ಬಾಗಲಕೋಟೆ
ಜಿಲ್ಲಾ ಉಸ್ತುವಾರಿ ಸಚಿವರ ನಿರ್ದೇಶನದ ಮೇರೆಗೆ ಜಿಲ್ಲೆಯಲ್ಲಿ ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಅಲ್ಪಸಂಖ್ಯಾತರ ಇಲಾಖೆಗಳಿಂದ ನಡೆಸಲ್ಪಡುವ ವಿವಿಧ ವಸತಿ ನಿಲಯಗಳ ಉಸ್ತುವಾರಿ ವಹಿಸಲು ತಾಲೂಕುವಾರು ನೋಡಲ್ ಅಧಿಕಾರಿಗಳನ್ನು ನೇಮಿಸಿ ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಆದೇಶ ಹೊರಡಿಸಿದ್ದಾರೆ.
ಬಾದಾಮಿ ಮತ್ತು ಗುಳೇದಗುಡ್ಡ ತಾಲೂಕಿಗೆ ಜಿಲ್ಲಾ ಪಂಚಾಯತ ಮುಖ್ಯ ಯೋಜನಾಧಿಕಾರಿಳು, ಬಾಗಲಕೋಟೆ ತಾಲೂಕಿಗೆ ಉಪ ವಿಭಾಗಾಧಿಕಾರಿಗಳು ಬಾಗಲಕೋಟೆ, ಹುನಗುಂದ ಮತ್ತು ಇಳಕಲ್ಲ ತಾಲೂಕಿಗೆ ಯೋಜನಾ ನಿರ್ದೇಶಕರು, ಜಿಲ್ಲಾ ಪಂಚಾಯತ, ಜಮಖಂಡಿ, ತೇರದಾಳ ಹಾಗೂ ರಬಕವಿ-ಬನಹಟ್ಟಿ ತಾಲೂಕಿಗೆ ಉಪವಿಭಾಗಾಧಿಕಾರಿಗಳು ಜಮಖಂಡಿ, ಮುಧೋಳ ತಾಲೂಕಿಗೆ ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕರು ಹಾಗೂ ಬೀಳಗಿ ತಾಲೂಕಿಗೆ ಶಾಲಾ ಶಿಕ್ಷಣ ಇಲಾಖೆಯ ಉಪನಿದೇಶಕರನ್ನು ನೇಮಿಸಿದ್ದಾರೆ.
ನೇಮಕಗೊಂಡ ನೋಡಲ್ ಅಧಿಕಾರಿಗಳು ಪ್ರತಿ 15 ದಿನಗಳಿಗೊಮ್ಮೆ ವಸತಿ ನಿಲಯಗಳಿಗೆ ಭೇಟಿ ನೀಡಿ ವಸತಿ ನಿಲಯಗಳಲ್ಲಿ ಇರುವ ಸೌಲಭ್ಯ, ಮಕ್ಕಳ ವಿದ್ಯಾಭ್ಯಾಸಕ್ಕೆ ಬೇಕಾಗುವ ವ್ಯವಸ್ಥೆ, ಆಹಾರದ ಗುಣಮಟ್ಟ ಹಾಗೂ ವಸತಿ ನಿಲಯಗಳ ಎಲ್ಲ ವಿಷಯಗಳನ್ನು ಕೂಲಂಕುಶವಾಗಿ ಪರಿಶೀಲಿಸಲಿದ್ದಾರೆ. ಯಾವುದೇ ಕುಂದು ಕೊರತೆಗಳು ಕಂಡು ಬಂದಲ್ಲಿ ಸಂಬAಧಪಟ್ಟ ಇಲಾಖೆಗಳಿಗೆ ಸಂಪರ್ಕಿಸಿ ಸಮಸ್ಯೆಯನ್ನು ಇತ್ಯರ್ಥ ಡಪಿಸಲು ಸೂಚಿಸಿದ್ದಾರೆ. ಭೇಟಿ ಕೊಟ್ಟ ವರದಿಯನ್ನು ಅಪರ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲು ಆದೇಶಿಸಿದ್ದಾರೆ.
ಗುಳೇದಗುಡ್ಡ ತಾಲೂಕಿನಲ್ಲಿ 5, ರಬಕವಿ-ಬನಹಟ್ಟಿ ತಾಲೂಕಿನಲ್ಲಿ 5, ಇಳಕಲ್ಲ ತಾಲೂಕಿನಲ್ಲಿ 8, ಜಮಖಂಡಿ ತಾಲೂಕಿನಲ್ಲಿ 25, ತೇರದಾಳ ತಾಲೂಕಿನಲ್ಲಿ 5, ಬಾದಾಮಿ ತಾಲೂಕಿನಲ್ಲಿ 29, ಬಾಗಲಕೋಟೆ ತಾಲೂಕಿನಲ್ಲಿ 49, ಬೀಳಗಿ ತಾಲೂಕಿನಲ್ಲಿ 22, ಮುಧೋಳ ತಾಲೂಕಿನಲ್ಲಿ 42, ಹುನಗುಂದ ತಾಲೂಕಿನಲ್ಲಿ 19 ಸೇರಿ ಒಟ್ಟು 209 ವಿವಿಧ ಇಲಾಖೆಯ ವಸತಿ ನಿಲಯಗಳು ಇದ್ದು, ಪ್ರತಿಯೊಂದು ವಸತಿ ನಿಲಯಕ್ಕೆ ತಲಾ ಒಬ್ಬರಂತೆ ಮೇಲ್ವಿಚಾರಣಾ ಅಧಿಕಾರಿಗಳನ್ನು ಸಹ ನೇಮಕ ಮಾಡಲಾಗಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.