ಬಾಗಲಕೋಟೆ
ಯುವಕ ಮಿತ್ರರು ಹೆಚ್ಚಿನ ಪ್ರಮಾಣದಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಮುಂದಾಗುವಂತೆ ಜಿಲ್ಲಾಧಿಕಾರಿಗಳು ಆಗಿರುವ ಜಿಲ್ಲಾ ಚುನಾವಣಾಧಿಕಾರಿ ಕೆ.ಎಂ.ಜಾನಕಿ ಮನವಿ ಪತ್ರವೊಂದನ್ನು ಬುಧವಾರ ಹೊರಡಿಸಿದ್ದಾರೆ.
ಹೇಗಿದ್ದೀರಾ? ಬರುವ ಲೋಕಸಭಾ ಚುನಾವಣೆ ಬಗ್ಗೆ ಮಾಹಿತಿ ಇದೆ ಎಂದು ಭಾವಿಸಿದ್ದು, ಜಿಲ್ಲೆಯ ಮತದಾರರ ಅಂಕಿ ಅಂಶಗಳನ್ನು ವಿಮರ್ಶಿಸಿದಾಗ ನಮ್ಮ ಜಿಲ್ಲೆಯಲ್ಲಿನ ಮತದಾರರ ಪಟ್ಟಿಯಲ್ಲಿ ಯುವ ಮತದಾರರ ಸಂಖ್ಯೆ ರಾಜ್ಯಮಟ್ಟದ ಸರಾಸರಿಗಿಂತ ಕಡಿಮೆ ಇದ್ದು, ಜಿಲ್ಲೆಯ ಸಾಮಾನ್ಯ ಜನಸಂಖ್ಯೆ ಅನುಪಾತ ಮತ್ತು ಜನಗಣತಿಯ ಅನುಪಾತದ ಅಂಕಿ-ಸಂಖ್ಯೆಗಿಂತ ಬಹಳ ವ್ಯಾಸವಿದೆ.
ಅದರಲ್ಲೂ ಮಹಿಲಾ ಮತದಾರರ ಸಂಖ್ಯೆಯ ವ್ಯತ್ಯಾಸ ತುಂಬಾ ಹೆಚ್ಚಾಗಿದ್ದು, ಇದನ್ನು ಸರಿಪಡಿಸಲು ನಾವೆಲ್ಲರೂ ಪ್ರಾಮಾಣಿಕ ಪ್ರಯತ್ನವನ್ನು ಮಾಡಬೇಕಿದೆ. ಉತ್ತಮ ಪ್ರಜಾಪ್ರಭುತ್ವ ನಿರ್ಮಾಣಕ್ಕಾಗಿ ನಿಮ್ಮೆಲ್ಲರ ಸಹಕಾರ ಅತ್ಯಂತ ಅವಶ್ಯವಿದೆ ಎಂದು ಪತ್ರದ ಮೂಲಕ ಯುವ ಮಿತ್ರರಲ್ಲಿ ಮನವಿ ಮಾಡಿಕೊಂಡಿದ್ದಾರೆ.
18 ವರ್ಷ ತುಂಬಿದ ಯುವಕರು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳುವುದು ಆದ್ಯ ಕರ್ತವ್ಯವಾಗಿದೆ. ಮತದಾರರ ಪಟ್ಟಿಯಲ್ಲಿ ಈಗಾಗಲೇ ನೀವು ನೊಂದಾಯಿಸಿದಲ್ಲಿ ನಿಮ್ಮ ಹೆಸರುನ್ನು ಪರಿಶೀಲಿಸಿಕೊಳ್ಳಿ ಇಲ್ಲವಾದಲ್ಲಿ ಇಂದೇ ನಿಮ್ಮ ಹೆಸರು ನೋಂದಾಯಿಸಲು ಮುಂದಾಗಲು ತಿಳಿಸಿದ್ದಾರೆ. ಅರ್ಹ ಪ್ರತಿಯೊಬ್ಬ ಯುವಕರು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕೆಂಬ ಭಾರತ ಚುನಾವಣಾ ಆಯೋಗದ ಆಶಯವಾಗಿದೆ. ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡುವುದು ಅತ್ಯಂತ ಸುಲಭ ಮತ್ತು ಸರಳವಾಗಿದೆ.
ಇದಕ್ಕಾಗಿ ನಿಮ್ಮ ಹತ್ತಿರದ ಮತಗಟ್ಟೆ ಮಟ್ಟದ ಅಧಿಕಾರಿಯನ್ನು ಅಥವಾ ತಾಲೂಕಾ ಕಚೇರಿಯ ಚುನಾವಣಾ ಶಾಖೆಯಲ್ಲಿ ಸಂಪರ್ಕಿಸಿ ನಮೂನೆ-6ನ್ನು ಪಡೆದು ಮತದಾರರ ಭಾವಚಿತ್ರ, ಆಧಾರ ಕಾರ್ಡ, ಪೋಷಕರ ಮತದಾರರ ಗುರುತಿನ ಚೀಟಿ, ಶಾಲಾ ದೃಢೀಕರಣ ದಾಖಲೆಗಳನ್ನು ನೀಡಿದರೆ ಸಾಕು.
