ಭಾರತೀಯ ವಾಯುಪಡೆಯು ಗ್ರೂಪ್ Y ಏರ್‌ಮೆನ್ ಹುದ್ದೆಗಳ ಭರ್ತಿಗೆ ಅಧಿಸೂಚಿಸಿದ್ದು, ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. ಕೇಂದ್ರ ಸರ್ಕಾರದ ಈ ಹುದ್ದೆಗಳಿಗೆ ನೀವು ಅರ್ಜಿ ಸಲ್ಲಿಸಲು ಅರ್ಹರು. ಈಗ ಅರ್ಜಿ ಸಲ್ಲಿಸಿದವರಿಗೆ ಜುಲೈ 03 ರಿಂದ ಜುಲೈ 12, 2024 ರವರೆಗೆ ನೇಮಕಾತಿ ಪ್ರಕ್ರಿಯೆ ನಡೆಸಲಾಗುತ್ತದೆ.
ಅರ್ಜಿ ಪ್ರಕ್ರಿಯೆಯ ಪ್ರಮುಖ ದಿನಾಂಕಗಳು
ಅರ್ಜಿ ಸ್ವೀಕಾರ ಆರಂಭಿಕ ದಿನಾಂಕ: 22-05-2024
ಅರ್ಜಿ ಸ್ವೀಕರಿಸುವ ಕೊನೆ ದಿನಾಂಕ: 05-06-2024 ರ ರಾತ್ರಿ 23-00 ಗಂಟೆವರೆಗೆ.
ಏರ್‌ಮೆನ್ ಹುದ್ದೆಗೆ ಅರ್ಹತೆಗಳು
ಮೆಡಿಕಲ್ ಅಸಿಸ್ಟಂಟ್ ಟ್ರೇಡ್ ಹುದ್ದೆಗಳಿಗೆ ಅರ್ಜಿ ಹಾಕುವವರು 2004 ರ ಜನವರಿ 2 ರಿಂದ 2008 ರ ಜನವರಿ 02 ರ ನಡುವೆ ಜನಿಸಿರಬೇಕು. ಅವಿವಾಹಿತರಾಗಿರಬೇಕು. ಪಿಯುಸಿ ಅನ್ನು ಕಡ್ಡಾಯ ಫಿಸಿಕ್ಸ್, ಕೆಮಿಸ್ಟ್ರಿ, ಬಯೋಲಜಿ ಮತ್ತು ಇಂಗ್ಲಿಷ್ ನಲ್ಲಿ ಶೇಕಡ.50 ಅಂಕಗಳೊಂದಿಗೆ ಓದಿರಬೇಕು.
ಮೆಡಿಕಲ್ ಅಸಿಸ್ಟಂಟ್ ಟ್ರೇಡ್ (ಡಿಪ್ಲೊಮ / ಬಿಎಸ್ಸಿ ಇನ್ ಫಾರ್ಮಸಿ) ಹುದ್ದೆಗಳಿಗೆ 2001 ರ ಜನವರಿ 02 ರಿಂದ 2004 ರ ಜನವರಿ 02 ರ ನಡುವೆ ಜನಿಸಿರಬೇಕು.
ಅವಿವಾಹಿತ ಪುರುಷ ಅಭ್ಯರ್ಥಿಗಳು, ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಅಪ್ಲಿಕೇಶನ್ ಸಲ್ಲಿಸುವುದು ಹೇಗೆ?
– ವಾಯುಪಡೆಯ ಅಧಿಕೃತ ವೆಬ್‌ಸೈಟ್ ವಿಳಾಸ http://www.airmenselection.cdac.in ಗೆ ಭೇಟಿ ನೀಡಿ.
– ಮೇ 22 ರಂದು ‘Airmen’ ಹುದ್ದೆಗಳ ಅರ್ಜಿಗೆ ಆನ್‌ಲೈನ್ ಲಿಂಕ್ ಬಿಡುಗಡೆ ಆಗಿರುತ್ತದೆ.
– ಸದರಿ ಲಿಂಕ್ ಕ್ಲಿಕ್ ಮಾಡಿ. ಮೊದಲಿಗೆ ರಿಜಿಸ್ಟ್ರೇಷನ್ ಪಡೆಯಬೇಕು.
– ನಂತರ ಸವಿವರ ಮಾಹಿತಿ ನೀಡಿ, ಕೇಳಲಾದ ದಾಖಲೆಗಳ ಸಾಫ್ಟ್ ಕಾಪಿ ಅಪ್‌ಲೋಡ್ ಮಾಡಿ ಅರ್ಜಿ ಸಲ್ಲಿಸಿ.
ಭಾರತೀಯ ವಾಯುಪಡೆಯ ಏರ್‌ಮೆನ್ ಗ್ರೂಪ್ ವೈ ಹುದ್ದೆಗಳಿಗೆ ತರಬೇತಿ ಅವಧಿಯಲ್ಲಿ ಮಾಸಿಕ ರೂ.14,900 ಸ್ಟೈಫಂಡ್ ನೀಡಲಾಗುತ್ತದೆ. ತರಬೇತಿ ಉಗಿದ ನಂತರ ಮಿಲಿಟರಿ ಸೇವೆಗಳ ಬೇಸಿಕ್ ಪೇ ರೂ.26900 ಜತೆಗೆ ಇತರೆ ಭತ್ಯೆಗಳನ್ನು ನೀಡಲಾಗುತ್ತದೆ.
ನೇಮಕಾತಿ ಪ್ರಾಧಿಕಾರ : ಭಾರತೀಯ ವಾಯುಪಡೆ
ಹುದ್ದೆ ಹೆಸರು : ಏರ್‌ಮನ್ ಗ್ರೂಪ್ ವೈ (ನಾನ್ ಟೆಕ್ನಿಕಲ್) ಮೆಡಿಕಲ್ ಅಸಿಸ್ಟಂಟ್ ಟ್ರೇಡ್ ಹುದ್ದೆಗಳು.
ಹುದ್ದೆಗಳ ಸಂಖ್ಯೆ : ಮುಂದಿನ ದಿನಗಳಲ್ಲಿ ತಿಳಿಸಲಾಗುವುದು.
ಆಯ್ಕೆಯ ವಿಧಾನಗಳು : ಫಿಸಿಕಲ್ ಫಿಟ್‌ನೆಸ್, ಲಿಖಿತ ಪರೀಕ್ಷೆ, ಅಡಾಪ್ಟೆಬಿಲಿಟಿ ಟೆಸ್ಟ್, ವೈದ್ಯಕೀಯ ಪರೀಕ್ಷೆ.