ಚೆನ್ನೈ: ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ ಅವರು ಇತ್ತೀಚೆಗೆ ಎಐಎಡಿಎಂಕೆ ಮುಖ್ಯಸ್ಥೆ ಮತ್ತು ಮಾಜಿ ಮುಖ್ಯಮಂತ್ರಿ ದಿವಂಗತ ಜೆ. ಜಯಲಲಿತಾ ಅವರ ಬಗ್ಗೆ ಮಾತನಾಡಿದ್ದಾರೆ. “ಜಯಲಲಿತಾ ಅವರು ತಮಿಳುನಾಡಿನ ಎಲ್ಲರಿಗಿಂತಲೂ ಶ್ರೇಷ್ಠ ಹಿಂದುತ್ವವಾದಿ ನಾಯಕಿ” ಎಂದು ತಿಳಿಸಿದರು.
ಅಣ್ಣಾಮಲೈ ಅವರು ಪಿಟಿಐಗೆ ನೀಡಿದ ಇತ್ತೀಚಿನ ಸಂದರ್ಶನವೊಂದರಲ್ಲಿ ತಮಿಳುನಾಡಿನಲ್ಲಿ ಎಐಎಡಿಎಂಕೆ ಜಯಲಲಿತಾ ನಿಧನ ಹೊಂದಿದ ನಂತರ ಹಿಂದುತ್ವ ಸಿದ್ಧಾಂತ ಮರೆಯಾಗುವ ಶೂನ್ಯವನ್ನು ತುಂಬಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಹೇಳಿದ್ದರು.
“ಜಯಲಲಿತಾ ಬದುಕಿರುವವರೆಗೂ ಅವರು ತಮಿಳುನಾಡಿನ ಎಲ್ಲರಿಗಿಂತಲೂ ಶ್ರೇಷ್ಠ ಹಿಂದುತ್ವವಾದಿ ನಾಯಕಿಯಾಗಿದ್ದರು. 2014ರ ಮೊದಲು ನೀವು ಬಿಜೆಪಿ ಮತ್ತು ಜಯಲಲಿತಾ ಎಂಬ 2 ಆಯ್ಕೆಯನ್ನು ಹೊಂದಿದ್ದಾಗ ಹಿಂದೂ ಮತದಾರನ ಆಯ್ಕೆ ಜಯಲಲಿತಾ ಆಗಿರುವುದು ಸಹಜ. ಜಯಲಲಿತಾ ಅವರು ತಮ್ಮ ಹಿಂದೂ ಗುರುತನ್ನು ಬಹಿರಂಗವಾಗಿ ಪ್ರದರ್ಶಿಸಿದರು” ಎಂದು ಅಣ್ಣಾಮಲೈ ವಿವರಿಸಿದರು.