ಆನ್‍ಲೈನ್ ಮೂಲಕವು ಅರ್ಜಿ
————————–
ಆನ್‍ಲೈನ್ ಮೂಲಕವು ಓಟರ್ ಹೆಲ್ಪಲೈನ್ ಆ್ಯಪ್‍ನ್ನು ತಮ್ಮ ಮೊಬೈಲ್ ಮೂಲಕ ಡೌನ್‍ಲೋಡ್ ಮಾಡಿಕೊಂಡು ಅರ್ಜಿ ಸಲ್ಲಿಸಬಹುದಾಗಿದೆ. ಪ್ಲೇಸ್ಟೋರ್‍ನಿಂದ ಓಟರ್ ಹೆಲ್ಪಲೈನ್ ಆಪ್ ಡೌನಲೋಡ ಮಾಡಿಕೊಂಡು ನ್ಯೂ ಯುಜರ ಮೇಲೆ ಕ್ಲಿಕ್ ಮಾಡಬೇಕು. ಮೊಬೈಲ್ ನಂಬರ ದಾಖಲಿಸಿ ಓಟಿಪಿ ಮೇಲೆ ಕ್ಲಿಕ್ ಮಾಡಿ, ಪಸ್ಟ ನೇಮ್, ಲಾಸ್ಟ ನೇಮ್, ನ್ಯೂ ಪಾಸವರ್ಡ ಹಾಗೂ ಸ್ವೀಕೃತವಾಗಿರುವ ಓಟಿಪಿ ನಮೂದಿಸಿ ಸುಬ್‍ಮಿಟ್ ಬಟಲ್ ಮೇಲೆ ಕ್ಲಿಕ್ ಮಾಡಬೇಕು. ನಂತರ ಓಟರ್ ನ್ಯೂ ಓಟರ್ ರೆಸಿಸ್ಟ್ರೇಷನ್ (ನಮೂನೆ-6) ಆಯ್ಕೆ ಮಾಡಿಕೊಂಡು ಅಗತ್ಯ ಮಾಹಿತಿ ಹಾಗೂ ದಾಖಲಾತಿಗಳನ್ನು ಲಗತ್ತಿಸುವ ಮೂಲಕ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಅರ್ಜಿ ಸಲ್ಲಿಸಬಹುದಾಗಿದೆ.
ಓಟರ್ ಸರ್ಮಿಸ್ *ಪೋರ್ಟಲ್‍ನಲ್ಲಿ ಅರ್ಜಿ ಸಲ್ಲಿಕೆ*
—————————————
ಗೂಗಲ್ ಕ್ರೋಮ್‍ನಲ್ಲಿ http://voters.eci.gov.in/ಅಂತಾ ಟೈಪ್ ಮಾಡಿ ಸೈನ್ ಅಪ್ ಮೇಲೆ ಕ್ಲಿಕ್ ಮಾಡಬೇಕು. ಇಂಡಿಯನ್ ರೆಸಿಡೆಂಟ್ ಎಲೆಕ್ಟರ್ ಅಂತಾ ಸೆಲೆಕ್ಟ ಮಾಡಿಕೊಂಡು ಮೊಬೈಲ್ ನಂಬರ ದಾಖಲಿಸಿ, ಕ್ಯಾಪ್ಚ ನಮೂದಿಸಿ ಕಂಟಿನ್ಯೂ ಮೇಲೆ ಕ್ಲಿಕ್ ಮಾಡಬೇಕು. ನಂತರ ಪಸ್ಟ ನೆಮ್, ಲಾಸ್ಟ ನೆಮ್, ನ್ಯೂ ಪಾಸ್‍ವರ್ಡ, ಕನ್‍ಪಾರ್ಮ ಪಾಸ್‍ವರ್ಡ ನಮೂದಿಸಿ ರಿಕ್ವೇಸ್ಟ ಓಟಿಪಿ ಮೇಲೆ ಕ್ಲಿಕ್ ಮಾಡಿ ಸ್ವೀಕೃತವಾಗಿರುವ ಓಟಿಪಿ ನಮೂದಿಸಿ ಸಬ್‍ಮಿಟ್ ಮೇಲೆ ಕ್ಲಿಕ್ ಮಾಡಬೇಕು. ಅದರಲ್ಲಿ ನ್ಯೂ ಓಟರ್ ರೆಸಿಸ್ಟ್ರೇಷನ್ (ನಮೂನೆ-6) ಆಯ್ಕೆ ಮಾಡಿಕೊಂಡು ಅಗತ್ಯ ದಾಖಲೆಗಳನ್ನು ಲಗತ್ತಿಸಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.
*ಡಿಸೆಂಬರ 1 : ಮಹಿಳಾ ಮತದಾರರ ನೊಂದಣಿಗೆ ವಿಶೇಷ ಅಭಿಯಾನ*
——————————————————–
ಮಹಿಳಾ ಮತದಾರರನ್ನು ಮತದಾರರ ಪಟ್ಟಿಗೆ ಸೇರ್ಪಡೆ ಮಾಡಿಕೊಳ್ಳಲು ಡಿಸೆಂಬರ 1 ರಂದು ಜಿಲ್ಲೆಯ ಎಲ್ಲ ಅಂಗನವಾಡಿ ಕೇಂದ್ರಗಳಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. 18 ವರ್ಷ ಮೇಲ್ಪಟ್ಟ ಎಲ್ಲ ಮಹಿಳೆಯರು ಅಂದು ಅಗತ್ಯ ದಾಖಲೆಗಳೊಂದಿಗೆ ಅಂಗನವಾಡಿ ಕೇಂದ್ರಗಳಿಗೆ ತೆರಳಿ ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ನೋಂದಾಯಿಸಿಕೊಳ್ಳಬಹುದಾಗಿದೆ. ಮಹಿಳಾ ಮತದಾರರ ಅನುಕೂಲವಾಗುವ ನಿಟ್ಟಿನಲ್ಲಿ ಈ ಅಭಿಯಾನ ಹಮ್ಮಿಕೊಂಡಿದ್ದು, ಇದರ ಸದುಪಯೋಗ ಮಹಿಳೆಯರು ಪಡೆದುಕೊಳ್ಳಬೇಕು.
ಕೆ.ಎಂ.ಜಾನಕಿ, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