತೆರಳುವ ರೈಲಿಗೆ ಹಸಿರು ನಿಶಾಣೆತೋರಿಸುವ ಮೂಲಕ ಶುಭ ಹಾರೈಸಲಾಯಿತು.