ವಿಜಯಪುರ: ಧ್ವಜಾರೋಹಣ ವೇಳೆ ವ್ಯಕ್ತಿಯೊಬ್ಬ ಗಾಳಿಯಲ್ಲಿ ಗುಂಡು ಹಾರಿಸಿದ ಘಟನೆ ಇಂಡಿ ತಾಲೂಕಿನ ಹಿರೇರೂಗಿ ಗ್ರಾಮದಲ್ಲಿ ನಡೆದಿದೆ.
ಮಲ್ಲು ಗಿನ್ನಿ ಗುಂಡು ಹಾರಿಸಿದ ವ್ಯಕ್ತಿ ಎಂದು ತಿಳಿದು ಬಂದಿದೆ.
ಧ್ವಜಾರೋಹಣ ವೇಳೆ ಗ್ರಾಪಂ ಎದುರು ಗಾಳಿಯಲ್ಲಿ ಮಲ್ಲು ಗುಂಡು ಹಾರಿಸಿದ್ದಾನೆ. ಈ ವೇಳೆ ಒಂದು ಗುಂಡು ಅಧ್ಯಕ್ಷೆ ಸೋಮವ್ವನ ಕಾಲಿಗೆ ಬಡಿದಿದ್ದರಿಂದ ಅವರು ಗಾಯಗೊಂಡಿದ್ದಾರೆ.
ಇದು ಮಿಸ್ ಫೈರ್ ಆಗಿದ್ದರಿಂದ ಗ್ರಾಪಂ ಅಧ್ಯಕ್ಷೆಗೆ ತಾಗಿದೆ ಎನ್ನಲಾಗುತ್ತಿದೆ.
ಗುಂಡು ತಾಗಿದೆ : ಧ್ವಜಾರೋಹಣ ಮಾಡುವಾಗ ಆಕಸ್ಮಿಕ ಕಾಲಿಗೆ ಗುಂಡು ಬಡಿದಿದೆ ಎಂದು ಗ್ರಾಪಂ ಅಧ್ಯಕ್ಷೆ ಸೋಮವ್ವ ಹೊಸಮನಿ ಹೇಳಿದರು.
ಆಕಸ್ಮಿಕವಾಗಿ ಕಾಲಿಗೆ ಗುಂಡು ತಗುಲಿದೆ. ಯಾವುದೇ ದ್ವೇಷದಿಂದ ಆಗಿಲ್ಲ. ಗುಂಡು ಹಾರಿಸಿದ ವ್ಯಕ್ತಿ ನನಗೆ ಮಗನಿದ್ದಂತೆ ಎಂದಿದ್ದಾರೆ. ಆದರೆ ಗಾಯಗೊಂಡ ಅಧ್ಯಕ್ಷೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ ಎಂದು ಮಾಹಿತಿ ಬೆಳಕಿಗೆ ಬಂದಿದೆ.