ಲಿಂಗತ್ವ ಅಲ್ಪಸಂಖ್ಯಾತರು : ಪ್ರೋತ್ಸಾಹಧನಕ್ಕಾಗಿ ಅರ್ಜಿ
ಬಾಗಲಕೋಟೆ :
ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದಿಂದ ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಯೋಜನೆ ಅಡಿ ಪ್ರಸಕ್ತ ಸಾಲಿನಲ್ಲಿ ಆದಾಯ ಉತ್ಪನ್ನಕರ ಚಟುವಟಿಕೆಯಲ್ಲಿ ತೊಡಗಿಕೊಂಡು ಆರ್ಥಿಕ ಸ್ವಾವಲಂಬನೆ ಮೂಲಕ ಸಮಾಜದ ಮುಖ್ಯವಾಹಿನಿಗೆ ಸೇರ್ಪಡೆಗೊಳ್ಳಲು ಅನುಕೂಲವಾಗುವಂತೆ ಪ್ರೋತ್ಸಾಹಧನಕ್ಕಾಗಿ ನೀಡುವ ಸಲುವಾಗಿ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿದಾರರು ರಾಜ್ಯದ ಕಾಯಂ ನಿವಾಸಿಯಾಗಿದ್ದು, 18 ರಿಂದ 60 ವರ್ಷದೊಳಗಿರಬೇಕು, ಜಿಲ್ಲೆಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿಗಾಗಿ ಹಾಗೂ ಸರಕಾರದಿಂದ ಅಧಿಕೃತವಾಗಿ ಗುರುತಿಸಲಾಗಿರುವ ಸಂಘದಿಂದ ಅಧಿಕೃತ ದೃಢೀಕರಣ ಪತ್ರಕ್ಕೆ ನೋಟರಿ ಕಡ್ಡಾಯವಾಗಿ ಮಾಡಿಸಿ ಸಲ್ಲಿಸಬೇಕು, ಪೆÇ್ರೀತ್ಸಾಹ ಧನಕ್ಕಾಗಿ ನೀಡುವ ಅರ್ಜಿಯಲ್ಲಿ ನಿವಾಸದ ವಿಳಾಸ, ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡ್, ಪಡಿತರ ಚೀಟಿಯನ್ನು ಕಡ್ಡಾಯವಾಗಿ ಹೊಂದಿರಬೇಕು. ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಕಡ್ಡಾಯವಾಗಿ ಆಧಾರ್ ಸೀಡಿಂಗ್ ಆಗಿರುವ ಖಾತೆಯ ದಾಖಲಾತಿ ಮಾಹಿತಿಯನ್ನು ಸಲ್ಲಿಸಬೇಕು. ಆಯ್ಕೆ ಮಾಡಿಕೊಂಡ ಯೋಜನಾ ವರದಿ ಸಲ್ಲಿಸಬೇಕು.
ಅರ್ಜಿದಾರರು ಯಾವುದೇ ಆರ್ಥಿಕ ಸಂಸ್ಥೆ ಅಥವಾ ಬ್ಯಾಂಕುಗಳಲ್ಲಿ ಸಾಲಗಾರರಾಗಿ ಇರಬಾರದು (ಎನ್‍ಒಸಿ)ಸಲ್ಲಿಸಬೇಕು. ಸದರಿ ಯೋಜನೆಯಡಿ 30 ಸಾವಿರ ಗಳ ಪೆÇ್ರೀತ್ಸಾಹಧನ ಸೌಲಭ್ಯವನ್ನು ನೀಡಲಾಗುವುದು. ಅರ್ಜಿ ಸಲ್ಲಿಸಲು ಆಗಸ್ಟ್ 14 ಕೊನೆಯ ದಿನವಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.