ಬಾಗಲಕೋಟೆ
ರಾಜ್ಯ ಮಹಿಳಾ ಅಭವೃದ್ಧಿ ನಿಗಮದಿಂದ ಮಂಜೂರಾದ ಉದ್ಯೋಗಿನಿ ಯೋಜನೆಯಡಿ ಸ್ವಯಂ ಉದ್ಯೋಗ ಕೈಗೊಳ್ಳಲು ಸಾಲ ಸೌಲಭ್ಯ ಒದಗಿಸಲು ಅರ್ಹ ಮಹಿಳೆಯರಿಗೆ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸುವವರು 18 ರಿಂದ 50 ವರ್ಷದೊಳಗಿರಬೇಕು. ವಾರ್ಷಿಕ ಆದಾಯ ಎಸ್‍ಸಿ, ಎಸ್‍ಟಿ ಕುಟುಂಬಕ್ಕೆ 2 ಲಕ್ಷ, ವಿಶೇಷ ವರ್ಗ ಮತ್ತು ಸಾಮಾನ್ಯ ವರ್ಗದ ಮಹಿಳೆಯರಿಗೆ 1.50 ಲಕ್ಷ ಮೀರಬಾರದು. ಜಾತಿ, ಆದಾಯ, ಪಡಿತರ ಚೀಟಿ ಅಥವಾ ಮತದಾರ ಗುರುತಿನ ಚೀಟಿ, ಆಧಾರ್ ಕಾರ್ಡ್, ವಿಧವೆಯರು ಪತಿಯ ಮರಣ ದೃಢೀಕರಣ ಪತ್ರ, ವಿಕಲ ಚೇತನರಾಗಿದ್ದರೆ ವ್ಯದ್ಯಕೀಯ ಪ್ರಮಾಣ ಪತ್ರ, ಎಸ್.ಸಿ ಮತ್ತು ಎಸ್.ಟಿ ಮಹಿಳೆಯರಿಗೆ ಸಾಲದ ಮೊತ್ತಕ್ಕೆ ಶೇ 50 ರಷ್ಟು ಸಹಾಯಧನ ನೀಡಲಾಗುವುದು.
ಇತರೆ ಮಹಿಳೆಯರಿಗೆ ಸಾಲದ ಮೊತ್ತಕ್ಕೆ 30% ಸಹಾಯಧನ ನಿಗದಿ ಮಾಡಲಾಗಿದೆ. ಸಾಲದ ಮಿತಿಯನ್ನು 1 ಲಕ್ಷ ದಿಂದ ಮೂರು ಲಕ್ಷಗಳವರೆಗೆ ನಿಗದಿಪಡಿಸಲಾಗಿದೆ. ಅರ್ಜಿಗಳನ್ನು ಸಂಬಂಧಪಟ್ಟ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಚೇರಿಯಿಂದ ಪಡೆದು ಆಗಸ್ಟ್ 14 ರೊಳಗಾಗಿ ಸಲ್ಲಿಸುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.