ಬಾಗಲಕೋಟೆ
ಮನುಷ್ಯನಿಗೆ ಯೋಗ, ಆಯುರ್ವೇದ ಮತ್ತು ಜ್ಯೋತಿಷ್ಯ ಬಹು ಅವಶ್ಯಕವಾಗಿದೆ ಎಂದು ಜ್ಯೋತಿಷ್ಯ ವಿದ್ವಾನ್ ಗಣೇಶ ಹೆಗಡೆ ಹೇಳಿದರು.
ವೀರಾಪೂರ ಪುನರ್ವಸತಿ ಕೇಂದ್ರದಲ್ಲಿ ಜ್ಯೋತಿಷ್ಯಿ ಜಗನ್ನಾಥ ದೇಶಪಾಂಡೆ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ಒಂದು ದಿನದ ಉಚಿತ ಜ್ಯೋತಿಷ್ಯ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ಜ್ಯೋತಿಷ್ಯದಿಂದ ಕರ್ಮದ ಪಾಪ ಕಳೆದುಕೊಳ್ಳಲು ಪರಿಹಾರ ಮತ್ತು ಶಿಬಿರಾರ್ಥಿಗಳಿಗೆ ಕುಂಡಲಿ ರಚನೆ, ವಧು-ವರರ ಸಾಲಾವಳಿ, ವಾಸ್ತುಹಸ್ತದ ಬಗ್ಗೆ ಹಾಗೂ ಮನುಷ್ಯನಿಗೆ ಜ್ಯೋತಿಷ್ಯ ಎಷ್ಟು ಮುಖ್ಯ ಎನ್ನುವುದು ಕುರಿತು ವಿವರಿಸಿದರು.
ಶಿಬಿರದ ಅಧ್ಯಕ್ಷತೆ ವಹಿಸಿದ್ದ ಜ್ಯೋತಿಷ್ಯಿ ಜಗನ್ನಾಥ ದೇಶಪಾಂಡೆ, ಜನ್ಮಾಂತರ ಕರ್ಮ ಜನ್ಮ ಪಾಪವನ್ನು ಕುಂಡಲಿ ತೋರಿಸುತ್ತದೆ. ಅವುಗಳನ್ನು ಒಳ್ಳೆಯ ವಿದ್ವಾಂಸರಿಂದ ತಿಳಿದು ಪರಿಹಾರಕ್ಕೆ ಪ್ರಯತ್ನಿಸಬೇಕೆಂದರು.
ಸನ್ಮತಿ ದೇಶಪಾಂಡೆ, ಕಮತಗಿಯ ಜ್ಯೋತಿಷ್ಯಿ ಮಾರುತಿ ಚಿತ್ರಗಾರ, ಭರತ ಬಾರಕೇರ, ಮುತ್ತು ಗಡಗಡೆ, ಜಯತೀರ್ಥ ದೇಶಪಾಂಡೆ, ರಾಜು ಹೊಸೂರ, ವೃಷಭ ಹೂವನ್ನವರ್, ಮಂಜು ಇತರರು ಇದ್ದರು.