ನಿಮ್ಮ ಸುದ್ದಿ ಬಾಗಲಕೋಟೆ
ಐಸಿಡಿಎಸ್ ಯೋಜನೆಯನ್ನು ಖಾಯಂಗೊಳಿಸುವುದು, ಅಂಗನವಾಡಿ ಕೇಂದ್ರಗಳಲ್ಲೇ ಎಲ್‌ಕೆಜಿ, ಯುಕೆಜಿ ಆರಂಭಿಸಬೇಕು ಎಂದು ಒತ್ತಾಯಿಸಿ ಅಂಗನವಾಡಿ ನೌಕರರು ಪಪಂ ಕಚೇರಿಯಲ್ಲಿ ಮನವಿ ಸಲ್ಲಿಸಿದರು.
ಸಿಐಟಿಯು ಸಂಘಟನೆಯ ವತಿಯಿಂದ ಮನವಿ ಸಲ್ಲಿಸಿದ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು, ಬೆಲೆ ಏರಿಕೆ ಆಧಾರದಲ್ಲಿ ನೌಕರರಿಗೆ ೨೪ ಸಾವಿರ ಕನಿಷ್ಠ ವೇತನ ಜಾರಿಗೊಳಿಸಬೇಕು. ಕಾರ್ಮಿಕ ಸಂಹಿತೆಗಳನ್ನು ರದ್ದುಗೊಳಿಸಬೇಕು. ಎಲ್ಲ ಅನೌಪಚಾರಿಕ ವಲಯದ ಕಾರ್ಮಿಕರಿಗೆ ಸಾರ್ವತ್ರಿಕ ಸಾಮಾಜಿಕ ಭದ್ರತೆ ನೀಡಬೇಕು ಎಂದು ಒತ್ತಾಯಿಸಿದರು.
ಅಂಗನವಾಡಿ ಕಾರ್ಯಕರ್ತರಾದ ಜಯಶ್ರೀ ದೇಶಪಾಂಡೆ, ಪಿ.ಎಂ.ಕಳಸಾಮಠ, ಎನ್.ಎಸ್.ನಾಗರಾಳ, ಎಸ್.ಆರ್.ಅಂಗಡಿ, ಡಿ.ಎಂ.ಬ್ಯಾಳಿ, ಬಿ.ವೈ.ಬೇವಿನಮಟ್ಟಿ, ಎನ್.ಎಸ್.ಮಾದರ, ಎಸ್.ಬಿ.ಐಹೊಳ್ಳಿ, ಕೆ.ಎನ್.ತಿಮ್ಮಾಪೂರ, ಎಂ.ಎಸ್.ರಾಜೂರ, ಎಸ್.ಎ.ತಾಳಿಕೋಟಿ, ಎಂ.ಪಿ.ಜAಗಿ, ಸಹಾಯಕಿಯರು ನಿಂಗಮ್ಮ ಖೇಡದ, ಶ್ರೀದೇವಿ ಗಾಳಿ, ಹೇಮಕ್ಕ, ಶೋಭಾ, ಪಾರ್ವತಿ ಸಣಕಲ್, ಧರ್ಮಶ್ರೀ ಧಾರವಾಡ ಇತರರು ಇದ್ದರು.