ಬಾಗಲಕೋಟೆ:
ಜಿಲ್ಲೆಯಲ್ಲಿ ತೋಟಗಾರಿಕೆ ಬೆಳೆ ಬೆಳೆಯುವ ರೈತರಿಗೆ ೨೦೨೩-೨೪ನೇ ಸಾಲಿಗೆ ತೋಟಗಾರಿಕೆ ಇಲಾಖೆಯಿಂದ ನಾನಾ ಯೋಜನೆಗಳ ಸಹಾಯಧನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತ ರೈತರು ಸಂಬAಸಿದ ತಾಲೂಕಿನ ತೋಟಗಾರಿಕೆ ಕಚೇರಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸುವಂತೆ ತೋಟಗಾರಿಕೆ ಉಪನಿರ್ದೇಶಕ ರವೀಂದ್ರ ಹಕಾಟೆ ತಿಳಿಸಿದ್ದಾರೆ.
ಉದ್ಯೋಗ ಖಾತ್ರಿ ಯೋಜನೆ
ತೆಂಗು, ಮಾವು, ದ್ರಾಕ್ಷಿ, ಚಿಕ್ಕು, ಬಾಳೆ, ನುಗ್ಗೆ, ಲಿಂಬೆ, ಪಪ್ಪಾಯಾ, ದಾಳಿಂಬೆ, ಸೀಬೆ, ನೇರಳೆ, ಬಾರೆ, ಗೇರು, ಗುಲಾಬಿ, ಮಲ್ಲಿಗೆ, ಡ್ರ‍್ಯಾಗನ್ ಹಣ್ಣು, ವಿಳ್ಯದೆಲೆ, ಬೆಣ್ಣೆಹಣ್ಣು, ರಾಂಬೂತಾನ್, ಹುಣಸೆ, ಅಂಜೂರು ಮತ್ತು ಸೀತಾಫಲ ಬೆಳೆಗಳ ಪ್ರದೇಶ ವಿಸ್ತರಣೆ ಕಾರ್ಯಕ್ರಮ ಹಾಗೂ ತೆಂಗು, ಮಾವು, ಚಿಕ್ಕು ಮತ್ತು ಗೇರು ಬೆಳೆಗಳ ಪುನಶ್ಚೇತನ ಕಾರ್ಯಕ್ರಮಗಳನ್ನು ಸಣ್ಣ, ಅತಿಸಣ್ಣ ರೈತರು, ಪ.ಜಾತಿ ಮತ್ತು ಪ.ಪಂಗಡ, ಅಲೆಮಾರು ಬುಡಕಟ್ಟುಗಳು, ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳು, ಮಹಿಳಾ ಪ್ರಧಾನ ಕುಟುಂಬಗಳು, ವಿಕಲಚೇತನ ಕುಟುಂಬಗಳು, ಭೂಸುಧಾರಣಾ ಹಾಗೂ ವಸತಿ ಯೋಜನೆಗಳ ಫಲಾನುಭವಿಗಳಿಗೆ ಅನುಷ್ಠಾನಗೊಳಿಸಲಾಗುತ್ತಿದೆ.
ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ
ತೋಟಗಾರಿಕೆ ಬೆಳೆಗಳಾದ ಹಣ್ಣು, ತರಕಾರಿ, ಹೂವು ಮತ್ತು ತೋಟದ ಬೆಳೆಗಳಿಗೆ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಳ್ಳಲು ೫ ಹೆಕ್ಟೇರ್‌ವರೆಗೆ ಸಹಾಯಧನ ನೀಡಲಾಗುತ್ತದೆ. ಗರಿಷ್ಠ ೨ ಹೆಕ್ಟೇರ್‌ವರೆಗೆ ಸಾಮಾನ್ಯ ವರ್ಗದ ರೈತರಿಗೆ ಶೇ.೭೫ ಹಾಗೂ ಪ.ಜಾತಿ ಮತ್ತು ಪ.ಪಂಗಡದ ರೈತರಿಗೆ ಶೇ.೯೦ರಷ್ಟು ಸಹಾಯಧನ ನೀಡಲಾಗುವುದು. ಉಳಿದ ೩ ಹೆಕ್ಟೇರ್‌ಗೆ ಸಾಮಾನ್ಯ, ಪ.ಜಾತಿ ಮತ್ತು ಪ.ಪಂಗಡದ ರೈತರಿಗೆ ಶೇ.೪೫ರಷ್ಟು ಸಹಾಯಧನ ನೀಡಲಾಗುವುದು.
ಮಾಹಿತಿಗೆ ಸಂಬAಸಿದ ತಾಲೂಕು ತೋಟಗಾರಿಕೆ ಕಛೇರಿ ಹಾಗೂ ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರದ ಅಕಾರಿಯನ್ನು ಸಂಪರ್ಕಿಸಬಹುದಾಗಿದೆ.