This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

Crime NewsLocal NewsState News

ಬ್ಲ್ಯಾಕ್ ಆ್ಯಂಡ್ ವೈಟ್ ಮನಿ ದಂಧೆಕೋರರ ಬಂಧನ

ಬ್ಲ್ಯಾಕ್ ಆ್ಯಂಡ್ ವೈಟ್ ಮನಿ ದಂಧೆಕೋರರ ಬಂಧನ

ವಿಜಯಪುರ

ಬ್ಲ್ಯಾಕ್ ಆ್ಯಂಡ್ ವೈಟ್ ಮನಿ ನಾಲ್ವರು ದಂಧೆಕೋರರನ್ನು ಸಿಇಎನ್ ಠಾಣೆ ಪೊಲೀಸರು ಬಂಧಿಸಿ, ಅವರಿಂದ 19 ಲಕ್ಷ ರೂ. ನಗದು, ಕೃತ್ಯಕ್ಕೆ ಬಳಸಿದ ಕಾರು ಸೇರಿದಂತೆ ಒಟ್ಟು 22 ಲಕ್ಷ ರೂ. ವೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಸಂಗಣಕೇರಿ ಗ್ರಾಮದ ಲಕ್ಷ್ಮೀ ರಾಮಪ್ಪ ಕಂಕನವಾಡಿ (22), ಬೈಲಹೊಂಗಲ ತಾಲೂಕಿನ ಕೊಳದೂರ ಗ್ರಾಮದ ಈರಣ್ಣ ರುದ್ರಪ್ಪ ಕೌಜಲಗಿ (46), ಬೆಳಗಾವಿ ಹಲಗಾದ ಬಸ್ತಿ ಗಲ್ಲಿ ನಿವಾಸಿ ಅಪ್ಪಾಸಾಹೇಬ ಬಾಬು ಇಂಚಲ (66) ಹಾಗೂ ಚಿಕ್ಕೋಡಿಯ ಸುನೀಲ ಕಾಶೀನಾಥ ದೊಡಮನಿ (37) ಬಂಧಿತ ಆರೋಪಿಗಳಾಗಿದ್ದಾರೆ ಎಂದು ಎಸ್ಪಿ ಎಚ್.ಡಿ. ಆನಂದಕುಮಾರ ತಿಳಿಸಿದರು.

ಮಂಗಳವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಈ ನಾಲ್ವರು ಆರೋಪಿಗಳು, ಬ್ಲ್ಯಾಕ್ ಆ್ಯಂಡ್ ವೈನ್ ದಂಧೆ ಹೆಸರಿನಲ್ಲಿ ವಂಚನೆ ಮಾಡುವ ದುರುದ್ದೇಶದಿಂದ ಬಬಲೇಶ್ವರ ಪಟ್ಟಣದ ಚಂದ್ರಶೇಖರ ಕನ್ನೂರ ಎಂಬುವರಿಗೆ ಕರೆ ಮಾಡಿ, ನಿಮ್ಮ ಬಳಿಯಿರುವ ಬ್ಲ್ಯಾಕ್ ಮನಿಯನ್ನು ವೈಟ್ ಮನಿ ಮಾಡಿಕೊಡುವುದಾಗಿ ಸತಾಯಿಸುತ್ತಿದ್ದರು.

ಇದನ್ನು ನಂಬಿದ ಚಂದ್ರಶೇಖರ ಕನ್ನೂರ, ಮೊದಲಿಗೆ 5 ಸಾವಿರ ರೂ. ನೀಡುತ್ತಾನೆ. ಅದನ್ನು ವೈಟ್ ಮನಿ ಕೊಟ್ಟಿದ್ದೇವೆ ಎಂಬುದಾಗಿ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಾರೆ.
ಬಳಿಕ ಆ. 3 ರಂದು ನಾಲ್ವರು ಆರೋಪಿಗಳು ಕಾರಿನಲ್ಲಿ ಆಗಮಿಸಿ, ಅತಾಲಟ್ಟಿ ರಸ್ತೆಯಲ್ಲಿರುವ ರಾಮಕೃಷ್ಣ ಆಶ್ರಮದ ಬಳಿ ಚಂದ್ರಶೇಖರ ಕನ್ನೂರ ಅವರನ್ನು ಆಹ್ವಾನಿಸಿ, 20 ಲಕ್ಷ ರೂ. ಪಡೆದುಕೊಂಡು, ಖಾಲಿ ಕಾಗದ ಹಾಗೂ ನೋಟ್ ಬುಕ್ ಹಾಕಿ ಪ್ಯಾಕ್ ಮಾಡಿದ ರಟ್ಟಿನ ಬಾಕ್ಸ್ ತೋರಿಸಿ, ಅದರಲ್ಲಿ 1 ಕೋಟಿ ರೂ. ವೈಟ್ ಮನಿಯಿದೆ ಎಂದು ಸುಳ್ಳು ಕನ್ನೂರ ಕಡೆಯಿಂದ 20 ಲಕ್ಷ ರೂ. ಗಳನ್ನು ಪಡೆದು ವಂಚನೆ ಮಾಡಿದ್ದನ್ನು ಕನ್ನೂರು ಅವರು ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ ಸಿಇಎನ್ ಠಾಣೆ ಇನ್ಸಪೆಕ್ಟರ್ ರಮೇಶ ಅವಜಿ, ಆರೋಪಿಗಳ ಕುರಿತು ಟೆಕ್ನಿಕಲ್ ಎವಿಡೆನ್ಸ್‌ಗಳಾದ ಮೊಬೈಲ್ ಸಿಡಿಆರ್, ಲೋಕೇಶನ್ ಹಾಗೂ ಮೊಬೈಲ್ ಸಿಮ್ ಸಬ್‌ಸ್ಕ್ರೈಬರ್ ಮಾಹಿತಿ ಕಲೆ ಹಾಕಿದರು. ಬಳಿಕ ಖಚಿತ ಮಾಹಿತಿ ಆಧರಿಸಿ, ಆರೋಪಿಗಳು ಸೊಲ್ಲಾಪುರಕ್ಕೆ ಜೂಜಾಟಕ್ಕೆ ಹೊರಟಿದ್ದನ್ನು ಗಮನಿಸಿ, ನಗರದ ಜಮಖಂಡಿ ನಾಕಾ ಬಳಿಕ ಆರೋಪಿಗಳಿದ್ದ ಕಾರು ನಿಲ್ಲಿಸಿ, ಅವರನ್ನು ಠಾಣೆಗೆ ಕರೆತಂದು ವಿಚಾರಣೆಗೊಳಪಡಿಸಿದಾಗ, ಈ ಕೃತ್ಯ ಎಸಗಿದ್ದಾಗಿ ಬಾಯ್ಬಿಟ್ಟಿದ್ದಾರೆ ಎಂದು ಎಸ್ಪಿ ತಿಳಿಸಿದರು. ಬಂಧಿತ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ನೀಡಿದ್ದಾಗಿ ಎಸ್ಪಿ ತಿಳಿಸಿದರು.

*ಜಿಲ್ಲೆಗೆ ಭಾವುಕ ವಿದಾಯ ಹೇಳಿದ ಎಸ್ಪಿ*
ಎಸ್ಪಿ ಎಚ್. ಡಿ. ಆನಂದುಮಾರ ಅವರನ್ನು ಸರಕಾರ ವರ್ಗಾವಯಿಸಿದ್ದರಿಂದ ಅವರಿಗೆ ವಿಜಯಪುರದಲ್ಲಿ ಕೊನೆಯ ಸುದ್ದಿಗೋಷ್ಠಿಯಾಗಿತ್ತು. ಹೀಗಾಗಿ ಅವರು ಜಿಲ್ಲೆಯ ಜನತೆಗೆ ಭಾವುಕ ವಿದಾಯ ಹೇಳುವುದನ್ನು ಮರೆಯಲಿಲ್ಲ.

ಜನಸ್ನೇಹಿ ಪೊಲೀಸ್ ವ್ಯವಸ್ಥೆಗೆ ಜಿಲ್ಲೆಯ ಜನತೆ ನೀಡಿದ ಸಹಕಾರ ಸ್ಮರಿಸಿದರು. ಜಿಲ್ಲೆಯಲ್ಲಿ ಭೀಮಾ ತೀರದ ಕಾದಾಟಕ್ಕೆ ಬ್ರೇಕ್ ಹಾಕಿದ್ದೇನೆ. ಈ ಎಲ್ಲ ವ್ಯವಸ್ಥೆ ಜಾರಿಗೊಳ್ಳಲು ಸಹೋದ್ಯೋಗಿಗಳ ಸಹಕಾರ ಸಾಕಷ್ಟಿದೆ ಎಂದು ಸಹೋದ್ಯೋಗಿಗಳ ಸಹಕಾರವನ್ನು ಸ್ಮರಿಸಿದರು. ಜೊತೆಗೆ ಜಿಲ್ಲೆಯ ಜನತೆಯ ಸಹಕಾರ ಹಾಗೂ ಜಿಲ್ಲೆಯ ನಂಟನ್ನು ಸ್ಮರಿಸಿದರು.

ಜೊತೆಗೆ ಜಿಲ್ಲೆಯಲ್ಲಿ ಎರಡು ವರ್ಷಗಳ ಉತ್ತಮ ಸೇವೆ ಸಲ್ಲಿಸಲು ಹಾಗೂ ಇಲಾಖೆಯಲ್ಲಿ ಮಾಡಿದ ಕೆಲಸಗಳನ್ನು ಸ್ಮರಿಸಿ, ಮತ್ತೊಮ್ಮೆ ಜಿಲ್ಲೆಯ ಜನತೆಗೆ ಧನ್ಯವಾದಗಳನ್ನು ತಿಳಿಸಿದರು.

";